ETV Bharat / bharat

ಲಾಕ್​ಡೌನ್​ ವಿಸ್ತರಣೆ ಮಾಡಲು ನಮೋ ನಿರ್ಧಾರ... ಟ್ವೀಟ್​ ಮಾಡಿ ಸುಳಿವು ನೀಡಿದ ಕೇಜ್ರಿವಾಲ್!​ - ಪ್ರಧಾನಿ ಮೋದಿ ಲಾಕ್​ಡೌನ್​

ದೇಶದಲ್ಲಿ ಮುಂದಿನ 15 ದಿನಗಳ ಕಾಲ ಲಾಕ್​ಡೌನ್​ ಮುಂದುವರಿಯುವುದು ಬಹುತೇಕ ಖಚಿತಗೊಂಡಿದ್ದು, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್​ ಟ್ವೀಟ್ ಮಾಡಿ ಮಹತ್ವದ ನಿರ್ಧಾರ ಹೊರಹಾಕಿದ್ದಾರೆ.

Arvind Kejriwal
Arvind Kejriwal
author img

By

Published : Apr 11, 2020, 4:54 PM IST

ನವದೆಹಲಿ: ದೇಶದಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ಮುಂದುವರಿಯುವುದು ಬಹುತೇಕ ಖಚಿತಗೊಂಡಿದ್ದು, ಪ್ರಧಾನಿ ಮೋದಿ ರಾತ್ರಿ 8ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿ ಇದೇ ವಿಷಯ ಹೊರಹಾಕಲಿದ್ದಾರೆ ಎಂದು ಟ್ವೀಟ್​ ಮೂಲಕ ಸುಳಿವು ನೀಡಿದ್ದಾರೆ.

ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಮೋ ವಿಡಿಯೋ ಸಂವಾದದ​ ಮೂಲಕ ಮಾತನಾಡಿ ಮಹತ್ವದ ಮಾಹಿತಿ ಪಡೆದುಕೊಂಡಿದ್ದು, ಈ ವೇಳೆ ಅನಿವಾರ್ಯವಾಗಿ ಲಾಕ್​ಡೌನ್​ ವಿಸ್ತರಣೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

  • PM has taken correct decision to extend lockdown. Today, India’s position is better than many developed countries because we started lockdown early. If it is stopped now, all gains would be lost. To consolidate, it is imp to extend it

    — Arvind Kejriwal (@ArvindKejriwal) April 11, 2020 " class="align-text-top noRightClick twitterSection" data=" ">

ಇದೇ ವಿಷಯವಾಗಿ ಟ್ವೀಟ್ ಮೂಲಕ ಮಾಹಿತಿ ಹೊರಹಾಕಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಪ್ರಧಾನಿ ಮೋದಿ ಲಾಕ್​ಡೌನ್​ ವಿಸ್ತರಣೆ ಮಾಡುವ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತಲೂ ನಮ್ಮ ಸ್ಥಿತಿ ಉತ್ತಮವಾಗಿದೆ. ಇದಕ್ಕೆ ಕಾರಣ ನಾವು ಮುಂಚಿತವಾಗಿ ಲಾಕ್​ಡೌನ್​ ಘೋಷಣೆ ಮಾಡಿರುವುದು. ತಕ್ಷಣ ಲಾಕ್​ಡೌನ್​ ಹಿಂದಕ್ಕೆ ಪಡೆದುಕೊಂಡರೆ ಎಲ್ಲವೂ ಹಾಳಾಗಲಿದ್ದು, ನಡು ನೀರಿನಲ್ಲಿ ಕೊಚ್ಚಿಕೊಂಡ ಹೋದಂತೆ ಆಗಲಿದೆ. ಎಲ್ಲವನ್ನೂ ಉಳಿಸಿಕೊಳ್ಳಬೇಕಾದರೆ ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿಯಲ್ಲಿ 900ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಸಿಕ್ಕಿರುವ ಕಾರಣ ಅನಿವಾರ್ಯವಾಗಿ ನಾವು ಲಾಕ್​ಡೌನ್​ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಯಾವುದೇ ಕಾರಣಕ್ಕೂ ರೈಲು, ಬಸ್​ ಸಂಚಾರ ಆರಂಭಿಸದಂತೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.