ನವದೆಹಲಿ: ಐದನೇ ಬಾರಿಗೆ ಅಧಿಕಾರಕ್ಕೇರಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ವಿಶ್ವವು ಕೋವಿಡ್ ಮುಕ್ತವಾದ ಬಳಿಕ ಭಾರತ ಹಾಗೂ ಇಸ್ರೇಲ್ ಸಹಯೋಗ ಮುಂದುವರಿಸುವ ಕುರಿತಂತೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ದಾಖಲೆಯ ಐದನೇ ಬಾರಿಗೆ ಪ್ರಧಾನಿಯಾಗಿರುವುದಕ್ಕೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಇಸ್ರೇಲ್ ಸಹಭಾಗಿತ್ವವು ಮತ್ತಷ್ಟು ಸದೃಢವಾಗಲಿದೆ' ಎಂದು ಟ್ವೀಟ್ ಮಾಡಿದೆ.
-
Had an excellent conversation with my friend PM @netanyahu about how India-Israel can collaborate in the post-COVID world. Also congratulated him for assuming the Prime Ministerial office for a record 5th time! India-Israel partnership will grow ever stronger in the days to come.
— Narendra Modi (@narendramodi) June 10, 2020 " class="align-text-top noRightClick twitterSection" data="
">Had an excellent conversation with my friend PM @netanyahu about how India-Israel can collaborate in the post-COVID world. Also congratulated him for assuming the Prime Ministerial office for a record 5th time! India-Israel partnership will grow ever stronger in the days to come.
— Narendra Modi (@narendramodi) June 10, 2020Had an excellent conversation with my friend PM @netanyahu about how India-Israel can collaborate in the post-COVID world. Also congratulated him for assuming the Prime Ministerial office for a record 5th time! India-Israel partnership will grow ever stronger in the days to come.
— Narendra Modi (@narendramodi) June 10, 2020
ಇನ್ನು ಫೋನ್ ಸಂಭಾಷಣೆ ಮೂಲಕ ಉಭಯ ನಾಯಕರು ಕೋವಿಡ್-19 ಸಂಬಂಧ ಲಸಿಕೆಗಳು, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಸಂಬಂಧ ಪರಸ್ಪರ ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರ ವಿಸ್ತರಣೆ ಬಗ್ಗೆ ಚರ್ಚಿಸಿದರು ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, ಆರೋಗ್ಯ ತಂತ್ರಜ್ಞಾನ, ಕೃಷಿ ನಾವೀನ್ಯತೆ, ರಕ್ಷಣಾ-ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಸಹಯೋಗವನ್ನು ವಿಸ್ತರಿಸುವುದು. ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಉದಯೋನ್ಮುಖ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪರಸ್ಪರ ಸಮಾಲೋಚಿಸಲು ಸದಾ ಸಂಪರ್ಕದಲ್ಲಿರಲು ಉಭಯ ನಾಯಕರು ಸಹಮತ ಸೂಚಿಸಿದರು.