ETV Bharat / bharat

ರೈತರಿಗೆ ಎಲ್ಲಿ ಒಳ್ಳೆ ಬೆಲೆ ಸಿಗುತ್ತೋ ಅಲ್ಲಿಯೇ ಬೆಳೆ ಮಾರಿದ್ರೆ ತಪ್ಪೇನಿದೆ? ವಿಪಕ್ಷಗಳಿಗೆ ನಮೋ ಪ್ರಶ್ನೆ - ಬಂಗಾಳ ರೈತರು

ಹಿಂದಿನ ಸರ್ಕಾರದ ಕೃಷಿ ನೀತಿಗಳಿಂದಾಗಿ ಬಡವರು ಬಡವರಾದರು. ಈ ರೈತರ ಸ್ಥಿತಿ ಬದಲಾಯಿಸುವುದು ಮುಖ್ಯವಲ್ಲವೇ? ಇಂದು ಪ್ರತಿಯೊಬ್ಬ ರೈತನು ತನ್ನ ಕೃಷಿ ಉತ್ಪನ್ನಗಳಿಗೆ ಎಲ್ಲಿ ಉತ್ತಮ ಬೆಲೆ ಸಿಗಬಹುದು ಎಂಬುದು ತಿಳಿದಿದೆ. ಈ ಕೃಷಿ ಸುಧಾರಣೆಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾರಿಗಾದರೂ ಮಾರಾಟ ಮಾಡಬಹುದು. ರೈತರಿಗೆ ಲಾಭವಾಗುತ್ತಿದ್ದರೆ ತಪ್ಪೇನಿದೆ ಎಂದು ಪ್ರಧಾನಿ ಮೋದಿ ಪ್ರತಿ ಪಕ್ಷಗಳನ್ನು ಪ್ರಶ್ನಿಸಿದರು.

Modi
ಮೋದಿ
author img

By

Published : Dec 25, 2020, 4:07 PM IST

ನವದೆಹಲಿ: ರೈತರನ್ನು ದಾರಿ ತಪ್ಪಿಸಿ ಹೊಸ ಕೃಷಿ ಕಾನೂನುಗಳ ಬಗ್ಗೆ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ರೈತರ ಹೆಸರಿನಲ್ಲಿ ಆರ್ಥಿಕ ನೀತಿಯನ್ನು (ಅರ್ಥ ನೀತಿ) ನಾಶಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಪಿಎಂ ಕಿಸಾನ್ ಯೋಜನೆಯಡಿ ಅನುದಾನದ ಕಂತು ಬಿಡುಗಡೆ ಮಾಡಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿರೋಧ ಪಕ್ಷಗಳು ದೇಶದ ಮುಂದೆ ತಾವು ಏನೆಂಬುದನ್ನು ಅರ್ಥ ಮಾಡಿಸುತ್ತಿವೆ. ಮತದಾರರು ತಿರಸ್ಕರಿಸಿದವರು ಈಗ ಪ್ರಚಾರಕ್ಕಾಗಿ ಈವೆಂಟ್ ನಿರ್ವಹಣೆಯಲ್ಲಿ ತೊಡಗಿದ್ದಾರೆ. ದೇಶದ ಜನರು ಇವರನ್ನು ನೋಡುತ್ತಿದ್ದಾರೆ. ಪಶ್ಚಿಮ ಬಂಗಾಳದ ರೈತರಿಗೆ ಅನ್ಯಾಯದ ಬಗ್ಗೆ ಏನನ್ನೂ ಹೇಳದ ಪಕ್ಷವೊಂದು ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ನಿರತವಾಗಿದೆ. ದೆಹಲಿಯ ಜನರು ಮತ್ತು ರೈತರ ಹೆಸರಿನಲ್ಲಿ ಆರ್ಥಿಕತೆಯನ್ನು (ಅರ್ಥ್ ನೀತಿ) ನಾಶಪಡಿಸುತ್ತಿದ್ದಾರೆ ಎಂದು ಹೇಳಿದರು.

ಮಂಡಿಗಳು ಮತ್ತು ಎಪಿಎಂಸಿ ಬಗ್ಗೆ ಮಾತನಾಡುವ ಗುಂಪುಗಳೇ ಪಶ್ಚಿಮ ಬಂಗಾಳ ಮತ್ತು ಕೇರಳವನ್ನು ನಾಶಪಡಿಸಿದವು ಎಂದು ಮೋದಿ ಟೀಕಿಸಿದರು.

ಕೇರಳದಲ್ಲಿ ಎಪಿಎಂಸಿ ಮತ್ತು ಮಂಡಿಗಳೇ ಇಲ್ಲ. ಕೇರಳವನ್ನು ಆಳುತ್ತಿರುವವರು ಸ್ವಹಿತಕ್ಕಾಗಿ ಪಂಜಾಬ್ ರೈತರೊಂದಿಗೆ ಸೇರುತ್ತಿದ್ದಾರೆ. ಆದರೆ, ತಮ್ಮದೇ ರಾಜ್ಯದಲ್ಲಿ ಮಂಡಿ ವ್ಯವಸ್ಥೆಗೆ ಏನನ್ನೂ ಮಾಡುತ್ತಿಲ್ಲ. ಪಂಜಾಬ್‌ನ ರೈತರನ್ನು ದಾರಿ ತಪ್ಪಿಸಲು ಅವರಿಗೆ ಸಮಯವಿದೆ. ಇದು ತುಂಬಾ ಉತ್ತಮವಾಗಿದ್ದರೆ ಅವರು ಏಕೆ ಕೇರಳದಲ್ಲಿ ಅದನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿಲ್ಲ? ಸುಳ್ಳು ಆರೋಪಗಳನ್ನು ಹೊರಿಸುತ್ತಾ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ರೈತರಲ್ಲಿ ಭಯವನ್ನು ಉಂಟುಮಾಡಿ ಅವರನ್ನು ದಾರಿ ತಪ್ಪಿಸುತ್ತಾರೆ. ಕೆಲವೊಮ್ಮೆ ರೈತರು ಅವರಿಂದ ತಪ್ಪುದಾರಿಗೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಇರೋತನಕ ಯಾವುದೇ ಕಂಪನಿ ರೈತರ ಭೂಮಿ ಕಿತ್ತುಕೊಳ್ಳೋಕೆ ಸಾಧ್ಯವೇ ಇಲ್ಲ: ಅಮಿತ್ ಶಾ

ಹಿಂದಿನ ಸರ್ಕಾರದ ಕೃಷಿ ನೀತಿಗಳಿಂದಾಗಿ ಬಡವರು ಬಡವರಾದರು. ಈ ರೈತರ ಸ್ಥಿತಿ ಬದಲಾಯಿಸುವುದು ಮುಖ್ಯವಲ್ಲವೇ? ಇಂದು ಪ್ರತಿಯೊಬ್ಬ ರೈತನು ತನ್ನ ಕೃಷಿ ಉತ್ಪನ್ನಗಳಿಗೆ ಎಲ್ಲಿ ಉತ್ತಮ ಬೆಲೆ ಸಿಗಬಹುದು ಎಂಬುದು ತಿಳಿದಿದೆ. ಈ ಕೃಷಿ ಸುಧಾರಣೆಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾರಿಗಾದರೂ ಮಾರಾಟ ಮಾಡಬಹುದು. ರೈತರಿಗೆ ಲಾಭವಾಗುತ್ತಿದ್ದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಹಾಗೂ ರೈತರ ಸೇವಾ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.