ETV Bharat / bharat

ಎಸ್​ಪಿಬಿ ಆರೋಗ್ಯದಲ್ಲಿ ಸ್ಥಿರತೆ: ಯುಎಸ್​, ಯುಕೆ ವೈದ್ಯರಿಂದಲೂ ಚಿಕಿತ್ಸೆ

ಕಳೆದ 16 ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಹುಭಾಷಾ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

SP Balasubrahmanyam
SP Balasubrahmanyam
author img

By

Published : Aug 22, 2020, 7:40 PM IST

ಚೆನ್ನೈ: ಕೊರೊನಾ ವೈರಸ್​​ನಿಂದಾಗಿ ಚೆನ್ನೈನ ಎಂಜಿಎಂ ಹೆಲ್ತ್​ ಕೇರ್​​​ನಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯದಲ್ಲಿ ಕಳೆದ ಎರಡು ದಿನಗಳಿಂದ ಸ್ಥಿರತೆ ಇದೆ ಎಂದು ಹೆಲ್ತ್​ ಬುಲೆಟಿನ್​ ರಿಲೀಸ್​ ಆಗಿದೆ.

SP Balasubrahmanyam
ಹೆಲ್ತ್​ ಬುಲೆಟಿನ್​ ರಿಲೀಸ್​

ಆಗಸ್ಟ್​ 5ರಂದು ಅಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಆಗಸ್ಟ್​ 13ರಂದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ವೆಂಟಿಲೇಟರ್​ ಹಾಗೂ ಎಕ್ಮೋ ಮಷಿನ್​ನಲ್ಲಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಆಸ್ಪತ್ರೆಯ ನುರಿತ ಸಿಬ್ಬಂದಿಗಳ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಯುಎಸ್​ ಹಾಗೂ ಯುಕೆ ವೈದ್ಯರಿಂದಲೂ ಸೂಕ್ತ ಮಾಹಿತಿ ಪಡೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.