ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾಗಿ ಸುಮಾರು 50 ಮಂದಿಯನ್ನ ಬಲಿ ಪಡೆದಿದೆ. ಇದರ ಬೆನ್ನಲ್ಲೇ ಅಂತರರಾಷ್ಟ್ರೀಯ ಕಚ್ಚಾ ತೈಲ ದರಗಳು ತೀವ್ರವಾಗಿ ಕುಸಿದಿವೆ. ಇದರ ಪರಿಣಾಮ ಇಂದು ಇಂಧನ ಬೆಲೆ ಮತ್ತಷ್ಟು ಇಳಿಕೆಯಾಗಿದೆ.
ಭಾರತದ ಹಲವು ನಗರಗಳಲ್ಲಿ ಲೀಟರ್ ಪೆಟ್ರೋಲ್ಗೆ 27 ಪೈಸೆ ಹಾಗೂ ಡೀಸೆಲ್ಗೆ 30 ಪೈಸೆ ಕಡಿತವಾಗಿದೆ. ಬೆಲೆ ಇಳಿಕೆಯ ಬಳಿಕ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 74.16 ರೂ, ಮುಂಬೈನಲ್ಲಿ 76.76 ರೂ, ಕೋಲ್ಕತ್ತಾದಲ್ಲಿ 76.77, ಬೆಂಗಳೂರಲ್ಲಿ 76.64 ರೂ. ಹಾಗೂ ಚೆನ್ನೈನಲ್ಲಿ 77.03 ರೂಪಾಯಿ ಇದೆ. ಡೀಸೆಲ್ ಬೆಲೆ ದೆಹಲಿಯಲ್ಲಿ 67.31 ರೂ, ಮುಂಬೈನಲ್ಲಿ 70.56 ರೂ, ಕೋಲ್ಕತ್ತಾದಲ್ಲಿ 69.67 ರೂ., ಬೆಂಗಳೂರಲ್ಲಿ 69.55 ರೂ. ಹಾಗೂ ಚೆನ್ನೈನಲ್ಲಿ 71.11 ರೂ. ಇರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.

ಚೀನಾದಲ್ಲಿ ಏಕಾಏಕಿ ಮಾರಣಾಂತಿಕ ಕೊರೊನಾ ವೈರಸ್ ಹರಡಿದ ಪರಿಣಾಮ ಈ ಮೊದಲು ಪ್ರತಿ ಬ್ಯಾರೆಲ್ಗೆ 62.07 ಡಾಲರ್ ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ. 2.43 ರಷ್ಟು ಕುಸಿತ ಕಂಡಿದೆ. ಇದೀಗ ಪ್ರತಿ ಬ್ಯಾರೆಲ್ಗೆ 60.56 ಡಾಲರ್ಗೆ ಇಳಿಕೆಯಾಗಿದೆ.