ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ 80 ದಿನಗಳ ನಂತರ ಇಂಧನ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳವಾಗಿದೆ.
ಮಾರ್ಚ್ 16 ರಂದು ಇಂಧನ ಬೆಲೆಗಳನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಆದರೆ ಕೆಲವು ರಾಜ್ಯ ಸರ್ಕಾರಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅಥವಾ ಸೆಸ್ ಅನ್ನು ಹೆಚ್ಚಿಸಿದ್ದವು.
ಲಾಕ್‌ಡೌನ್ ವೇಳೆಯಲ್ಲಿ ಅನೇಕ ರಾಜ್ಯಗಳು ಇಂಧನ ದರದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೂ, ಇದೇ ಮೊದಲ ಬಾರಿಗೆ ದೇಶದಾದ್ಯಂತ ಬೆಲೆ ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿ ಇಂಧನ ಬೆಲೆ:
ಬೆಂಗಳೂರು: ಪೆಟ್ರೋಲ್ 74.18 ರೂ. ಮತ್ತು ಡೀಸೆಲ್ 66.54 ರೂ.
ನವದೆಹಲಿ: ಪೆಟ್ರೋಲ್ 71.86 ರೂ. ಮತ್ತು ಡೀಸೆಲ್ 69.99 ರೂ.
ಮುಂಬೈ: ಪೆಟ್ರೋಲ್ 78.91 ರೂ. ಮತ್ತು ಡೀಸೆಲ್ 68.79 ರೂ.
ಚೆನ್ನೈ: ಪೆಟ್ರೋಲ್ 76.07 ರೂ. ಮತ್ತು ಡೀಸೆಲ್ 68.74 ರೂ.
ಹೈದರಾಬಾದ್: ಪೆಟ್ರೋಲ್ 74.61 ರೂ. ಮತ್ತು ಡೀಸೆಲ್ 68.42 ರೂ.