ನವದೆಹಲಿ : ಸತತ 20 ದಿನಗಳಿಂದ ಒಂದೇ ಸಮನೇ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇದು ನಿಲ್ಲುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಮಾರ್ಚ್ - ಏಪ್ರಿಲ್ನಲ್ಲಿ ಕಚ್ಚಾತೈಲ ಬೆಲೆ ಪಾತಾಳಕ್ಕಿಳಿದರೂ ದರ ಇಳಿಸುವ ಕ್ರಮಕ್ಕೆ ಮುಂದಾಗದ ತೈಲ ಕಂಪನಿಗಳು ಈಗ ಮಾತ್ರ ಗ್ರಾಹಕರ ಜೀವ ಹಿಂಡುತ್ತಿವೆ. ಅತ್ತ ಕೇಂದ್ರ ಸರ್ಕಾರ ಜನಪರ ಕಾಳಜಿ ಮರೆತು ಬಡ ವಾಹನ ಸವಾರರ ಮೇಲೆ ಸವಾರಿ ಮಾಡುತ್ತಿದೆ. ಇದು ಹೀಗೆ ಮುಂದುವರೆದರೆ ಹೇಗೆ ಎಂಬ ತಣ್ಣನೇ ಆಕ್ರೋಶ ದೇಶಾದ್ಯಂತ ನಿಧಾನವಾಗಿ ಏರಿಕೆ ಆಗುತ್ತಿದೆ.
20 ನೇ ದಿನವೂ ತೈಲಬೆಲೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ಗೆ 21 ಪೈಸೆ ಹಾಗೂ ಡಿಸೇಲ್ನ ಬೆಲೆಯಲ್ಲಿ 17 ಪೈಸೆಯನ್ನು ಹೆಚ್ಚಿಸಿವೆ.
ಪೆಟ್ರೋಲ್ನ ಬೆಲೆ ದೆಹಲಿಯಲ್ಲಿ ಲೀಟರ್ಗೆ 80.13 ರೂಪಾಯಿ ಹಾಗೂ ಡೀಸೆಲ್ಗೆ 80.19 ರೂಪಾಯಿಯಷ್ಟಿದೆ. ಮುಂದಿನ ದಿನಗಳಲ್ಲೂ ಕೂಡಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ