ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ಧುಪಡಿಸುವುದಕ್ಕೂ ಒಂದು ದಿನ ಮುಂಚಿತವಾಗಿ ಬಂಧನವಾಗಿದ್ದ ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೊನೆಗೂ ರಿಲೀಸ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರನ್ನ ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪಿಡಿಪಿ ಮುಖಂಡೆ ಮೆಹಬೂಬಾ ಮುಫ್ತಿ ಹಾಗೂ ಫಾರೂಖ್ ಅಬ್ದುಲ್ಲಾ ಸೇರಿ ಅನೇಕ ರಾಜಕೀಯ ಮುಖಂಡನ್ನ 2019 ಆಗಸ್ಟ್ 5ರಂದು ಬಂಧನ ಮಾಡಲಾಗಿತ್ತು. ಇದೇ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸುಪ್ರೀಂಕೋರ್ಟ್ ಎಷ್ಟು ದಿನ ಅವರನ್ನ ಬಂಧನದಲ್ಲಿಡುತ್ತೀರಿ ಎಂದು ಪ್ರಶ್ನೆ ಮಾಡಿತ್ತು.
-
Ms. Mehbooba Mufti being released @dipr
— Rohit Kansal (@kansalrohit69) October 13, 2020 " class="align-text-top noRightClick twitterSection" data="
">Ms. Mehbooba Mufti being released @dipr
— Rohit Kansal (@kansalrohit69) October 13, 2020Ms. Mehbooba Mufti being released @dipr
— Rohit Kansal (@kansalrohit69) October 13, 2020
ಮೆಹಬೂಬಾ ಮುಫ್ತಿ ಅವರನ್ನ ಬಂಧನಲ್ಲಿಟ್ಟಿರುವ ವಿಚಾರ ಪ್ರಶ್ನೆ ಮಾಡಿ ಅವರ ಮಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಸುಪ್ರೀಂ ಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿತು. ಅವರನ್ನ ರಿಲೀಸ್ ಮಾಡಿರುವ ವಿಚಾರವನ್ನ ಜಮ್ಮು-ಕಾಶ್ಮೀರ ಆಡಳಿತ ವಕ್ತಾರ ರೋಹಿತ್ ಕನ್ಸಾಲ್ ಬಹಿರಂಗಗೊಳಿಸಿದ್ದಾರೆ.