ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಮುನ್ನಡೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದ್ದು, ಪವರ್ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಕೂಡ ಮುಖಭಂಗ ಅನುಭವಿಸಿದೆ.
ನೂತನ ಪಕ್ಷ ಸ್ಥಾಪನೆ ಮಾಡಿ ಆಂಧ್ರದಲ್ಲಿ ಭಾರಿ ಹವಾ ಕ್ರಿಯೇಟ್ ಮಾಡಿದ್ದ ಪವನ್ ಕಲ್ಯಾಣ್ ಅಣ್ಣನಂತೆ ಪ್ಲಾಪ್ ಶೋ ನಡೆಸಿದ್ದಾರೆ. ಇಲ್ಲಿಯವರೆಗೆ ಜನಸೇನಾ ಪಾರ್ಟಿ ಖಾತೆರೆಯುವಲ್ಲಿ ವಿಫಲವಾಗಿದೆ.
ಇನ್ನೊಂದೆಡೆ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದ ಚಂದ್ರಬಾಬು ನಾಯ್ಡು ವೈಎಸ್ಆರ್ ಕಾಂಗ್ರೆಸ್ ಹೋರಾಟದ ಮುಂದೆ ಮಂಕಾಗಿದ್ದು, ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
-
Andhra Pradesh Chief Minister N Chandrababu Naidu is likely to tender his resignation later today https://t.co/zmT3JAOcdZ
— ANI (@ANI) May 23, 2019 " class="align-text-top noRightClick twitterSection" data="
">Andhra Pradesh Chief Minister N Chandrababu Naidu is likely to tender his resignation later today https://t.co/zmT3JAOcdZ
— ANI (@ANI) May 23, 2019Andhra Pradesh Chief Minister N Chandrababu Naidu is likely to tender his resignation later today https://t.co/zmT3JAOcdZ
— ANI (@ANI) May 23, 2019
ಕಳೆದ ಭಾರಿ ಚಂದ್ರಬಾಬು ನಾಯ್ಡು ಜೊತೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಒಂದಿಷ್ಟು ಸ್ಥಾನ ಪಡೆದ ಬಿಜೆಪಿ ಈ ಬಾರಿ ಅಲ್ಲಿ ಸೊನ್ನೆ ಸುತ್ತಿದೆ. ಇನ್ನೊಂದೆಡೆ, ಕಾಂಗ್ರೆಸ್ ಸಹ ಖಾತೆ ತೆರೆಯಲು ವಿಫಲವಾಗಿದೆ. ಎರಡೂ ರಾಜಕೀಯ ಪಕ್ಷಗಳು ಆಂಧ್ರದಲ್ಲಿ ಮಕಾಡೆ ಮಲಗಿವೆ.