ETV Bharat / bharat

ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ನೆರವು ನೀಡಿ: ಮೇಧಾ ಪಾಟ್ಕರ್

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೆ ಲಾಕ್‌​ ಡೌನ್​​ ವಿಧಿಸಿದ್ದಾರೆ. ಎರಡು ಸರ್ಕಾರಗಳ ಮಧ್ಯೆ ಯಾವುದೇ ಸಮನ್ವಯವಿಲ್ಲ ಎಂದು ನರ್ಮದಾ ಬಚಾವೊ ಆಂದೋಲನ ಕಾರ್ಯಕರ್ತೆ ಆರೋಪಿಸಿದರು.

author img

By

Published : May 5, 2020, 3:28 PM IST

Patkar demands aid from PM Cares Fund for stranded labourers
ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್

ಬಾರ್ವಾನಿ: ಲಾಕ್‌ಡೌನ್​​ನಿಂದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಸಬೇಕೆಂದು ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ಪ್ರತಿಭಟನೆ ಮೂಲಕ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಲಾಕ್‌ಡೌನ್​​ ವಿಧಿಸಿದ್ದಾರೆ. ಎರಡು ಸರ್ಕಾರಗಳ ಮಧ್ಯೆ ಯಾವುದೇ ಸಮನ್ವಯವಿಲ್ಲ ಎಂದು ನರ್ಮದಾ ಬಚಾವೊ ಆಂದೋಲನದ ಕಾರ್ಯಕರ್ತೆ ಆರೋಪಿಸಿದರು.

"ಕಾರ್ಮಿಕರು ಯಾವುದೇ ಸಂಬಳವನ್ನು ತೆಗೆದುಕೊಳ್ಳದೆ ತಮ್ಮ ಮನೆಗಳನ್ನು ತೊರೆದಿದ್ದಾರೆ. ಅವರ ಉಳಿವಿಗಾಗಿ ಅವರಿಗೆ ಆಹಾರ ಧಾನ್ಯಗಳನ್ನು ನೀಡಬೇಕು. ಉಚಿತವಲ್ಲದಿದ್ದರೂ ಕಡಿಮೆ ದರದಲ್ಲಿಯಾದರೂ ನೀಡಿ" ಎಂದು ಅವರು ಹೇಳಿದರು.

"ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಸಹಾಯಕರಾಗಿ ಸಂಚರಿಸುತ್ತಿದ್ದಾರೆ. ಅವರು ಶ್ರಮವಹಿಸಿ ತಯಾರಿಸದ ಉತ್ಪನ್ನಗಳನ್ನು ಸಾಗಿಸುವ ಟ್ರಕ್‌ಗಳಲ್ಲಿಯೂ ಅವರಿಗೆ ಸ್ಥಳಾವಕಾಶವಿಲ್ಲ. ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥೆಗಳನ್ನು ಕಾರ್ಮಿಕರಿಗೂ ಸಹ ಮಾಡಬೇಕು, ಆದರೆ ಈ ದೇಶದಲ್ಲಿ ಅಂತಹ ಸರಳ ತಿಳುವಳಿಕೆಯೆ ಇಲ್ಲ" ಎಂದರು.

ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಧಾನ ಮಂತ್ರಿ ಪರಿಹಾರ ನೀಧಿಯಿಂದ ನೆರವು ನೀಡಬೇಕು ಎಂದು ಮೇದಾ ಪಾಟ್ಕರ್ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.