ಬಿಲಾಸ್ಪುರ್ (ಹಿಮಾಚಲ ಪ್ರದೇಶ): ಬಿಲಾಸ್ಪುರ್ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹೂವಿನ ದಳಗಳನ್ನು ಹಾಕಲು ಪ್ರಯತ್ನಿಸುತ್ತಿದ್ದಾಗ ಪ್ಯಾರಾಗ್ಲೈಡರ್ ಅಪಘಾತಕ್ಕೀಡಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಲಾಸ್ಪುರ್ ಎಸ್‌ಪಿ ಸಾಕ್ಷಿ ವರ್ಮಾ, ‘ಬಿಲಾಸ್ಪುರ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಸ್ಥಳೀಯ ಆಡಳಿತವು ವೃತ್ತಿಪರ ಪ್ಯಾರಾಗ್ಲೈಡರ್ ಅನ್ನು ನಿಯೋಜಿಸಿತ್ತು. ಸಾಂಸ್ಕೃತಿಕ ಪ್ರದರ್ಶನಗಳ ಸಮಯದಲ್ಲಿ, ಪ್ಯಾರಾಗ್ಲೈಡರ್ ಹೂವಿನ ದಳಗಳನ್ನು ಸುರಿಸುತ್ತಿದ್ದರು. ಈ ವೇಳೆ ಗಾಳಿಯ ಒತ್ತಡದಿಂದಾಗಿ ಅಪಘಾತಕ್ಕೊಳಗಾದರು. ಅವರು ಸುರಕ್ಷಿತರಾಗಿದ್ದಾರೆ’ ಎಂದು ಹೇಳಿದರು.
ನಂತರ ಈ ಪ್ಯಾರಾಗ್ಲೈಡರ್ನ್ನು ರಾಜ್ಯ ತೋಟಗಾರಿಕೆ ಸಚಿವ ಮಹೇಂದ್ರ ಸಿಂಗ್ ಠಾಕೂರ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಗೌರವಿಸಿದರು.