ETV Bharat / bharat

ಸಾಧುಗಳ ಗುಂಪು ಹತ್ಯೆ ಪ್ರಕರಣ: ನ್ಯಾಯ ದೊರಕಿಸಿಕೊಡುವಂತೆ ಸನ್ಯಾಸಿಯಿಂದ ನಿರಶನ - ಪಾಲ್ಘರ್​ ದುರಂತದ ಹಿಂದೆ ಕಾಂಗ್ರೆಸ್​ ಕೈವಾಡ

ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ನಡೆದ ಸಾಧುಗಳ ಹತ್ಯೆ ಖಂಡಿಸಿ, ನ್ಯಾಯಕ್ಕಾಗಿ ಹಿಂದೂ ಸನ್ಯಾಸಿ ಮರಮಹಂಸ್ ಮಹಾರಾಜ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಪರಮಹಂಸ​​ ಮಹಾರಾಜ್​ ರಿಂದ ಉಪವಾಸ ಸತ್ಯಾಗ್ರಹ
ಪರಮಹಂಸ​​ ಮಹಾರಾಜ್​ ರಿಂದ ಉಪವಾಸ ಸತ್ಯಾಗ್ರಹ
author img

By

Published : Apr 25, 2020, 8:57 AM IST

ಆಯೋಧ್ಯ: ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ಇಬ್ಬರು ಸಾಧುಗಳು ಸೇರಿದಂತೆ ನಡೆದ ಮೂವರ ಗುಂಪು ಹತ್ಯೆಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಿಂದೂ ಸನ್ಯಾಸಿ ಸ್ವಾಮಿ ಪರಮಹಂಸ​​ ಮಹಾರಾಜ್​ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಮೂವರ ಹತ್ಯೆಗೆ ನ್ಯಾಯ ಸಿಗದಿದ್ದರೆ ತಾವು ಅನ್ನ-ನೀರು ಸೇವಿಸುವುದಿಲ್ಲ. ಈ ಘಟನೆ ಇಡೀ ದೇಶವನ್ನೇ ಅಲುಗಾಡಿಸಿದೆ. ಇದರಿಂದ ಮಾನವೀಯತೆ ಹಾಗೂ ಸಂವಿಧಾನವನ್ನು ಹತ್ಯೆ ಮಾಡಿದಂತಾಗಿದೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಪರಮಹಂಸ​​ ಮಹಾರಾಜ್​ ರಿಂದ ಉಪವಾಸ ಸತ್ಯಾಗ್ರಹ

ನಾನು ನನ್ನ ಜೀವವನ್ನು ಲೆಕ್ಕಿಸದೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹ ನೆರವೇರಿಸುತ್ತೇನೆ ಎಂದಿರುವ ಅವರು, ಕೊಲೆಯಾದ ಜ್ಯೋತಿಷಿಗಳು ಪಿಕ್ನಿಕ್​ಗೆ ಹೋಗುತ್ತಿರಲಿಲ್ಲ. ಅವರು ಅವರ ಗುರುಗಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದಿದ್ದಾರೆ.

ಈ ಘಟನೆಯ ಹಿಂದೆ ಕಾಂಗ್ರೆಸ್​ ಕೈವಾಡ ಇದೆ ಎಂದು ಆರೋಪಿಸರುವ ಅವರು ತನಿಖೆ ನಡೆಯವಂತೆ ಒತ್ತಾಯಿಸಿದ್ದಾರೆ.

ಗುರುವಾರ ತಮ್ಮ ಗುರುವಿನ ಅಂತ್ಯ ಸಂಸ್ಕಾರಕ್ಕೆಂದು ಮುಂಬೈಗೆ ತೆರಳುತ್ತಿದ್ದ ಮಹಾರಾಜ್​ ಕಲ್ಪವೃಕ್ಷ ಗಿರಿ(70), ಸುಶೀಲ್​ ಗಿರಿ ಮಹಾರಾಜ್​(35) ಹಾಗೂ ಇವರ ಡ್ರೈವರ್​ ನೀಲೇಶ್​ ತೆಲ್ಲಡೆಯನ್ನು ಗುಂಪೊಂದು ದಾಳಿ ನಡೆಸಿ ಕೊಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.