ಚೆನ್ನೈ: ದೇಶಾದ್ಯಂತ ಕೊರೊನಾ ತಂದಿಟ್ಟಿರುವ ತೊಂದರೆಯಿಂದ ಎಲ್ಲರೂ ಸಂಕಷ್ಟಕ್ಕೊಳಗಾಗಿದ್ದಾರೆ. ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದು, ಬೇರೆ ದಾರಿಯಿಲ್ಲದೇ ರಸ್ತೆ ಬದಿ ವ್ಯಾಪಾರಿಗಳಾಗಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಇದೀಗ ತಮಿಳುನಾಡಿನಲ್ಲಿ ಶಾಲಾ ವಿದ್ಯಾರ್ಥಿಗಳು ಬೇರೆ ದಾರಿ ಕಾಣದೇ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದು, ಅಂತಹ ವಿದ್ಯಾರ್ಥಿಗಳಿಗೆ ಡಿಎಂಕೆ ಸಂಸದ ಸಹಾಯ ಮಾಡಿದ್ದಾರೆ.
ಶಬೀರ್ ಕುಟುಂಬ ಬಡತನದಿಂದ ಕೂಡಿದ್ದು, ಬೇರೆ ದಾರಿ ಇಲ್ಲದ ಕಾರಣ ಇತನ ಇಬ್ಬರು ಮಕ್ಕಳು ರಸ್ತೆ ಬದಿಯಲ್ಲಿ ನಿಂತುಕೊಂಡು ಹೂವು ಮಾರಾಟ ಮಾಡುತ್ತಿದ್ದಾರೆ. ಇದರ ಮಾಹಿತಿ ಧರ್ಮಪುರಿ ಡಿಎಂಕೆ ಸಂಸದ ಡಾ. ಸೆಂಥಿಲ್ ಕುಮಾರ್ ಅವರ ಗಮನಕ್ಕೆ ಬರುತ್ತಿದ್ದಂತೆ ಮಕ್ಕಳ ಶಿಕ್ಷಣಕ್ಕಾಗಿ 1,34,500 ರೂ ನೀಡಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಶಬೀರ್, ಮಕ್ಕಳನ್ನ ಓದಿಸಬೇಕು ಎಂಬ ಮಹಾದಾಸೆ ಇದೆ. ಆದರೆ ಮನೆಯಲ್ಲಿ ಬಡತನವಿರುವ ಕಾರಣ ಬೇರೆ ದಾರಿ ಕಾಣದೇ ಅವರನ್ನ ನನ್ನೊಂದಿಗೆ ಕರೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದ್ದಾರೆ.