ETV Bharat / bharat

500 ರೂ ತಗೊಂಡು ಕಲ್ಲು ತೂರುವವರೇ ಉಗ್ರರಾಗ್ತಿದ್ದಾರೆ: ಭಾರತೀಯ ಸೇನೆ ಎಚ್ಚರಿಕೆ - ಭಯೋತ್ಪಾದನೆ

ರಾಜ್ಯ ಪೊಲೀಸರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಿನಾರ್​ ಕಾರ್ಪ್ಸ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಕೆಜೆಎಸ್​ ದಿಲ್ಲೋನ್ ಪಾಕಿಸ್ತಾನದ ಸೇನೆ ವಿರುದ್ಧ ಗುಡುಗಿದರು.

Lieutenant General KJS Dhillon
author img

By

Published : Aug 2, 2019, 4:28 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಸೇನೆ ನೇರವಾಗಿ ಪಾಲ್ಗೊಂಡಿದೆ. ಪಾಕ್‌ನ ಈ ಕೃತ್ಯವನ್ನು ಸಹಿಸಲಾಗದು ಎಂದು ಚಿನಾರ್​ ಕಾರ್ಪ್ಸ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಕೆಜೆಎಸ್​ ದಿಲ್ಲೋನ್ ಗುಡುಗಿದ್ದಾರೆ.

ರಾಜ್ಯ ಪೊಲೀಸರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಕದಡಲು ನಾವು ಬಿಡುವುದಿಲ್ಲ. ಪಾಕ್‌ನ ಈ ಎಲ್ಲಾ ಕೃತ್ಯಗಳನ್ನು ವಿಫಲಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಲ್ಲುತೂರಾಟ ಮಾಡಿ, ಗಲಭೆ ಎಬ್ಬಿಸುವ ಶೇ.83ರಷ್ಟು ಜನರೇ ಭಯೋತ್ಪಾದಕರಾಗ್ತಿದ್ದಾರೆ. ಅಂತಹವರ ಕುಟುಂಬಗಳಿಗೆ ಎಚ್ಚರಿಕೆ ನೀಡಿ, ಕೇವಲ 500 ರೂ ಗಳಿಗಾಗಿ ಕಲ್ಲು ತೂರಾಟ ನಡೆಸುವ ದುರ್ಬುದ್ಧಿ ಕೊನೆಗೊಳಿಸಲು ತಿಳಿಸಿದ್ದೇವೆ. ಗನ್ ಹಿಡಿದ ಹತ್ತು ದಿನಗಳೊಳಗೆ ಶೇ.60ರಷ್ಟು ಉಗ್ರರನ್ನು ನಾವು ಸದೆಬಡಿದಿದ್ದೇವೆ ಎಂದರು.

ಪಾಕ್ ಸೇನೆಯ ಬೆಂಬಲದಿಂದಲೇ ಉಗ್ರರು ಅಮರನಾಥ ಯಾತ್ರಿಕರನ್ನು ಟಾರ್ಗೆಟ್​ ಮಾಡಿದ್ದಾರೆ. ಉತ್ತರದ ಪಹಲ್ಗಾಮ್ ಹಾಗೂ ದಕ್ಷಿಣದ ಬಲ್ತಾಲ್ ಮಾರ್ಗಗಳಲ್ಲಿ ಉಗ್ರರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಪಾಕ್​ ಅಪ್ರಚೋದಿತ ದಾಳಿ ನಡೆಸುತ್ತಿದ್ದರೆ ಭಾರತದಿಂದ ತಕ್ಕ ಉತ್ತರ ಸಿಗಲಿದೆ ಎಂದೂ ವಾರ್ನ್ ಮಾಡಿದ್ರು.

Intro:Body:

Lieutenant General KJS Dhillon 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.