ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಪೂಂಚ್ ಜಿಲ್ಲೆಯ ಬಾಲಕೋಟೆ ಮತ್ತು ಮೆಂಧರ್ ವಲಯಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಇಂದು ಸುಮಾರು 2 ಗಂಟೆ ವೇಳೆ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ. ಭಾರತೀಯ ಸೇನೆಯು ಇದಕ್ಕೆ ತಕ್ಕ ಪ್ರತೀಕಾರವನ್ನೂ ತೀರಿಸಿದೆ. ಈ ಗುಂಡಿನ ದಾಳಿ ಸುಮಾರು ಮುಕ್ಕಾಲು ಗಂಟೆ ನಡೆದಿದೆ ಎಂದು ಸೇನೆ ಮಾಹಿತಿ ನೀಡಿದೆ.