ETV Bharat / bharat

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ: ಅಂತಾರಾಷ್ಟ್ರೀಯ ಕೋರ್ಟ್‌ಗೆ ಪಾಕ್‌ ಮೊರೆ - ಕಾಶ್ಮೀರ ವಿಷಯ

ಜಮ್ಮು-ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ವಿಶ್ವಸಂಸ್ಥೆ ಮೆಟ್ಟಿಲೇರಿ ಅವಮಾನಕ್ಕೊಳಗಾಗಿರುವ ಪಾಕಿಸ್ತಾನ​ ಇದೀಗ ಅಂತಾರಾಷ್ಟ್ರೀಯ ಕೋರ್ಟ್​ ಕದ ತಟ್ಟಲು ಮುಂದಾಗಿದೆ.

ಇಮ್ರಾನ್​ ಖಾನ್​​​/imran khan
author img

By

Published : Aug 20, 2019, 11:36 PM IST

Updated : Aug 20, 2019, 11:50 PM IST

ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ವಿಚಾರವನ್ನು ವಿರೋಧಿಸಿ ವಿಶ್ವಸಂಸ್ಥೆ ಮೆಟ್ಟಿಲೇರಿದ್ದ ಪಾಕ್​ಗೆ ಈಗಾಗಲೇ ಮುಖಭಂಗವಾಗಿದೆ. ಇಷ್ಟಾದ್ರೂ ಸುಮ್ಮನಾಗದ ಆ ದೇಶ ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದ(ICJ) ಬಾಗಿಲು ತಟ್ಟಲು ನಿರ್ಧರಿಸಿದೆ.

ಪಾಕ್​ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಮಾತನಾಡಿ, ಜಮ್ಮು-ಕಾಶ್ಮೀರದ ವಿಚಾರವನ್ನು ನಾವು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಪ್ರಕರಣವನ್ನು ಅಲ್ಲಿಗೆ ಕೊಂಡೊಯ್ಯುವ ಮುನ್ನ ನಾವು ಎಲ್ಲಾ ರೀತಿಯಲ್ಲೂ ಸಿದ್ದತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಈಗಾಗಲೇ​ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆ ದೂರವಾಣಿ ಮೂಲಕ ಇದೇ ವಿಚಾರವಾಗಿ ಮಾತುಕತೆ ನಡೆಸಿದ್ದರು. ಆದರೆ ವಿಶ್ವದ ದೊಡ್ಡಣ್ಣನಿಂದ ಪಾಕ್‌ಗೆ ಯಾವುದೇ ಭರವಸೆ ಸಿಗದ ಕಾರಣ, ಇದೀಗ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವಸಂಸ್ಥೆಯ ರಹಸ್ಯ ಸಭೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಆ ವೇಳೆ ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತ್ತು.

Intro:Body:

ಕೈ ಸುಟ್ಟರೂ ಸಮ್ಮನಾಗದ ಪಾಕ್​​... ಕಾಶ್ಮೀರ ವಿಷಯ ಅಂತಾರಾಷ್ಟ್ರೀಯ ಕೋರ್ಟ್​ಗೆ ಒಯ್ಯಲು ನಿರ್ಧಾರ!

ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದತಿ ವಿಚಾರವನ್ನಿಟ್ಟುಕೊಂಡು ವಿಶ್ವಸಂಸ್ಥೆ ಮೆಟ್ಟಿಲೇರಿದ್ದ ಪಾಕ್​ಗೆ ಈಗಾಗಲೇ ಮುಖಭಂಗವಾಗಿದೆ. ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಇದೀಗ ಅದೇ ವಿಷಯನ್ನ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕ್​ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ, ಜಮ್ಮು-ಕಾಶ್ಮೀರದ ವಿಚಾರವನ್ನ ನಾವು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದು, ಪ್ರಕರಣವನ್ನ ಅಲ್ಲಿಗೆ ತೆಗೆದುಕೊಂಡು ಹೋಗುವುದಕ್ಕೂ ಮುಂಚಿತವಾಗಿ ನಾವು ಎಲ್ಲ ರೀತಿಯ ವಿಚಾರ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. 

ಪಾಕ್​ ಪ್ರಧಾನಿ ಇಮ್ರಾನ್​ ಖಾನ್​  ಈಗಾಗಲೇ ಈ ವಿಷಯನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಆದರೆ ಅವರಿಗೆ ಅಲ್ಲೂ ಯಾವುದೇ ಭರವಸೆ ಸಿಗದ ಕಾರಣ, ಇದೀಗ ಈ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ವಿಶ್ವಸಂಸ್ಥೆಯ ರಹಸ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಆ ವೇಳೆ ಉಭಯ ದೇಶಗಳು ಈ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಅದು ತಿಳಿಸಿದೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರವನ್ನ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಖ್​​ನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ.

Conclusion:
Last Updated : Aug 20, 2019, 11:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.