ETV Bharat / bharat

ಪರಮಾಣು ದಾಳಿ ಆದರೆ ಎರಡು ದೇಶಕ್ಕೂ ಹಾನಿ...ಇಮ್ರಾನ್​ ಬಾಯಿಂದ ಯುದ್ಧದ ಮಾತು! - ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಭಾರತದ ವಿರುದ್ಧ ಇದೇ ವಿಷಯವನ್ನಿಟ್ಟುಕೊಂಡು ಹರಿಹಾಯುತ್ತಿರುವ ನೆರೆಯ ಪಾಕ್​, ಇಂದು ಇದೇ ವಿಷಯವನ್ನಿಟ್ಟುಕೊಂಡು ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್​ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದರು.

ಪಾಕ್​ ಪ್ರಧಾನಿ ಇಮ್ರಾನ್​ ಖಾನ್​
author img

By

Published : Aug 26, 2019, 7:18 PM IST

ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ಆರ್ಟಿಕಲ್​​ 370 ರದ್ಧತಿ ವಿಚಾರವನ್ನಿಟ್ಟುಕೊಂಡು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಕಣಿವೆ ನಾಡು ಜಮ್ಮು-ಕಾಶ್ಮೀರದ ವಿಚಾರವಾಗಿ ಉಭಯ ದೇಶಗಳ ನಡುವಿನ ಸಂಘರ್ಷ ಯುದ್ಧದತ್ತ ಸಾಗಿದರೆ ಪರಮಾಣು ಯುದ್ಧದಲ್ಲಿ ಯಾರು ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಎರಡು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರ ಹೊಂದಿವೆ. ಒಂದು ವೇಳೆ ಉಭಯ ದೇಶಗಳ ನಡುವೆ ಯುದ್ಧ ನಡೆದರೆ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಎಂದಿರುವ ಇಮ್ರಾನ್​ ಖಾನ್​, ಸಮಸ್ಯೆ ಬಗೆಹರಿಸಲು ವಿಶ್ವದ ಸೂಪರ್​​ ಪವರ್​ ದೇಶಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದಿದ್ದಾರೆ. ಈ ವಿಷಯದಲ್ಲಿ ಅವು ನಮಗೆ ಬೆಂಬಲ ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಸೆಪ್ಟೆಂಬರ್​​ 27ರಂದು ಈ ವಿಷಯವನ್ನ ಯುಎನ್​​ ಜನರಲ್​ ಅಸೆಂಬ್ಲಿಯಲ್ಲಿ ನಾನು ಇದೇ ವಿಷಯವಾಗಿ ಮಾತನಾಡಲಿದ್ದೇನೆ ಎಂದಿರುವ ಇಮ್ರಾನ್​​​ ಖಾನ್​, ಈಗಾಗಲೇ ಜಮ್ಮು-ಕಾಶ್ಮೀರ ವಿಷಯವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಯಶಸ್ವಿಯಾಗಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡರು. 1965ರ ಬಳಿಕ ಕಾಶ್ಮೀರ ಸಮಸ್ಯೆ ಯುಎನ್​​ನಲ್ಲಿ ಚರ್ಚೆಯಾಗಿದ್ದು, ಅಂತಾರಾಷ್ಟ್ರೀಯ ಮಾಧ್ಯಮದಲ್ಲೂ ಈ ವಿಷಯ ಪ್ರಸಾರವಾಗಿದೆ ಎಂದರು.

ಕಾಶ್ಮೀರಕ್ಕಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದಿರುವ ಇಮ್ರಾನ್​ ಖಾನ್​, ನಾವು ಭಾರತದೊಂದಿಗೆ ಜಮ್ಮು-ಕಾಶ್ಮೀರದ ವಿಚಾರವಾಗಿ ಮಾತನಾಡಲು ಸಿದ್ಧರಿದ್ದೇವೆ. ಆದರೆ ಭಾರತ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದರು.

Intro:Body:

ಪರಮಾಣು ದಾಳಿ ಆದರೆ ಎರಡು ದೇಶಕ್ಕೂ ಹಾನಿ...ಇಮ್ರಾನ್​ ಬಾಯಿಂದ ಯುದ್ಧದ ಮಾತು!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.