ಲಾಹೋರ್: ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಾಕ್‌ನಲ್ಲಿ ಮತ್ತೊಮ್ಮೆ 40ಕ್ಕೂ ಹೆಚ್ಚು ಉಗ್ರ ಸಂಘಟನೆ ಬ್ಯಾನ್ ಮಾಡಿದೆ. ಆದ್ರೇ, ಪಾಕ್‌ನ ಈ ಬ್ಯಾನ್ ನಂಬುವಂತಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಈ ರೀತಿ ಬ್ಯಾನ್ ಘೋಷಿಸಲಾಗಿತ್ತು. 43ಕ್ಕೂ ಹೆಚ್ಚು ಉಗ್ರರನ್ನೂ ಬಂಧಿಸಿರುವ ಪಾಕ್ ಈಗ ಉಗ್ರರ ಸಂಘಟನೆಗಳನ್ನೂ ನಿಷೇಧಿಸಿದೆ. ಇಮ್ರಾನ್ ಖಾನ್ ಈ ನಡೆಯನ್ನೂ ನಾವು ನಂಬೋದು ಕಷ್ಟ.
ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿ ಬಳಿಕ ಪಾಕ್ ಸಂಪೂರ್ಣ ಮಂಡಿಯೂರಿದೆ. ದಾಳಿ ಹಿಂದೆ ಜೆಇಎಂ ಚೀಫ್ ಮಸೂದ್ ಅಜರ್ ಪಾಕ್‌ನಲ್ಲಿರುವುದು ಎಲ್ಲರಿಗೂ ಗೊತ್ತು. ತಾನಷ್ಟೇ ಅಲ್ಲ, ಇಡೀ ವಿಶ್ವ ಸಮುದಾಯದ ಮೂಲಕ ಪಾಕ್ ಮೇಲೆ ಭಾರತ ಒತ್ತಡ ಹಾಕಿದೆ. ಇದು ಪಾಕ್ ಪಿಎಂ ಇಮ್ರಾನ್ ಖಾನ್‌ಗೆ ಉಸಿರುಗಟ್ಟಿಸಿದೆ. ಹಾಗಾಗಿ ಈಗ ಜೈಷ್-ಇ- ಮೊಹಮ್ಮದ್, ಲಷ್ಕರ್-ಏ ತೋಯ್ಬಾ, ಜಮಾತ್ ಉದ್ ದವಾ ಸೇರಿ 40ಕ್ಕೂ ಹೆಚ್ಚು ಉಗ್ರ ಸಂಘಟನೆಗಳನ್ನ ಬ್ಯಾನ್ ಮಾಡಲಾಗಿದೆ. ಆದರೆ, ಇದರಲ್ಲಿ ಬದ್ಧತೆ ಮಾತ್ರ ಕಾಣಿಸುತ್ತಿಲ್ಲ. ಯಾಕಂದ್ರೇ, ಕಳೆದ 2 ದಶಕದಿಂದಲೂ ಈ ರೀತಿಯ ಹಲವು ಬಾರಿ ನಿಷೇಧ ಹೇರುವ ಸನ್ನಿವೇಶ ಎದುರಾಗಿತ್ತು. ಇದು ತೋರ್ಪಡಿಕೆಗಷ್ಟೇನಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ಬ್ಯಾನ್ ಬರೀ ತೋರಿಕೆಗಷ್ಟೇನಾ.. ಇಲ್ಲ ಬದ್ಧತೆ ಇದೆಯಾ...
ಪುಲ್ವಾಮಾ ದಾಳಿ ಮಾಸ್ಟರ್‌ಮೈಂಡ್ ಪಾಕ್‌ನ ಜತೆ ನಂಟಿದೆ. ಇದನ್ನ ವಿಶ್ವ ಸಮುದಾಯದ ಮುಂದೆ ಭಾರತ ಸಾಬೀತುಪಡಿಸಿದೆ. ವಿಶ್ವದ ಸಾಕಷ್ಟು ದೇಶಗಳು ಉಗ್ರರ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈ ಪಾಕ್ ಮೇಲೆ ಒತ್ತಡ ತಂದಿವೆ. ಇಷ್ಟೇ ಅಲ್ಲ, FATF, UNSC ರೀತಿ ಅಂತಾರಾಷ್ಟ್ರೀಯ ಸಂಘಟನೆಗಳೇ ಕ್ರಮಕ್ಕೆ ಪಟ್ಟು ಹಿಡಿದಿದ್ದವು. ಇದೇ ಕಾರಣಕ್ಕೆ ಈಗ ತುರ್ತಾಗಿ ಇಮ್ರಾನ್ 44ಕ್ಕೂ ಹೆಚ್ಚು ಸಂಘಟನೆಗಳ ಮೇಲೆ ನಿಷೇಧ ಹೇರಿದ್ದಾರೆ. ಹಾಗೇ 43ಕ್ಕೂ ಹೆಚ್ಚು ಉಗ್ರರನ್ನ ಬಂಧಿಸಲಾಗಿದೆ. ಪಾಕ್ ಇದರಲ್ಲಿ ಗಟ್ಟಿ ತೀರ್ಮಾನ ಕೈಗೊಂಡಿದೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಯಾಕಂದ್ರೇ, ಈ ಹಿಂದೆ ಇಂಥ ಸಾಕಷ್ಟು ನಿಷೇಧವನ್ನ ನಾವು ನೋಡಿದ್ದೇವೆ ಅಂತ ಪಾಕ್‌ನ ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ಜನ ಮಾತಾಡಿಕೊಳ್ಳುತ್ತಿದ್ದಾರೆ. ಅಮೆರಿಕಾದ WTO ಅಟ್ಯಾಕ್ ಮತ್ತು ಮುಂಬೈ ದಾಳಿ ಬಳಿಕ ಪಾಕ್ ಇದೇ ರೀತಿ ಕೆಲ ಸಂಘಟನೆಗಳ ಮೇಲೆ ನಿಷೇಧ ಹೇರಿತ್ತು.
ಯಾಕೆ ಪಾಕ್‌ನ ಮೇಲೆ ವಿಶ್ವಾಸವಿಡಲು ಆಗೋದಿಲ್ಲ?
ಯಾಕೆಂದರೆ, ಪಾಕ್‌ನ ಇತಿಹಾಸವೇ ಹಾಗಿದೆ. ಅದರ ಮೇಲೆ ಯಾವತ್ತೂ ವಿಶ್ವಾಸವಿಡಲಾಗಲ್ಲ. ಮೊದಲು ಹಫೀಜ್ ಸಯೀದ್ ಸಂಘಟನೆ ಮೇಲೆ ನಿಷೇಧ ಹೇರಲಾಗಿತ್ತು. ಆದರೆ, ಅದೇ ಹಫೀಜ್ ಸಯೀದ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಈಗಲೂ ನಿತ್ಯ ಸಮಾವೇಶ ಮಾಡ್ತಾನೆ. ಭಾರತದ ಮೇಲೆ ಬೆಂಕಿ ಉಗುಳುತಿರುತ್ತಾನೆ. ಬರೀ ಹಫೀಜ್ನಷ್ಟೇ ಅಲ್ಲ, ಜೆಇಎಂ ಚೀಫ್ ಮಸೂದ್ ಅಜರ್ ತಮ್ಮಲ್ಲೇ ಇರುವುದಾಗಿ ಪಾಕ್‌ನ ವಿದೇಶಾಂಗ ಸಚಿವ ಶಾಹ್ ಮೊಹ್ಮದ್ ಖುರೇಷಿಯೇ ಹಲವು ಟಿವಿ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಈಗ ಜೈಷ್-ಇ- ಮೊಹಮ್ಮದ್ ಪುಲ್ವಾಮಾ ದಾಳಿ ಹೊಣೆ ಹೊತ್ತ ಮೇಲೆ ಅದೇ ವಿದೇಶಾಂಗ ಸಚಿವ ಉಲ್ಟಾ ಹೊಡೆದಿದ್ದಾರೆ. ಪುಲ್ವಾಮಾ ದಾಳಿ ಹೊಣೆಯನ್ನ ಜೆಿಇಎಂ ಹೊತ್ತುಕೊಂಡಿಲ್ಲ. ಅದೊಂದು ಭ್ರಮೆ. ಆದರೆ, ತಪ್ಪೊಪ್ಪಿಕೊಂಡಿದೆ ಅಂತ ದ್ವಂದ್ವ, ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ ಖುರೇಷಿ.
ಯಾಕೆ ಪಾಕ್‌ಗೆ ಈ ರೀತಿ ಕ್ರಮ ಅನಿವಾರ್ಯವಾಯ್ತು?
ಈ ರೀತಿಯ ಕ್ರಮಕೈಗೊಳ್ಳುವುದರ ಹಿಂದೆ ಪಾಕ್‌ಗೆ ಸಾಕಷ್ಟು ಕಾರಣಗಳಿವೆ. ಪುಲ್ವಾಮಾ ದಾಳಿ ಬಳಿ ಪಾಕ್‌ನ ಕುಟಿಲತೆ ಇಡೀ ವಿಶ್ವ ಸಮುದಾಯದ ಮುಂದೆ ಬೆತ್ತಲಾಗಿದೆ. ರಾಜತಾಂತ್ರಿಕ ನೈಪುಣ್ಯತೆಯಿಂದ ಪಾಕ್‌ನ ಕಟ್ಟಿ ಹಾಕಿದೆ ಭಾರತ. ಇದಷ್ಟೇ ಅಲ್ಲ, ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ ಅಂದ್ರೇ(UNSC) ಮುಂದೆಯೂ ಪಾಕ್‌ನ ಇನ್ನೊಂದು ಮುಖವನ್ನ ಬಿಚ್ಚಿಟ್ಟಿದೆ. UNSC ಒಂದು ವೇಳೆ ಜೈಷ್- ಇ- ಮೊಹಮ್ಮದ್‌ನ ಬ್ಯಾನ್ ಮಾಡಿದ್ರೇ, ಆಗ ಪಾಕ್‌ಗೂ ಕ್ರಮಕೈಗೊಳ್ಳುವುದು ಅನಿವಾರ್ಯ. ಅನೇಕ ತನಿಖಾ ಏಜೆನ್ಸಿಗಳೂ ಪಾಕ್ ಮೇಲೆ ಒತ್ತಡ ಹೇರುತ್ತಿವೆ. ಮಾರ್ಚ್ 13ರಂದು UNSC ಮಹಾ ಅಧಿವೇಶನವಿದೆ. ಅದಕ್ಕಾಗಿಯೇ ಉಗ್ರರ ಬಂಧನ ಮತ್ತು ಉಗ್ರ ಸಂಘಟನೆಗಳ ನಿಷೇಧದಂತ ಕ್ರಮ ಕೈಗೊಂಡಿದೆ ಪಾಕ್. ಆದರೆ, ನರಿ ಬುದ್ಧಿಯ ನೆರೆ ದೇಶದ ಮೇಲೆ ವಿಶ್ವಾಸವಿಡಲಾಗಲ್ಲ.