ETV Bharat / bharat

ಚಿದಂಬರ ರಹಸ್ಯ ಬಿಡಿಸಲು ಸಿಬಿಐ ಡ್ರಿಲ್: 90 ಗಂಟೆಯಲ್ಲಿ 450 ಪ್ರಶ್ನೆಗಳಿಗೆ ಉತ್ತರ! - ತಿಹಾರ್ ಜೈಲು

ಆಗಸ್ಟ್ 21ರ ರಾತ್ರಿ ಐಎನ್​ಎಕ್ಸ್ ಮೀಡಿಯಾ ಹಗರಣ ಸಂಬಂಧ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಲಾಗಿದ್ದು, ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ ವಿಚಾರವಾಗಿ ಸಿಬಿಐ ತೀವ್ರವಾಗಿ ವಿಚಾರಣೆ ನಡೆಸಿದೆ.

ಚಿದಂಬರಂ
author img

By

Published : Sep 6, 2019, 9:52 AM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಲುಕಿ ಸದ್ಯ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಸದ್ಯಕ್ಕಂತೂ ರಿಲೀಫ್​ ದೊರೆಯುವ ಲಕ್ಷಣ ಕಾಣುತ್ತಿಲ್ಲ.

ಸೆ.19ರ ವರೆಗೆ ನ್ಯಾಯಾಂಗ ಬಂಧನ.. ಏಷ್ಯಾದ ಅತಿ ದೊಡ್ಡ ಜೈಲಿಗೆ ಮಾಜಿ ಗೃಹ ಸಚಿವ

ಸಿಬಿಐ ನ್ಯಾಯಾಂಗ ಬಂಧನದ ವೇಳೆ ಅಧಿಕಾರಿಗಳು 90 ಗಂಟೆಯಲ್ಲಿ ಕೇಳಿದ 450 ಪ್ರಶ್ನೆಗಳಿಗೆ ಚಿದಂಬರಂ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳಿದ್ದವು. ಸಿಬಿಐ ಎಲ್ಲ ಆಯಾಮಗಳಿಂದಲೂ ಬಿಗಿ ತನಿಖೆ ನಡೆಸಿದೆ. ಪ್ರಕರಣ ಸಂಬಂಧ ಸೆಪ್ಟೆಂಬರ್ 20ರಂದು ಸಿಬಿಐ ಕೋರ್ಟ್‌ಗೆ ಚಾರ್ಜ್​ಶೀಟ್ ಸಲ್ಲಿಸುವ ಸಾಧ್ಯತೆ ಇದೆ.

ಕಳೆದ ಎರಡು ವಾರದಿಂದ ಸಿಬಿಐ ನ್ಯಾಯಾಂಗ ಬಂಧನದಲ್ಲಿದ್ದ ಚಿದಂಬರಂ ಕಸ್ಟಡಿ ಅವಧಿ ಗುರುವಾರಕ್ಕೆ ಮುಕ್ತಾಯವಾಗಿತ್ತು. ಇಡಿ ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಗುರುವಾರ ತಳ್ಳಿಹಾಕಿ ಜಾ.ನಿ(ಜಾರಿ ನಿರ್ದೇಶನಾಲಯ) ಬಂಧನಕ್ಕೆ ಮುಕ್ತ ಅವಕಾಶ ಕಲ್ಪಿಸಿತ್ತು. ಸದ್ಯ ತಿಹಾರ್ ಜೈಲು ಸೇರಿರುವ ಚಿದಂಬರಂ ಸೆಪ್ಟೆಂಬರ್ 19ರವರೆಗೆ ಅಲ್ಲೇ ಬಂಧಿಯಾಗಲಿದ್ದಾರೆ.

ಕೋರ್ಟ್‌ ಅನುಮತಿಸಿದ ಕಾರಣ ಜೈಲಿನಲ್ಲಿ ಚಿದಂಬರಂ ಅವರಿಗೆ ಪ್ರತ್ಯೇಕ ಸೆಲ್​, ಮಂಚ, ಮೆಡಿಸಿನ್ ಹಾಗೂ ವೆಸ್ಟರ್ನ್ ಟಾಯ್ಲೆಟ್ ಒದಗಿಸಲಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.