ನವದೆಹಲಿ: ಕೋವಿಡ್-19ಗೆ ಅಮೆರಿಕಾ ಸಂಶೋಧಿಸಿರುವ ಆಸ್ಟ್ರಾಜೆನೆಕಾ ಲಸಿಕೆಯ 3ನೇ ಹಂತದ ವೈದ್ಯಕೀಯ ಪ್ರಯೋಗವನ್ನು ಬ್ರಿಟನ್ ಸ್ಥಗಿತಗೊಳಿಸಿರುವ ಬೆನ್ನಲ್ಲೇ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ಮುಂದುವರಿದಿದೆ. ಆದರೆ ಯಾವುದೇ ಸಮಸ್ಯೆಗಳು ಎದುರಾಗಿಲ್ಲ ಎಂದು ಸಿರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ತಿಳಿಸಿದೆ.
ಯುಕೆಯಲ್ಲಿ ನಡೆಯುತ್ತಿರುವ ಆಸ್ಟ್ರಾಜೆನೆಕಾ ಲಸಿಕೆಯ ಕ್ಲಿನಿಕಲ್ ಪ್ರಯೋಗದ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಪರಿಶೀಲನೆ ನಿಲ್ಲಿಸಿದ್ದಾರೆ. ಶೀಘ್ರದಲ್ಲಿ ಆರಂಭಿಸಲಿದ್ದಾರೆ. ಆದರೆ ಭಾರತದಲ್ಲಿ ಲಸಿಕೆಯ ವೈದ್ಯಕೀಯ ಪ್ರಯೋಗ ಮುಂದುವರಿದಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿಲ್ಲ ಎಂದು ಎಸ್‌ಐಐ ಸ್ಪಷ್ಟಪಡಿಸಿದೆ.
ಭಾರತ, ಕಡಿಮೆ ಆದಾಯ ಹೊಂದಿರು ದೇಶಗಳಲ್ಲಿನ ಕೋವಿಡ್ ಸೋಂಕಿತರಿಗಾಗಿ ಸಂಶೋಧಿಸಿರುವ ಆಸ್ಟ್ರಾಜೆನೆಕಾ ಲಸಿಕೆ ತಯಾರಿಕೆಗೆ ಭಾರತ ಮೂಲತದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಭಾಗಿತ್ವ ವಹಿಸಿದೆ.
ಮಹಾರಾಷ್ಟ್ರ ಮೂಲದ ವ್ಯಾಕ್ಸಿನ್ ಉತ್ಪಾದನೆ ಸಂಸ್ಥೆ ದೇಶದ 17 ಕಡೆ 2ನೇ ಹಂತದ ಲಸಿಕೆಯ ವೈದ್ಯಕೀಯ ಪ್ರಯೋಗ ನಡೆಸಿತ್ತು. 18 ರಿಂದ 55 ವರ್ಷದೊಳಗಿನ ಕನಿಷ್ಠ 1,600 ಜನರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ.