ನವದೆಹಲಿ : ನಿನ್ನೆ ದೇಶಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಒಂದೇ ದಿನ ಸುಮಾರು 600 ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕುಡಿದು ವಾಹನ ಚಲಾಯಿಸಿದ ಒಟ್ಟು 647 ಪ್ರಕರಣಗಳು, 181 ಟ್ರಿಪಲ್ ಸವಾರಿ, 1,192 ಹೆಲ್ಮೆಟ್ ಧರಿಸದಿರುವ ಮತ್ತು 156 ಅಪಾಯಕಾರಿ ಚಾಲನೆಯ ಪ್ರಕರಣಗಳು ದಾಖಲಾಗಿವೆ.
ಹೋಳಿ ಸಂದರ್ಭದಲ್ಲಿ ವಾಹನ ಚಾಲಕರ ಸುರಕ್ಷತೆ ಬಗ್ಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಲ್ಲದೇ ಕುಡಿದು ವಾಹನ ಚಲಾಯಿಸಿದ ಘಟನೆಗಳನ್ನು ಪತ್ತೆ ಹಚ್ಚಲು ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿಯುತ ಮತ್ತು ಸುರಕ್ಷಿತ ಹೋಳಿ ಆಚರಣೆಗೆ 170 ಕ್ಕೂ ಹೆಚ್ಚು ಟ್ರಾಫಿಕ್ ಸಿಬ್ಬಂದಿ ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. 1,600 ದೆಹಲಿ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.