ETV Bharat / bharat

ದೇಶದಲ್ಲಿ ಇಲ್ಲಿಯವರೆಗೆ ಐದು ದಶಲಕ್ಷಕ್ಕೂ ಅಧಿಕ ಕೋವಿಡ್-19​ ಟೆಸ್ಟ್​: ಐಸಿಎಂಆರ್​

ಭಾರತದಲ್ಲಿ ಜೂನ್ 6ರವರೆಗೆ ಒಟ್ಟು 50,30,700 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,41,682 ಪರೀಕ್ಷೆ ನಡೆದಿದೆ ಎಂದು ಐಸಿಎಂಆರ್ ಅಧಿಕಾರಿಗಳು ತಿಳಿಸಿದ್ದಾರೆ.

author img

By

Published : Jun 10, 2020, 5:11 AM IST

ಕೋವಿಡ್-19​ ಟೆಸ್ಟ್
ಕೋವಿಡ್-19​ ಟೆಸ್ಟ್

ನವದೆಹಲಿ : ಕೋವಿಡ್​-19 ವೈರಸ್ ಪತ್ತೆಗಾಗಿ ದೇಶದಲ್ಲಿ ಇಲ್ಲಿಯವರೆಗೆ ಐದು ದಶಲಕ್ಷಕ್ಕೂ ಹೆಚ್ಚು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದೆ ಎಂದು ಇಂಡಿಯನ್​ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.

ಜೂನ್ 6ರವರೆಗೆ ದೇಶಾದ್ಯಂತ ಒಟ್ಟು 50,30,700 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,41,682 ಪರೀಕ್ಷೆ ನಡೆದಿದೆ ಎಂದು ಐಸಿಎಂಆರ್ ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 1.4ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಇಲ್ಲಿಯವರೆಗೆ ನಮ್ಮಲ್ಲಿ 789 ಪ್ರಯೋಗಾಲಯಗಳು (553 ಸರ್ಕಾರಿ ಮತ್ತು 231 ಖಾಸಗಿ ಪ್ರಯೋಗಾಲಯಗಳು) ಇವೆ. ಜೂನ್ 6ರವರೆಗಿನ ಮಾಹಿತಿಯಂತೆ ಒಟ್ಟು 50, 30,700 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 9,987 ಕೊರೊನಾ ವೈರಸ್ ಪ್ರಕರಣ ದಾಖಲಿಸಿದೆ. ಕೋವಿಡ್​-19 ಸಾವಿನ ಸಂಖ್ಯೆ 7,466 ಕ್ಕೆ ಏರಿದ್ದು, ಒಟ್ಟಾರೆ ಸೋಂಕಿತ ಪ್ರಕರಣಗಳ ಸಂಖ್ಯೆ 2,66,598 ಕ್ಕೆ ಏರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.