ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಬೆಳಗ್ಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸುಮಾರು 400 ಸೈನಿಕರನ್ನು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಗುರಿಯಾಗಿಸಿ ದಾಳಿಗೆ ಸಂಚು ರೂಪಿಸಿತ್ತು ಎಂದು ಹಿರಿಯ ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.
ಸಿಆರ್‌ಪಿಎಫ್ ಬೆಂಗಾವಲು ಪಡೆಯ ಸುಮಾರು 20 ವಾಹನಗಳು ಗುರುವಾರ ಬೆಳಗ್ಗೆ ಶ್ರೀನಗರದಿಂದ ಜಮ್ಮು ತಲುಪಬೇಕಿದ್ದವು. ಸಿಆರ್‌ಪಿಎಫ್ ಪಡೆ ವಾಹನಗಳು ಹೋಗುವ ಮಾರ್ಗ ಪುಲ್ವಾಮಾ ಬಳಿ ಭದ್ರತಾ ಪಡೆ ಸಿಬ್ಬಂದಿ ಐಇಡಿ ತುಂಬಿದ ಕಾರನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ.
-
Over 20 CRPF vehicles were target of JeM terrorists attempting 2019 Pulwama-like attack, suspect security forces
— ANI Digital (@ani_digital) May 28, 2020 " class="align-text-top noRightClick twitterSection" data="
Read @ANI story | https://t.co/lnVVWofkwL pic.twitter.com/qdocI9wptw
">Over 20 CRPF vehicles were target of JeM terrorists attempting 2019 Pulwama-like attack, suspect security forces
— ANI Digital (@ani_digital) May 28, 2020
Read @ANI story | https://t.co/lnVVWofkwL pic.twitter.com/qdocI9wptwOver 20 CRPF vehicles were target of JeM terrorists attempting 2019 Pulwama-like attack, suspect security forces
— ANI Digital (@ani_digital) May 28, 2020
Read @ANI story | https://t.co/lnVVWofkwL pic.twitter.com/qdocI9wptw
2019ರ ಪುಲ್ವಾಮಾ ದಾಳಿಗೂ ಈ ಸ್ಕೆಚ್ಗೂ ಸಾಮ್ಯತೆ ಇದ್ದು, ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ಕಾರಿನಿಂದ ಯೋದರ ಮೇಲೆ ದಾಳಿ ಮಾಡಿ 400ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆ ಮಾಡುವ ಯೋಜನೆ ಹೊಂದಿದ್ದ ಎಂದು ಶಂಕಿಸಲಾಗಿದೆ.
ಐಇಡಿ ಸ್ಫೋಟಕ ಹೊತ್ತು ಪುಲ್ವಾಮಾಕ್ಕೆ ಬಂದ ಕಾರು... ಪೊಲೀಸ್-ಸೇನೆಯಿಂದ ತಪ್ಪಿತು ಭಾರಿ ಅನಾಹುತ!
ಸಿಆರ್‌ಪಿಎಫ್ ಸಿಬ್ಬಂದಿ ಹೋಗಬೇಕಿದ್ದ ವಾಹನಗಳು ಬಕ್ಷಿ ಕ್ರೀಡಾಂಗಣ ಶಿಬಿರದಿಂದ ಬೆಳಿಗ್ಗೆ 7ಕ್ಕೆ ಹೊರಟು ಜಮ್ಮು ತಲುಪಬೇಕಿತ್ತು. ಸಿಆರ್‌ಪಿಎಫ್‌ನ ಎಲ್ಲಾ ಶ್ರೇಣಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 400 ಮಂದಿ 20 ವಾಹನಗಳಲ್ಲಿ ತೆರಳಬೇಕಿತ್ತು. ಇದೇ ತಂಡವನ್ನು ಭಯೋತ್ಪಾದಕರು ಗುರಿಯಾಗಿಸಲು ಬಯಸಿದ್ದರು ಎಂದು ಶಂಕಿಸಲಾಗಿದೆ.
ಸಿಆರ್‌ಪಿಎಫ್ ಮತ್ತು ಭಾರತೀಯ ಸೇನೆಯೊಂದಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಾಶಪಡಿಸಿದ ಸ್ಯಾಂಟ್ರೋ ಕಾರಿನ ಮೂಲಕ ದಾಳಿ ನಡೆಸಲು ಯೋಜಿಸಲಾಗಿತ್ತು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಆರ್‌ಪಿಎಫ್ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.