ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಧಾರಾಕಾರ ಮಳೆಯ ಅಬ್ಬರ ಮುಂದುವರೆದಿದ್ದು, ಕೇಂದ್ರ ರೈಲ್ವೆ 12 ರೈಲುಗಳ ಸಂಚಾರ ರದ್ದುಪಡಿಸಿದೆ.
ಮುಂಬೈ ಸುತ್ತಮುತ್ತ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ನೀರು ನಿಂತಿದೆ. ರೈಲು ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಸತತ ಮಳೆಯಿಂದಾಗಿ ಮುಂಬೈ, ಸಿಯಾನ್, ನಾಗ್ಪಾಡ, ಸಂತ ಕ್ರೂಸ್, ಅಂಧೇರಿ ಮತ್ತು ಚೆಂಬೂರ್ಗಳು ನೀರಿನಿಂದ ಆವೃತ್ತವಾಗಿವೆ. ಪ್ರಯಾಣಿಕರ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಂಗಳೂರು- ಮುಂಬೈ ಸಿಎಸ್ಎಂಟಿ 12134 ಎಕ್ಸ್ಪ್ರೆಸ್, ಮಡ್ಗಾಂವ್- ಮುಂಬೈ ಸಿಎಸ್ಎಂಟಿ ಕೋನಾರ್ಕ್ ಎಕ್ಸ್ಪ್ರೆಸ್ 10112, ಲೋಕಮಾನ್ಯ ತಿಲಕ್- ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್ಪ್ರೆಸ್ 16345, ಮುಂಬೈ ಸಿಎಸ್ಎಂಟಿ- ಮಂಗಳೂರು ಎಕ್ಸ್ಪ್ರೆಸ್ 12133, ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್ಪ್ರೆಸ್ 12619 ಸೇರಿದಂತೆ ಒಟ್ಟು 12 ರೈಲುಗಳ ಸಂಚಾರ ರದ್ದಾಗಿದೆ. ರೈಲುಗಳ ರದ್ದತಿಯಿಂದ ಸಾವಿರಾರು ಸಂಖ್ಯೆಯ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಜಮಾವಣೆಗೊಂಡಿದ್ದಾರೆ.
-
Mumbai: Passengers stranded at Lokmanya Tilak Terminus (LTT). 12 trains have been cancelled,6 trains short terminated, 2 trains partially cancelled, and 1 each diverted & rescheduled, due to heavy rainfall, waterlogging,& boulder fall between Apta-Jite section of Central Railway. pic.twitter.com/BuImlout5K
— ANI (@ANI) August 4, 2019 " class="align-text-top noRightClick twitterSection" data="
">Mumbai: Passengers stranded at Lokmanya Tilak Terminus (LTT). 12 trains have been cancelled,6 trains short terminated, 2 trains partially cancelled, and 1 each diverted & rescheduled, due to heavy rainfall, waterlogging,& boulder fall between Apta-Jite section of Central Railway. pic.twitter.com/BuImlout5K
— ANI (@ANI) August 4, 2019Mumbai: Passengers stranded at Lokmanya Tilak Terminus (LTT). 12 trains have been cancelled,6 trains short terminated, 2 trains partially cancelled, and 1 each diverted & rescheduled, due to heavy rainfall, waterlogging,& boulder fall between Apta-Jite section of Central Railway. pic.twitter.com/BuImlout5K
— ANI (@ANI) August 4, 2019
6 ರೈಲುಗಳ ಅಂತಿಮ ಸಂಚಾರದ ಮಾರ್ಗವನ್ನು ಕಡಿತಗೊಳಿಸಲಾಗಿದೆ. 2 ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದ್ದು, ರದ್ದು ಪಡಿಸಲಾದ ಒಂದು ರೈಲನ್ನು ಮರು ಸಂಚಾರಕ್ಕೆ ಅವಕಾಶ ನೀಡಿಲಾಗಿದೆ ಎಂದು ಕೇಂದ್ರ ರೈಲ್ವೆ ಮಾಹಿತಿ ನೀಡಿದೆ.