ETV Bharat / bharat

ಮಕ್ಕಳ ಕಳ್ಳ ಸಾಗಣೆ.. ಸೈಬರಾಬಾದ್​ ಪೊಲೀಸರಿಂದ 581 ಮಕ್ಕಳ ರಕ್ಷಣೆ

ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಮಕ್ಕಳ ಕಳ್ಳಸಾಗಣೆಗೆ ತಡೆ ಹಾಕುವ ಉದ್ದೇಶದಿಂದ ಸೈಬರಾಬಾದ್​ ಪೊಲೀಸರ ವಿಶೇಷ ಕಾರ್ಯಪಡೆ ವರ್ಷದ ಅವಧಿಯಲ್ಲಿ ಸುಮಾರು 581 ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.

child trafficking
author img

By

Published : Jun 18, 2019, 10:14 AM IST

ಹೈದರಾಬಾದ್​: ಸೈಬರಾಬಾದ್​ ಪೊಲೀಸರು ಮಕ್ಕಳ ಕಳ್ಳಸಾಗಣೆ ಪ್ರಕರಣಗಳನ್ನ ಭೇದಿಸಿ, ವರ್ಷದ ಅವಧಿಯಲ್ಲಿ ಸುಮಾರು 581 ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.

ಕಳೆದ ವರ್ಷ ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಮಕ್ಕಳ ಕಳ್ಳಸಾಗಣೆಗೆ ತಡೆ ಹಾಕುವ ಉದ್ದೇಶದಿಂದ ಸೈಬರಾಬಾದ್​ ಪೊಲೀಸರು, ಒಂದು ತಂಡವನ್ನ ರಚನೆ ಮಾಡಿತ್ತು. ಸೈಬರಾಬಾದ್​ ಕಮಿಷನರೇಟ್​ ಅಡಿ ಮೂರು ಜೋನ್​ಗಳು ಬರುತ್ತಿದ್ದು, ಈ ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಕಳ್ಳ ಸಾಗಣೆ ತಡೆಗಟ್ಟುವ ಉದ್ದೇಶದಿಂದ ಈ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿತ್ತು.

ಹೀಗೆ 2018ರ ಜೂನ್​​​ನಿಂದ ಇಲ್ಲಿವರೆಗೂ 581 ಮಕ್ಕಳ ರಕ್ಷಣೆ ಮಾಡಲಾಗಿದೆ. ಇನ್ನು 543 ಮಕ್ಕಳ ಪೈಕಿ, 339 ಹುಡುಗರು ಹಾಗೂ 204 ಬಾಲಕಿಯರಿದ್ದಾರೆ. ಇನ್ನು ಇವರಲ್ಲಿ 29 ಹುಡುಗರು ಹಾಗೂ 9 ಬಾಲಕಿಯರನ್ನ ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.