ಮುಂಬೈ: ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ದಿನಕ್ಕೊಂದು ತಿರುವು ಪಡೆಯುತ್ತಿದ್ದ ಬೆನ್ನಲ್ಲೇ ಬುಧವಾರ ರಾತ್ರೋರಾತ್ರಿ ನಾಪತ್ತೆಯಾಗಿ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದ ಶಾಸಕ ಶ್ರೀಮಂತ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಕಾಂಗ್ರೆಸ್ ಶಾಸಕರೊಂದಿಗೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್ನಲ್ಲಿ ತಂಗಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರಾತ್ರೋರಾತ್ರಿ ರೆಸಾರ್ಟ್‌ನಿಂದ ನಾಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು.
ಇದಾದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹರಿಬಿಟ್ಟಿದ್ದರು. ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿವುದಾಗಿ ವಿಡಿಯೋ ಸಂದೇಶವೊಂದನ್ನು ಶಾಸಕ ಶ್ರೀಮಂತ್ ಪಾಟೀಲ್ ಸ್ಪೀಕರ್ ಅವರಿಗೆ ಇಂದು ಸಂಜೆ ರವಾನಿಸಿದ್ದರು.
-
Congress MLA Shrimant Patil: I went to Chennai for some personal work & felt some pain in the chest there. I visited hospital & on the suggestion of the doctor, I came to Mumbai and got admitted here. Once I recover, I'll go back to Bengaluru pic.twitter.com/rUzVmmXYMj
— ANI (@ANI) July 18, 2019 " class="align-text-top noRightClick twitterSection" data="
">Congress MLA Shrimant Patil: I went to Chennai for some personal work & felt some pain in the chest there. I visited hospital & on the suggestion of the doctor, I came to Mumbai and got admitted here. Once I recover, I'll go back to Bengaluru pic.twitter.com/rUzVmmXYMj
— ANI (@ANI) July 18, 2019Congress MLA Shrimant Patil: I went to Chennai for some personal work & felt some pain in the chest there. I visited hospital & on the suggestion of the doctor, I came to Mumbai and got admitted here. Once I recover, I'll go back to Bengaluru pic.twitter.com/rUzVmmXYMj
— ANI (@ANI) July 18, 2019
ಈ ಬಗ್ಗೆ ಮಾತನಾಡಿರುವ ಪಾಟೀಲ್, 'ನನ್ನ ವೈಯಕ್ತಿಕ ಕೆಲಸಕ್ಕಾಗಿ ಚೆನ್ನೈಗೆ ತೆರಳಿದ್ದಾಗ ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಬಳಿಕ ವೈದ್ಯರನ್ನು ಸಂಪರ್ಕಿಸಿದೆ. ಅವರ ಸಲಹೆ ಮೆರೆಗೆ ಮುಂಬೈಗೆ ಬಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಒಮ್ಮೆ ಗುಣಮುಖನಾದ ಬಳಿಕ ಬೆಂಗಳೂರಿಗೆ ಹಿಂದಿರುಗುತ್ತೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.