ETV Bharat / bharat

ಪ್ರೇಮಿಗಳ ದಿನಾಚರಣೆ : ಮಾಲ್​ಗಳಿಗೆ ನುಗ್ಗಿದ ಭಜರಂಗದಳದವರು ಮಾಡಿದ್ದೇನು ಗೊತ್ತಾ?... ವಿಡಿಯೋ

ಹೈದರಾಬಾದ್​ನ ಮಾಲ್​ಗಳಲ್ಲಿ ಪ್ರೇಮಿಗಳನ್ನು ಆಕರ್ಷಿಸಲು ಅಲಂಕಾರ ಮಾಡಲಾಗಿತ್ತು. ಭಜರಂಗ ದಳದ ಕಾರ್ಯಕರ್ತರು ಮಾಲ್​ಗಳಿಗೆ ನುಗ್ಗಿ ಧ್ವಂಸಗೊಳಿಸಿದ್ದಾರೆ.

Bajrang Dal workers vandalize Valentine's Day  decorations
ಪ್ರೇಮಿಗಳ ದಿನದ ಆಚರಣೆಗಾಗಿ ಮಾಲ್​ಗಳಲ್ಲಿ ಮಾಡಿದ್ದ ಅಲಂಕಾರಗಳ ಧ್ವಂಸ
author img

By

Published : Feb 15, 2020, 3:50 AM IST

ಹೈದರಾಬಾದ್​: ಪ್ರೇಮಿಗಳ ದಿನದ ಆಚರಣೆಗಾಗಿ ಮಾಲ್​ಗಳಲ್ಲಿ ಮಾಡಿದ್ದ ಅಲಂಕಾರಗಳನ್ನು ಭಜರಂಗ ದಳದ ಕಾರ್ಯಕರ್ತರು ಧ್ವಂಸಗೊಳಿಸಿರುವ ಘಟನೆ ​ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ಪ್ರೇಮಿಗಳ ದಿನದ ಆಚರಣೆಗಾಗಿ ಮಾಲ್​ಗಳಲ್ಲಿ ಮಾಡಿದ್ದ ಅಲಂಕಾರಗಳ ಧ್ವಂಸ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ರಾಜ್ಯ ಭಜರಂಗ ದಳ ಮುಖಂಡ ಸುಭಾಷ್ ಚಂದರ್, ನಗರದ ವಿವಿಧ ಸ್ಥಳಗಳಲ್ಲಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದ ಪ್ರೇಮಿಗಳನ್ನು ನೋಡಿದ ನಮ್ಮ ಕಾರ್ಯಕರ್ತರು, ಅವರಿಗೆ ಇದು ಭಾರತದ ಸಂಸ್ಕೃತಿಯಲ್ಲ, ಪ್ರೇಮಿಗಳ ದಿನದ ಬದಲಿಗೆ ಪುಲ್ವಾಮಾ ಹುತಾತ್ಮರ ದಿನವನ್ನ ಆಚರಿಸಿ ಗೌರವ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು.

ಇನ್ನು ಭಜರಂಗದಳದ ಕಾರ್ಯಕರ್ತರು ಶುಕ್ರವಾರ ಹೈದರಾಬಾದ್​ನಲ್ಲಿ ರ್ಯಾಲಿಗಳನ್ನ ನಡೆಸಿ, ಮಾಲ್​, ರೆಸ್ಟೋರೆಂಟ್​ಗಳ ಬಳಿ ಪ್ರತಿಭಟನೆ ನಡೆಸಿ, "ಪ್ರೇಮಿಗಳ ದಿನವನ್ನು ಆಚರಿಸುವುದನ್ನು ನಿಲ್ಲಿಸಿ" ಎಂದು ಘೋಷಣೆಯನ್ನ ಕೂಗಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.