ಭುವನೇಶ್ವರ(ಒಡಿಶಾ): ನಾಲ್ಕು ನಾಯಿ ಮರಿಗಳನ್ನು ಕೊಂದ ಆರೋಪದ ಮೇಲೆ ಓಲಾ ಕಾರು ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಇಲ್ಲಿನ ಶೈಲಶ್ರೀ ವಿಹಾರದಲ್ಲಿ ನಡೆದಿದೆ.
ಆನಂದಪುರ ಗ್ರಾಮದ ಕನ್ಹು ಚರಣ್ ಗಿರಿ ಬಂಧಿತ ಓಲಾ ಚಾಲಕ. ಓಲಾ ಚಾಲಕನನ್ನು ವೇಗವಾಗಿ ಹೋಗದಂತೆ ತಡೆದರೂ, ಆತ ಅತಿ ವೇಗದಿಂದ ಕಾರನ್ನು ಚಲಾಯಿಸಿ ನಾಯಿ ಮರಿಗಳ ಮೇಲೆ ಹತ್ತಿಸಿಕೊಂಡು ಹೋಗಿದ್ದಾನಂತೆ. ಹೀಗಾಗಿ ನಾಲ್ಕೂ ನಾಯಿ ಮರಿಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದು ಪ್ರಾಣಿದಯಾ ಸಂಘದವರು ಪೊಲೀಸರಿಗೆ ನೀಡಿದ್ದ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ 279/429 ಐಪಿಸಿ ಸೆಕ್ಷನ್ 11 ರ ಅಡಿಯಲ್ಲಿ ಕಂಬಿ ಹಿಂದೆ ತಳ್ಳಿದ್ದಾರೆ.