ETV Bharat / bharat

ಅಯೋಧ್ಯೆ ರಾಮ ಮಂದಿರ ದೇವಾಲಯದ ಭದ್ರತೆ ಕುರಿತು ಸಭೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ದೇವಸ್ಥಾನದ ಸುತ್ತಲೂ ಬಿಗಿ ಭದ್ರತೆ ಒದಗಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

author img

By

Published : Sep 8, 2020, 7:38 PM IST

Ram Temple in Ayodhya
Ram Temple in Ayodhya

ಅಯೋಧ್ಯೆ(ಉತ್ತರ ಪ್ರದೇಶ): ಬಹು ನಿರೀಕ್ಷಿತ ರಾಮ ಮಂದಿರ ನಿರ್ಮಾಣ ಕಾರ್ಯ ಅಧಿಕೃತವಾಗಿ ಈಗಾಗಲೇ ಶುರುಗೊಂಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಭವ್ಯ ರಾಮನ ಮಂದಿರ ನಿರ್ಮಾಣಗೊಳ್ಳಲಿದೆ.

ಇದರ ಮಧ್ಯೆ ಇಂದು ದೊಡ್ಡ ಮಟ್ಟದ ಸಭೆ ನಡೆಸಲಾಯಿತು. ದೇವಾಲಯದ ಭದ್ರತೆ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಎಡಿಜಿ ವಿಕೆ ಸಿಂಗ್​ ಹಾಗೂ ಎಡಿಜಿ ಎಸ್​ಎನ್​​ ಸಬ್ತಾ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆ ಮೂರು ತಿಂಗಳಲ್ಲಿ ಒಂದು ಸಲ ನಡೆಸಲು ನಿರ್ಧರಿಸಲಾಗಿದ್ದು, ರಾಮ ಜನ್ಮಭೂಮಿ ಟ್ರಸ್ಟ್​​​ನ ಸದಸ್ಯರು ಇದರಲ್ಲಿ ಭಾಗಿಯಾಗಿದ್ದರು.

ಸಭೆಯಲ್ಲಿ ಪ್ರಮುಖವಾಗಿ ದೇವಸ್ಥಾನದ ಸುತ್ತಲೂ ಬಿಗಿ ಭದ್ರತೆ ನೀಡುವ ಕುರಿತು ಚರ್ಚೆ ನಡೆಸಲಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೂ ಭದ್ರತೆಯಲ್ಲಿ ಯಾವುದೇ ರೀತಿಯ ಕೊರತೆ ಕಂಡು ಬರದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.