ETV Bharat / bharat

ನಾಟಕದ ಮೂಲಕ ಬುಡಕಟ್ಟು ಜನರಲ್ಲಿ  ಜಾಗೃತಿ; ಒಡಿಶಾದಲ್ಲೊಂದು ವಿಶಿಷ್ಟ ಪ್ರಯತ್ನ

ಇಲ್ಲಿನ ಬುಡಕಟ್ಟು ಸಮುದಾಯದ ಮಕ್ಕಳು ಸಾಮುದಾಯಿಕ ರೇಡಿಯೋ ಮೂಲಕ ಬುಡಕಟ್ಟು ಜನರಲ್ಲಿ ಸ್ಥಳೀಯ ಉಪಭಾಷೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Odisha's Community Radio
ಸಾಮಾಜಿಕ ನಾಟಕದ ಮೂಲಕ ಬುಡಕಟ್ಟು ಜನರಲ್ಲಿ ಕೊರೊನಾ ಜಾಗೃತಿ, ಒಡಿಶಾದಲ್ಲಿ ವಿಶಿಷ್ಟ ಪ್ರಯತ್ನ
author img

By

Published : Apr 25, 2020, 9:44 PM IST

Updated : Apr 25, 2020, 10:07 PM IST

ಕೊರಾಪುಟ್ (ಒಡಿಶಾ): ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಒಡಿಶಾದ ಕೊರಾಪುಟ್ ಎಂಬಲ್ಲಿ ಬುಡಕಟ್ಟು ಜನಾಂಗದ ಜನರು ತಮ್ಮಲ್ಲಿಯೇ ವಿಶಿಷ್ಟ ರೀತಿಯಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಈ ಕಾರ್ಯಕ್ರಗಳಲ್ಲಿ ಸಣ್ಣ ಸಣ್ಣ ಮಕ್ಕಳೇ ವೈರಸ್ ಬಗ್ಗೆ ಮಾಹಿತಿ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಿಗೆ ತಿಳಿಸಿಕೊಡುತ್ತಿದ್ದಾರೆ.

ಮೂಲಗಳ ಪ್ರಕಾರ, ಸ್ಥಳೀಯ ಸಂಗೀತಕಾರ ಹರಿಶ್ಚಂದ್ರ ಮಾಲಿ ನಿರ್ದೇಶಿಸಿ ಈ ಕಾರ್ಯಕ್ರಮಗಳನ್ನು ತಯಾರಿಸುತ್ತಿದ್ದಾರೆ. ಇವರು ಬುಡಕಟ್ಟು ಮಕ್ಕಳಿಗೆ ಸರಳ ಮತ್ತು ಅರ್ಥಪೂರ್ಣವಾದ ರೇಡಿಯೋ ನಾಟಕಗಳನ್ನು ಬುಡಕಟ್ಟು ಜನರ ಉಪಭಾಷೆ ದೇಸಿಯಾ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಇದರಿಂದಾಗಿ ಬುಡಕಟ್ಟು ಮಾರಣಾಂತಿಕ ಖಾಯಿಲೆಯ ಬಗೆಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗುತ್ತಿದೆ. ಶೋಭಾ ಸ್ವಯಂಸೇವಾ ಸಂಸ್ಥೆ ಈ ರೇಡಿಯೋ ಸ್ಟೇಷನ್ ನಡೆಸುತ್ತಿದ್ದು ಪ್ರಸಾರವಾಗುತ್ತಿರುವ ಮಕ್ಕಳ ಕಾರ್ಯಕ್ರಮಗಳು ಕೊರಾಪುಟ್ ಪ್ರದೇಶದಲ್ಲಿ ಜನರ ಗಮನ ಸಳೆಯುವಲ್ಲಿ ಯಶಸ್ವಿಯಾಗಿವೆ.

ಈ ರೇಡಿಯೋ ಕಾರ್ಯಕ್ರಮಗಳು ಕೊರಾಪುಟ್ ಪ್ರದೇಶದ್ಲಲಿ ಸಾಕಷ್ಟು ಜನ ಮೆಚ್ಚುಗೆ ಗಳಿಸಿವೆ. ಯಾಕೆಂದರೆ ಈ ಕಾರ್ಯಕ್ರಮಗಳನ್ನು ನಾವು ಸ್ಥಳೀಯ ಭಾಷೆಯಲ್ಲಿಯೇ ಪ್ರಸ್ತುಪಡಿಸುತ್ತಿದ್ದೇವೆ. ಈ ಜಾಗೃತಿ ನಾಟಕಗಳಲ್ಲಿ ನಾವು ಸಾಕಷ್ಟು ಸಂತಸದಿಂದ ಪಾಲ್ಗೊಳ್ಳುತ್ತಿದ್ದೇವೆ ಅಂತಾರೆ ಬುಡಕಟ್ಟು ಹುಡುಗಿ ಪಿಂಕಿ.

Last Updated : Apr 25, 2020, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.