ಕಲಹಂಡಿ( ಒಡಿಶಾ): ಹಣದ ವಿಚಾರಕ್ಕಾಗಿ ಮಹಿಳೆಯೋರ್ವಳು ಬಾಯ್ಫ್ರೆಂಡ್ನ ಕೊಲೆ ಮಾಡಿರುವ ಘಟನೆ ಒಡಿಶಾದ ಕಲಹಂಡಿಯಲ್ಲಿ ನಡೆದಿದ್ದು, ಆಕೆಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
32 ವರ್ಷದ ಮಹಿಳೆ ತನ್ನ 29 ವರ್ಷದ ಬಾಯ್ಫ್ರೆಂಡ್ ಜೊತೆ ಹಣದ ವಿಚಾರವಾಗಿ ಮಾಡಿದ ಜಗಳ ತಾರಕಕ್ಕೇರಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಸೂಪರಿಡೆಂಟ್ ಡಾ. ಶ್ರವಣ ವಿವೇಕ್ ತಿಳಿಸಿದ್ದು, ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದಿದ್ದಾರೆ. ಆರಂಭದಲ್ಲಿ ಕೊಲೆ ಮಾಡಿರುವ ಸಂಗತಿ ಒಪ್ಪಿಕೊಳ್ಳಲು ಮಹಿಳೆ ನಿರಾಕರಿಸಿದ್ದಳು ಎಂಬ ಮಾಹಿತಿಯನ್ನು ಅವರು ತಿಳಿಸಿದ್ದಾರೆ.