ಭುವನೇಶ್ವರ (ಒಡಿಶಾ): ಐಎಫ್ಎಸ್ ಅಧಿಕಾರಿ ಅಭಯ್ ಪಾಠಕ್ ಮತ್ತು ಅವರ ಪುತ್ರನ ವಿರುದ್ಧದ ಅಕ್ರಮ ಆಸ್ತಿ ಹಳಿಕೆ ಪ್ರಕರಣ ಸಂಬಂಧ ಇಲ್ಲಿನ ಗೋಪಾಲ್ಪುರದ ಶಾಸಕ ಪ್ರದೀಪ್ ಪಾಣಿಗ್ರಹಿಯನ್ನು ಅಪರಾಧ ವಿಭಾಗ ಬಂಧಿಸಿದೆ.
ಬಿಜು ಜನತಾದಳದ ಶಾಸಕ ಪಾಣಿಗ್ರಹಿಯನ್ನು ಪಕ್ಷದ ಅಧ್ಯಕ್ಷ ನವೀನ್ ಪಟ್ನಾಯಕ್ ಉಚ್ಛಾಟಿಸಿ ನವೆಂಬರ್ 7ರಂದು ಆದೇಶ ನೀಡಿದ್ದರು. ವರದಿಗಳ ಪ್ರಕಾರ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಿಡಿಸಿದೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಸಂಬಂಧ ಪಾಣಿಗ್ರಹಿಯನ್ನು ಪ್ರಶ್ನಿಸಿದ ಬಳಿಕ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲೂ ಮರು ನಾಮಕರಣ ಪರ್ವ: ಎರಡು ನಗರಗಳ ಹೆಸರನ್ನು ಬದಲಾಯಿಸಲು ಮುಂದಾದ ಸರ್ಕಾರ