ನವದೆಹಲಿ: ಭಾರೀ ವಿವಾದ ಮತ್ತು ಚರ್ಚೆಗೆ ಕಾರಣವಾಗಿದ್ದ ದೇಶದ ಈಶಾನ್ಯ ರಾಜ್ಯ ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್-ಎನ್‌ಆರ್‌ಸಿ) ಅಂತಿಮ ಪಟ್ಟಿ ಆ.31ರಂದು ಆನ್‍ಲೈನ್‍ನಲ್ಲಿ ಪ್ರಕಟಗೊಳ್ಳಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉದ್ಬವಿಸಿದ ಅನೇಕ ಕಾನೂನು ಸವಾಲುಗಳು ಸೇರಿದಂತೆ ಈ ವಿವಾದದಲ್ಲಿ ಏನೆಲ್ಲಾ ನಡೀತು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಜೊತೆಗೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರ ಗತಿ ಏನು? ರಾಷ್ಟ್ರೀಯ ಪೌರರ ನೋಂದಣಿ ವಿವಾದದ ಕಾಲಾನುಕ್ರಮ ಇಲ್ಲಿದೆ.
- ಜುಲೈ 19,1948 - ಪಶ್ಚಿಮ ಪಾಕಿಸ್ತಾನ (ನಿಯಂತ್ರಣ) ಒಳನುಸುಳುವಿಕೆ ಸುಗ್ರಿವಾಜ್ಞೆ ಜಾರಿ
- ಏಪ್ರಿಲ್ 8, 1950 - ನೆಹರೂ-ಲಿಯಾಕತ್ ಒಪ್ಪಂದಕ್ಕೆ ಸಹಿ
- ಮಾರ್ಚ್ 1, 1950 - (ವಲಸಿಗರು) ಅಸ್ಸೋಂನಿಂದ ಗಡಿಪಾರು ಕಾಯ್ದೆ ಜಾರಿ
- 1951 - ಅಸ್ಸೋಂನ ಎನ್‌ಆರ್‌ಸಿ ಪಟ್ಟಿ ಸೇರ್ಪಡೆ ಬಳಿಕ ಸ್ವತಂತ್ರ ಭಾರತದ ಮೊದಲ ಜನಗಣತಿ
- ಡಿಸೆಂಬರ್ 30, 1955 - ಎನ್‌ಆರ್‌ಸಿ ಪೌರತ್ವ ಕಾಯ್ದೆ ಜಾರಿ
- 1957 - (ವಲಸಿಗರು) ಅಸ್ಸೋಂನಿಂದ ಗಡಿಪಾರು ಕಾಯ್ದೆ ರದ್ದು
- ಅಕ್ಟೋಬರ್ 24, 1960 ರಂದು ಅಸ್ಸೋಂ ಅಸೆಂಬ್ಲಿಯಲ್ಲಿ ಅಸ್ಸೋಂ ಭಾಷೆ ಮಸೂದೆ ಪಾಸ್
- ಮೇ 19, 1961 - ಅಸ್ಸೋಂನ ಬರಾಕ್ ಕಣಿವೆಯಲ್ಲಿ ಬಂಗಾಳಿ ಭಾಷಾ ಆಂದೋಲನ ಆರಂಭ
- 1961-1996 - 'ಪಾಕ್ ನಾಗರಿಕರು ಭಾರತದಲ್ಲಿ ಒಳನುಸುಳುವಿಕೆ ತಡೆಗಟ್ಟುವಿಕೆ' ಯೋಜನೆಯಡಿ ಸಾವಿರಾರು ಪೂರ್ವ ಪಾಕಿಸ್ತಾನಿ ವಲಸಿಗರು ಅಸ್ಸೋಂನಿಂದ ಗಡಿಪಾರು
- ಏಪ್ರಿಲ್-ಸೆಪ್ಟೆಂಬರ್ 1965 - ಇಂಡೋ-ಪಾಕ್ ಯುದ್ಧ, ಪೂರ್ವ ಪಾಕಿಸ್ತಾನದಿಂದ ಭಾರತದೊಳಗೆ ನಿರಾಶ್ರಿತರ ಒಳಹರಿವು ಹೆಚ್ಚಳ
- ಆಗಸ್ಟ್ 8, 1967 - ಅಸ್ಸೋಂ ವಿದ್ಯಾರ್ಥಿ ಸಂಘಟನೆ ರಚನೆ
- 1967 - ಬರಾಕ್ ಕಣಿವೆಯಿಂದ ಮೂರು ಜಿಲ್ಲೆಗಳ ಅಧಿಕೃತ ಭಾಷೆಯಾಗಿ ಬಂಗಾಳಿ, ಅಸ್ಸೋಂ ಭಾಷಾ ಕಾಯ್ದೆಗೆ ತಿದ್ದುಪಡಿ
- 1971 - ಬಾಂಗ್ಲಾದೇಶ ವಿಮೋಚನಾ ದಿನ, ಭಾರತಕ್ಕೆ ಬಾಂಗ್ಲಾ ನಿರಾಶ್ರಿತರ ಹೆಚ್ಚಳಕ್ಕೆ ಕಾರಣ
- 1978 - ಮಂಗೋಲಾಯ್ಡ್ ಸಂಸದೀಯ ಕ್ಷೇತ್ರಕ್ಕೆ ನಡೆದ ಬೈ-ಎಲೆಕ್ಷನ್ನಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರತಿಭಟನೆ
- 1997 - ಚುನಾವಣಾ ಆಯೋಗವು "ಡಿ" ಅಕ್ಷರವನ್ನು ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರಿಸಲು ನಿರ್ಧಾರ. ಅಸ್ಸೋಂನ 2.3 ಲಕ್ಷ ಮತದಾರರ ಹೆಸರಿನ ಪಕ್ಕದಲ್ಲಿ 'ಅನುಮಾನಾಸ್ಪದ' ಅಥವಾ 'ಸಂಶಯಾಸ್ಪದ ಮತದಾರರು' ಎಂದು ಸೂಚನೆ
- 2003 - ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ
- ಜುಲೈ 2005 - ಎಸ್‌ಸಿ ಅಕ್ರಮ ವಲಸಿಗರ (ನ್ಯಾಯಮಂಡಳಿಗಳ ನಿರ್ಣಯ) ಕಾಯ್ದೆ
- ಜುಲೈ 2009 - ಅಸ್ಸೋಂ ಮೂಲದ ಎನ್‌ಜಿಒದಿಂದ ದಾಖಲೆಗಳಿಲ್ಲದ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ, ನಾಗರಿಕರ ಪಟ್ಟಿ ನವೀಕರಿಸುವಂತೆ ಸುಪ್ರೀಂಕೋರ್ಟ್‌ಗೆ ಮೊರೆ
- ಜುಲೈ 2011 - ಎನ್‌ಆರ್‌ಸಿಗೆ ಸಂಬಂಧಿಸಿದ ಹೊಸ ವಿಧಾನ ರೂಪಿಸಲು ಕ್ಯಾಬಿನೆಟ್ ಉಪಸಮಿತಿ ರಚನೆ
- ಜುಲೈ 2012 - ಅಸ್ಸೋಂ ಕ್ಯಾಬಿನೆಟ್ನಲ್ಲಿ ಉಪಸಮಿತಿ ವರದಿ ಅಂಗೀಕಾರ
- ಜುಲೈ 2013 - ಅಸ್ಸೋಂ ಸರ್ಕಾರ ಎನ್‌ಆರ್‌ಸಿ ಹೊಸ ವಿಧಾನದ ಮಾಹಿತಿ ಗೃಹ ಇಲಾಖೆ ಸಚಿವಾಲಯಕ್ಕೆ ರವಾನೆ
- ಆಗಸ್ಟ್ 2013 - ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ, ಎನ್‌ಆರ್‌ಸಿ ನವೀಕರಿಸಲು ಎಣಿಕೆ ಪ್ರಕ್ರಿಯೆ ತ್ವರಿತಗೊಳಿಸಲು ಆದೇಶ
- ಡಿಸೆಂಬರ್ 2013 - ಎನ್‌ಆರ್‌ಸಿ ನವೀಕರಣಕ್ಕೆ ಕೇಂದ್ರದ ಗೆಜೆಟ್ ಅಧಿಸೂಚನೆ
- 2014 - ಸುಪ್ರೀಂಕೋರ್ಟ್ನಿಂದ 64 ವಿದೇಶಿಯರ ನ್ಯಾಯಮಂಡಳಿ ಸ್ಥಾಪನೆಗೆ ಆದೇಶ
- ಆಗಸ್ಟ್ 2015 - ಎನ್‌ಆರ್‌ಸಿ ನವೀಕರಣ ಅರ್ಜಿ ಆಹ್ವಾನ, ಅಸ್ಸೋಂ ಒಪ್ಪಂದದ ನಿಬಂಧನೆಗಳ ಅರ್ಜಿ ವಿಚಾರಣೆ
- ಜುಲೈ 19, 2016 - ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕಲ್ಪಿಸಲು ಪೌರತ್ವ (ತಿದ್ದುಪಡಿ) ಮಸೂದೆ ಮಂಡನೆ
- ಡಿಸೆಂಬರ್ 31, 2017 - ಹೊಸ ಎನ್‌ಆರ್‌ಸಿಯ ಮೊದಲ ಕರಡು ಪ್ರಕಟ, 3.29 ಕೋಟಿ ಅರ್ಜಿದಾರರಲ್ಲಿ ಕೇವಲ 1.9 ಕೋಟಿ ಜನರು ಮಾತ್ರ ನೋಂದಣಿಗೆ ಸೇರ್ಪಡೆ
- ಮೇ 2018 - ಅಸ್ಸೋಂನಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ವ್ಯಾಪಕ ಪ್ರತಿಭಟನೆ, ಹಿಂಸಾತ್ಮಕ ಕೃತ್ಯ
- ಜುಲೈ 30, 2018 - ಅಂತಿಮ ಎನ್‌ಆರ್‌ಸಿ ಕರಡು ಪ್ರತಿ ಸಿದ್ದ, 2.89 ಕೋಟಿ ಜನರ ಹೆಸರು ಸೇರ್ಪಡೆ, 40ಲಕ್ಷ ಹೆಸರು ಹೊರಕ್ಕೆ
- ಜನವರಿ 8, 2019 - ಪೌರತ್ವ (ತಿದ್ದುಪಡಿ) ಮಸೂದೆ- 2019 ಲೋಕಸಭೆಯಲ್ಲಿ ಮಂಡನೆ,ಅಂಗೀಕಾರ
- ಜೂನ್ 21, 2019 - ಎನ್‌ಆರ್‌ಸಿ ಅಂತಿಮ ಕರಡಿನಲ್ಲಿ ಸೇರಿಸಲಾದ ಹೆಸರುಗಳ ಮರು ಪರಿಶೀಲನೆ ಕೋರಿ ಸುಪ್ರೀಂಕೋರ್ಟ್‌ಗೆ ಮೊರೆ
- ಜೂನ್ 26, 2019 - ಎನ್‌ಆರ್‌ಸಿಯ ಹೆಚ್ಚುವರಿ ಕರಡು ಹೊರತುಪಡಿಸಿ ಮತ್ತೊಂದು ಪಟ್ಟಿ ಪ್ರಕಟ
- ಜುಲೈ 19, 2019 - ರಾಷ್ಟ್ರೀಯ ಮರು ಕರಡನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಪ್ರೀಂಗೆ ಮನವಿ
- ಜುಲೈ 22, 2019 - ಪಟ್ಟಿ ಪರಿಶೀಲನೆಗಾಗಿ ಒತ್ತಾಯಿಸಿ ಕೇಂದ್ರ ಮತ್ತು ಅಸ್ಸೋಂ ಸರ್ಕಾರ ಸಲ್ಲಿಸಿದ್ದ ಅರ್ಜಿ ಸುಪ್ರೀಂನಿಂದ ತಿರಸ್ಕೃತ, ಅಂತಿಮ ಪಟ್ಟಿ ಪ್ರಕಟಿಸಲು ರಾಜ್ಯ ಎನ್‌ಆರ್‌ಸಿ ಸಂಯೋಜಕರಿಗೆ 2019 ರ ಆಗಸ್ಟ್ 31ರ ಗಡುವು ವಿಸ್ತರಣೆ
- ಆಗಸ್ಟ್ 13, 2019 - ಗಡುವು ಮತ್ತಷ್ಟು ವಿಸ್ತರಿಸುವಂತೆ ಕೇಂದ್ರದ ಮನವಿ ಸುಪ್ರೀಂನಿಂದ ತಿರಸ್ಕೃತ, ಆನ್‍ಲೈನ್‍ನಲ್ಲಿ ಅಂತಿಮ ಪಟ್ಟಿ ಪ್ರಕಟಿಸುವಂತೆ ಕೇಂದ್ರಕ್ಕೆ ಸೂಚನೆ