ETV Bharat / bharat

ಆಹಾರ ಧಾನ್ಯ ದಾಸ್ತಾನು ಸಾಕಷ್ಟಿದೆ,ಚಿಂತೆ ಬೇಡ.. ಕೇಂದ್ರ ಸಚಿವ ಪಾಸ್ವಾನ್ ಸ್ಪಷ್ಟನೆ

ಪ್ರಧಾನಮಂತ್ರಿ ಗರೀಬ್ ಯೋಜನೆಯಡಿ ದೇಶದ 81 ಕೋಟಿ ಪಡಿತರದಾರರಿಗೆ ಉಚಿತ ಆಹಾರ ಧಾನ್ಯಗಳನ್ನು ಯಾವುದೇ ವಿಳಂಬವಿಲ್ಲದೇ ಹಂಚಿಕೆ ಮಾಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Paswan
Paswan
author img

By

Published : Apr 9, 2020, 5:24 PM IST

ಹೊಸದಿಲ್ಲಿ : ದೇಶದಲ್ಲಿ ಆಹಾರ ಧಾನ್ಯಗಳ ಸಂಗ್ರಹ ಸಾಕಷ್ಟಿದೆ. ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ಸರಾಗವಾಗಿ ಮುನ್ನಡೆಯಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ರಾಮವಿಲಾಸ ಪಾಸ್ವಾನ್ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಫುಡ್​ ಕಾರ್ಪೊರೇಷನ್ ಆಫ್​ ಇಂಡಿಯಾದಿಂದ ತಮ್ಮ ಪಾಲಿನ ಆಹಾರ ಧಾನ್ಯ ಹಾಗೂ ಕಾಳನ್ನು ಸೂಕ್ತ ಸಮಯದಲ್ಲಿ ಎತ್ತುವಳಿ ಮಾಡಿ ಆಹಾರ ಧಾನ್ಯಗಳ ಪೂರೈಕೆ ಸುಗಮವಾಗಿರುವಂತೆ ನೋಡಿಕೊಳ್ಳಬೇಕೆಂದು ರಾಜ್ಯಗಳಿಗೆ ಸೂಚಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಯೋಜನೆಯಡಿ ದೇಶದ 81 ಕೋಟಿ ಪಡಿತರದಾರರಿಗೆ ಉಚಿತ ಆಹಾರ ಧಾನ್ಯಗಳನ್ನು ಯಾವುದೇ ವಿಳಂಬವಿಲ್ಲದೇ ಹಂಚಿಕೆ ಮಾಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಲಾಕ್​ಡೌನ್​ ಸಮಯದಲ್ಲಿ ಪ್ರತಿ ರೇಷನ್​ ಕಾರ್ಡ್‌ಗೆ 5ಕೆಜಿ ಆಹಾರ ಧಾನ್ಯ, 1 ಕೆಜಿ ದ್ವಿದಳ ಧಾನ್ಯಗಳನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ಮೂರು ತಿಂಗಳವರೆಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.