ETV Bharat / bharat

ಕೊರೊನಾ ಸೋಂಕು ತಡೆಗೆ ಕ್ರಮ: ರಾಯ್‌ಪುರ NIT​ ವಿದ್ಯಾರ್ಥಿಗಳ ಹೊಸ ಅನ್ವೇಷಣೆ

ರಾಯ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಕೋವಿಡ್​ -19 ಸೋಂಕು ಹರಡುವಿಕೆ ತಡೆಯಲು ಹೊಸ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.

NIT-Raipur students develop app to combat coronavirus spread
ಕೊರೊನಾ ಸೋಂಕು ನಿಯಂತ್ರಿಸಲು ರಾಯ್‌ಪುರದ ಎನ್ಐಟಿ​ ವಿದ್ಯಾರ್ಥಿಗಳಿಂದ ನವ ಅನ್ವೇಷಣೆ
author img

By

Published : Apr 12, 2020, 12:39 PM IST

ರಾಯ್‌ಪುರ (ಛತ್ತೀಸ್​ಗಡ): ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ಪ್ರಪಂಚದಾದ್ಯಂತ ಹರಡುತ್ತಿದೆ. ಸೋಂಕು ಇರುವವರು ನಮ್ಮ ಸುತ್ತ ಮುತ್ತ ಸುಳಿದಾಡುತ್ತಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗಾಗಿಯೇ ಕಾಯಿಲೆ ಹರಡುತ್ತಾ ಹೋಗುತ್ತಿದೆ.

ಈ ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಿಸಲು ರಾಯ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಅಪ್ಲಿಕೇಷನ್​ ಕೋವಿಡ್​-19 ಪಾಸಿಟಿವ್​ ಆಗಿದ್ದು, ನಿಕಟ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಸಂಶೋಧನಾ ತಂಡದಲ್ಲಿ ಅಮನ್ ವರ್ಮಾ, ಆಯುಷ್ ಗನುಲಿ, ಅಮ್ಮರ್ ಅಲ್ವಿ, ಆರ್ಯನ್ ಸರ್ಕಾರ್ ಮತ್ತು ಕೌಶಿಕ್ ಮಿಶ್ರಾ ಎಂಬ ಐವರು ವಿದ್ಯಾರ್ಥಿಗಳು ಇದ್ದಾರೆ.

ಈ ಕುರಿತು ಮಾತನಾಡಿದ ತಂಡದ ನಾಯಕ ಅಮನ್ ವರ್ಮಾ, ಚೀನಾ ಮತ್ತು ಸಿಂಗಾಪುರದಲ್ಲೂ ಈ ರೀತಿಯ ಆ್ಯಪ್‌ಗಳನ್ನು ಬಳಸಲಾಗುತ್ತಿದೆ. ಈ ಅಪ್ಲಿಕೇಶನ್‌ ಮೂಲಕ ಯಾವ ಪ್ರದೇಶವು ಹೆಚ್ಚು ಸೂಕ್ಷ್ಮವಾಗಿದೆ ಮತ್ತು ಜನರು ಎಲ್ಲಿ ಹೆಚ್ಚು ಸೇರುತ್ತಾರೆ ಎಂಬುದನ್ನು ತಿಳಿಯಲೂ ಸಾಧ್ಯವಾಗುತ್ತದೆ ಎಂದರು.

ಶೀಘ್ರದಲ್ಲೇ ಈ ಆ್ಯಪ್ ಅನ್ನು ಸರ್ಕಾರದ ಮುಂದಿಡಲು ನಿರ್ಧರಿಸಿದ್ದು, ಒಂದು ವೇಳೆ ಸರ್ಕಾರ ಅನುಮೋದಿಸಿದರೆ ಅದು ಸಾಮಾನ್ಯ ಜನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಅಮನ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.