ETV Bharat / bharat

‘ಶೂನ್ಯ ಬಂಡವಾಳ ಕೃಷಿ’ಗೆ ಒತ್ತು... 2022 ರ ವೇಳೆಗೆ ರೈತರ ಆದಾಯ ದ್ವಿಗುಣ

ಪ್ರಧಾನಿ ಮೋದಿ ನೇತೃತ್ವದ 2 ನೇ ಅವಧಿಯ ಕೇಂದ್ರ ಬಜೆಟ್​ ಮಂಡನೆ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

author img

By

Published : Jul 5, 2019, 3:58 PM IST

Updated : Jul 5, 2019, 5:24 PM IST

‘ಶೂನ್ಯ ಬಂಡವಾಳ ಕೃಷಿ’ಗೆ ಒತ್ತು

ನವದೆಹಲಿ: ಮೋದಿ ಸರ್ಕಾರದ ಮೊದಲ ಬಜೆಟ್​ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ನಿರೀಕ್ಷೆಯಂತೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಮಧ್ಯಂತರ ಬಜೆಟ್​​ನಲ್ಲಿ ಭರವಸೆ ನೀಡಿದ್ದಂತೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು. ಪ್ರಮುಖ ಬೆಳೆ ಹಾಗೂ ಮಧ್ಯಂತರ ಬೆಳೆಗಳಿಂದ ಬಂದ ಆದಾಯದ ಸಮತೋಲನ ಕಾಯುವಿಕೆಗೆ ‘ಶೂನ್ಯ ಬಂಡವಾಳ ಕೃಷಿಗೆ’ ಹೆಚ್ಚಿನ ಒತ್ತು ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ಅಲ್ಲದೇ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಲು ರಾಸಾಯನಿಕಗಳ ಉಪಯೋಗವನ್ನು ಕಡಿಮೆ ಮಾಡಿ ರಸಗೊಬ್ಬರ ಬಳಕೆಗೆ ಯೋಜನೆ ರೂಪಿಸಲಾಗಿದೆ. ತಳಮಟ್ಟದ ರೈತರನ್ನು ಗುರುತಿಸಿ, ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಯಶಸ್ವಿ ರೈತರನ್ನಾಗಿಸಲು ಯೋಜಿಸುವ ಗುರಿಯನ್ನ ಸರ್ಕಾರ ಹೊಂದಿದೆ.

budjet
‘ಶೂನ್ಯ ಬಂಡವಾಳ ಕೃಷಿ’ಗೆ ಒತ್ತು

ಈ ರೀತಿಯ ಕ್ರಮಗಳು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಸಚಿವೆ ನಿರ್ಮಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಅಂಶಗಳು: ಪ್ರಸಕ್ತ ವರ್ಷಕ್ಕೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಮುಂದುವರೆಸಲಾಗುತ್ತಿದ್ದು, ವಾರ್ಷಿಕ ರೂ. 6 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಸುಮಾರು 14.5 ಕೋಟಿ ರೈತರಿಗೆ ಈ ಪ್ರಯೋಜನ ಸಿಗಲಿದೆ. ಸಾಂಪ್ರದಾಯಿಕ ಕೃಷಿಯನ್ನು ಹೆಚ್ಚು ಉತ್ಪಾದನಾಯುಕ್ತ ಮಾಡಲು ಕ್ಲಸ್ಟರ್ ಮಾದರಿ ಪದ್ಧತಿ ಮೂಲಕ ಸಾಂಪ್ರದಾಯಿಕ ಅಗ್ರೋ ಕೈಗಾರಿಕೆಗಳನ್ನು ಉತ್ತೇಜಿಸಲು ಯೋಜಿಸಲಾಗಿದೆ.- 12.5 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ (2 ಹೆಕ್ಟೇರ್) ವಾರ್ಷಿಕ 6000 ರೂ. (ಮೂರು ಕಂತಿನಲ್ಲಿ) ನೀಡಲಾಗುತ್ತದೆ. ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ 2 ನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ. ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಮೂಲಕ ಮಾಸಿಕ 3000 ರೂ. ಪಿಂಚಣಿ ನೀಡಲಾಗುವುದು.

ಏನಿದು ಶೂನ್ಯ ಕೃಷಿ ಬಂಡವಾಳ:
ಶೂನ್ಯ ಬಂಡವಾಳ ಕೃಷಿ, ಇದು ಪಕ್ಕಾ ಕರ್ನಾಟಕದ ಪರಿಕಲ್ಪನೆ ಎಂಬುದು ಇಲ್ಲಿ ವಿಶೇಷ. ರೈತ ಚಳವಳಿಯ ದಿನಗಳಲ್ಲಿ ಈ ಪರಿಕಲ್ಪನೆ ರಾಜ್ಯದಲ್ಲಿ ಬೆಳಕಿಗೆ ಬಂದಿತ್ತು. ಕೃಷಿ ತಜ್ಞ ಸುಭಾಷ್‌ ಪಾಲೇಕರ್‌ ಮತ್ತು ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ಈ ಪರಿಕಲ್ಪನೆ ಜಾರಿಗೆ ಬಂದಿತ್ತು. ಸಾವಯವ ಮಾದರಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಈ ಪ್ರಯೋಗ ಕರ್ನಾಟಕದಲ್ಲಿ ಯಶಸ್ವಿಯಾಗುತ್ತಲೇ ದೇಶದ ಹಲವು ರಾಜ್ಯಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಯಿತು. ಸದ್ಯ ಕೇಂದ್ರ ಸರ್ಕಾರವೇ ಈ ಪದ್ಧತಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.

Intro:Body:

‘ಶೂನ್ಯ ಬಂಡವಾಳ ಕೃಷಿ’ಗೆ ಒತ್ತು.. 2022 ರ ವೇಳೆಗೆ ರೈತರ ಆದಾಯ ದ್ವಿಗುಣ

 ಮೋದಿ 2.0 ಸರ್ಕಾರದ  ಮೊದಲ ಬಜೆಟ್​ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ನಿರೀಕ್ಷೆಯಂತೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮಧ್ಯಂತರ ಬಜೆಟ್ ನಲ್ಲಿ ಭರವಸೆ ನೀಡಿದಂತೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು

ಪ್ರಮುಖ ಬೆಳೆ ಹಾಗೂ ಮಧ್ಯಂತರ ಬೆಳೆಗಳಿಂದ ಬಂದ ಆದಾಯದ ಸಮತೋಲನ ಕಾಯುವಿಕೆಗೆ ‘ಶೂನ್ಯ ಬಂಡವಾಳ ಕೃಷಿಗೆ’ ಹೆಚ್ಚಿನ ಒತ್ತು ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ಅಲ್ಲದೇ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಲು ರಾಸಾಯನಿಕಗಳ ಉಪಯೋಗವನ್ನು ಕಡಿಮೆ ಮಾಡಿ ರಸಗೊಬ್ಬರ ಬಳಕೆಗೆ ಯೋಜನೆ ರೂಪಿಸಲಾಗಿದೆ.  

ತಳಮಟ್ಟದ ರೈತರನ್ನು ಗುರುತಿಸಿ, ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಯಶಸ್ವಿ ರೈತರನ್ನಾಗಿಸಲು ಯೋಜಿಸುವ ಗುರಿಯನ್ನ ಸರ್ಕಾರ ಹೊಂದಿದೆ.   ಈ ರೀತಿಯ ಕ್ರಮಗಳು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತವೆ ಎಂದು ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪ್ರಮುಖ ಅಂಶಗಳನ್ನ ಗಮನಿಸುವುದಾದರೆ....,

 - ಪ್ರಸಕ್ತ ವರ್ಷಕ್ಕೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಮುಂದುವರೆಸಲಾಗುತ್ತಿದ್ದು, ವಾರ್ಷಿಕ ರೂ. 6 ಸಾವಿರ ರೂ. ಸಹಾಯಧನ ನೀಡುತ್ತಿದ್ದು, ಸುಮಾರು 14.5 ಕೋಟಿ ರೈತರಿಗೆ ಪ್ರಯೋಜನೆ ಸಿಗಲಿದೆ.

- ಸಾಂಪ್ರದಾಯಿಕ ಕೃಷಿಯನ್ನು ಹೆಚ್ಚು ಉತ್ಪಾದನಾಯುಕ್ತ ಮಾಡಲು ಕ್ಲಸ್ಟರ್ ಮಾದರಿ ಪದ್ಧತಿ ಮೂಲಕ ಸಾಂಪ್ರದಾಯಿಕ ಆಗ್ರೋ ಕೈಗಾರಿಕೆಗಳನ್ನು ಉತ್ತೇಜಿಸಲು ಯೋಜಿಸಲಾಗಿದೆ.

- 12.5 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ (2 ಹೆಕ್ಟೇರ್) ವಾರ್ಷಿಕ 6000 ರೂ. (ಮೂರು ಕಂತಿನಲ್ಲಿ) ನೀಡಲಾಗುತ್ತದೆ . ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ 2 ನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ.

- ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಮೂಲಕ ಮಾಸಿಕ 3000 ರೂ.  ಪಿಂಚಣಿ ನೀಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳಿಗೆ 3000 ರೂ. ನೀಡುವುದಾಗಿ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ. 

Conclusion:
Last Updated : Jul 5, 2019, 5:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.