ನವದೆಹಲಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಕೆಲ ವೆಬ್ಸೈಟ್ಗಳು ಷಡ್ಯಂತ್ರ ಮಾಡುತ್ತಿವೆ. ಈ ಷಡ್ಯಂತ್ರಗಳಿಗೆ ನಾವು ಸೊಪ್ಪು ಹಾಕುವುದಿಲ್ಲ. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನೋಟ್ ಬ್ಯಾನ್ ವೇಳೆ, ಕೆಲ ಬಿಜೆಪಿ ನಾಯಕರು 40 ರಷ್ಟು ಕಮಿಷನ್ ಪಡೆದು ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಸ್ಟಿಂಗ್ ಆಪರೇಷನ್ ವಿಡಿಯೋ ರಿಲೀಸ್ ಮಾಡಿದ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಈ ಎಚ್ಚರಿಕೆ ಕೊಟ್ಟಿದ್ದಾರೆ.
#WATCH Live: Nirmal Sitharaman addresses a press conference in Delhi https://t.co/wPajFRHp03
— ANI (@ANI) March 27, 2019 " class="align-text-top noRightClick twitterSection" data="
">#WATCH Live: Nirmal Sitharaman addresses a press conference in Delhi https://t.co/wPajFRHp03
— ANI (@ANI) March 27, 2019#WATCH Live: Nirmal Sitharaman addresses a press conference in Delhi https://t.co/wPajFRHp03
— ANI (@ANI) March 27, 2019
ಏನಿದು ವಿವಾದ:
ಖಾಸಗಿ ವೆಬ್ಸೈಟ್ ವೊಂದು ಬಿಜೆಪಿ ನಾಯಕರು ಹಳೆನೋಟುಗಳನ್ನ 40 ರಷ್ಟು ಕಮಿಷನ್ ಮೇಲೆ ಎಕ್ಸೆಂಜ್ ಮಾಡಿಕೊಳ್ಳುತ್ತಿರುವ ವಿಡಿಯೋವೊಂದನ್ನ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ರಿಲೀಸ್ ಮಾಡಿದ್ದವು.
ನೋಟು ರದ್ಧತಿ ವೇಳೆ ಬಿಜೆಪಿ ನಾಯಕರು ಇಂತಹ ಕಮಿಷನ್ ದಂಧೆ ನಡೆಸಿದ್ದರು ಎಂದು ಆರೋಪಿಸಿತ್ತು. ಈ ಬಗ್ಗೆ ಖಾಸಗಿ ವೆಬ್ ಸೈಟ್ ವೊಂದು ಈ ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕಟಿಸಿತ್ತು.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವೆ ನಿರ್ಮಲಾ ಸೀತಾರಾಮನ್, ಈ ವಿಡಿಯೋಗೆ ಯಾವುದೇ ಮಾನ್ಯತೆ ಆಗಲಿ, ಇದರಲ್ಲಿ ಸ್ಪಷ್ಟತೆ ಆಗಲಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಇಮೇಜ್ಗೆ ಡ್ಯಾಮೇಜ್ ಮಾಡುವ ಉದ್ದೇಶದಿಂದಲೇ ಇಂತಹ ವಿಡಿಯೋಗಳನ್ನ ಪ್ರಕಟಿಸಲಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
Defence Minister Nirmala Sitharaman:Congress did a sting operation and made it public y'day, through TNN World, a website-based news portal. This was the same website which showed live Kapil Sibal's press conference on EVM, in January. This website was registered in December 2018 pic.twitter.com/L4Jb6LyYrN
— ANI (@ANI) March 27, 2019 " class="align-text-top noRightClick twitterSection" data="
">Defence Minister Nirmala Sitharaman:Congress did a sting operation and made it public y'day, through TNN World, a website-based news portal. This was the same website which showed live Kapil Sibal's press conference on EVM, in January. This website was registered in December 2018 pic.twitter.com/L4Jb6LyYrN
— ANI (@ANI) March 27, 2019Defence Minister Nirmala Sitharaman:Congress did a sting operation and made it public y'day, through TNN World, a website-based news portal. This was the same website which showed live Kapil Sibal's press conference on EVM, in January. This website was registered in December 2018 pic.twitter.com/L4Jb6LyYrN
— ANI (@ANI) March 27, 2019
ಇದೇ ವೇಳೆ ಮಾತನಾಡಿದ ಅವರು, ನಾವು ಕಾನೂನು ಸಲಹೆ ತೆಗೆದುಕೊಂಡು ಕ್ರಮಕ್ಕೆ ಮುಂದಾಗಲಿದ್ದೇವೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಿಂದ ಬಿಜೆಪಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ನಿರಂತರವಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನ ಮಾಡುತ್ತಿದೆ. ಸುಳ್ಳನ್ನು ಹರಡಲು ಹಲವು ಸಂಸ್ಥೆಗಳನ್ನ ಹುಟ್ಟುಹಾಕಿದೆ ಎಂದು ಕಿಡಿ ಕಾರಿದರು.
ವೈಯಕ್ತಿಕವಾಗಿ ಹಾಗೂ ಹಲವರು ಸೇರಿ ಮಾಡುತ್ತಿರುವ ಕಾನ್ಫರಸಿಗೆ ಬಿಜೆಪಿ ಸೊಪ್ಪು ಹಾಕುವುದಿಲ್ಲ. ಸುಳ್ಳು ಸ್ಟ್ರಿಂಗ್ ಆಪರೇಷನ್ಗಳನ್ನ ಮಾಡಿ ಪಕ್ಷದ ಮನೋಬಲ ಕಡಿಮೆ ಮಾಡಲು ಹವಣಿಸುತ್ತಿದೆ. ಈ ಬಗ್ಗೆ ನಾವು ಸುಮ್ಮನೆ ಕೂಡುವುದಿಲ್ಲ. ಈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ. ಕೆಲ ವೆಬ್ ಸೈಟ್ಗಳು ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಅಂತಹವರ ವಿರುದ್ಧ ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.