ನವದೆಹಲಿ : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯ ಪತ್ನಿ , ಬಿಹಾರದ ಔರಂಗಾಬಾದ್‌ನ ಸ್ಥಳೀಯ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಮಾರ್ಚ್ 20 ರಂದು ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ಗೆ ಗಲ್ಲಿಗೇರಿಸಲು ಸಿದ್ಧರಾಗಿರುವುದರಿಂದ, ಪತ್ನಿ ಗಂಡನನ್ನು ಕಳೆದುಕೊಂಡು ವಿಧವೆಯ ಜೀವನವನ್ನು ನಡೆಸಲು ಬಯಸುವುದಿಲ್ಲ ಎಂದು ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾರೆ. ಮಾರ್ಚ್ 19 ರಂದು ನ್ಯಾಯಾಲಯವು ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಲಿದೆ.
ಓದಿ:ನಿರ್ಭಯಾ ಅಪರಾಧಿ ಮರಣದಂಡನೆ ಶಿಕ್ಷೆ ರದ್ದು ವಿಚಾರ: ಆದೇಶ ತಡೆಹಿಡಿದ ದೆಹಲಿ ಕೋರ್ಟ್
ಅಕ್ಷಯ್ ಕುಮಾರ್ ಅವರ ಪತ್ನಿ, ‘ನನ್ನ ಪತಿ ನಿರಪರಾಧಿ. ಅವನನ್ನು ಗಲ್ಲಿಗೇರಿಸುವ ಮೊದಲು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.
ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ರನ್ನು ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ಮಾರ್ಚ್ 20 ರಂದು ಗಲ್ಲಿಗೇರಿಸಲು ನ್ಯಾಯಾಲಯ ಆದೇಶಿಸಿದೆ.