ETV Bharat / bharat

ನಿರ್ಭಯಾ 'ಹತ್ಯಾಚಾರಿ'ಗಳಿಗೆ ಮಾರ್ಚ್​​ 20ರಂದು ಗಲ್ಲು... ಹೊಸ ಡೆತ್​ ವಾರಂಟ್​​ ಜಾರಿ! - ನಿರ್ಭಯಾ ಹತ್ಯಾಚಾರಿಗಳಿಗೆ ಮಾರ್ಚ್​​ 20ರಂದು ಗಲ್ಲು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012 ರ ಡಿಸೆಂಬರ್​ನಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಇದೀಗ ಹೊಸ ಡೆತ್ ವಾರಂಟ್ ಜಾರಿಯಾಗಿದೆ.

NIRBHAYA CASE
NIRBHAYA CASE
author img

By

Published : Mar 5, 2020, 2:47 PM IST

Updated : Mar 5, 2020, 3:19 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012 ರ ಡಿಸೆಂಬರ್​ನಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಇದೀಗ ಹೊಸ ಡೆತ್ ವಾರಂಟ್ ಜಾರಿಯಾಗಿದೆ.

ಹೊಸ ಡೆತ್​ ವಾರೆಂಟ್​ ಜಾರಿ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಇದೀಗ ಮಾರ್ಚ್​ 20ರ ಬೆಳಗ್ಗೆ 5:30ಕ್ಕೆ ಅವರಿಗೆ ಗಲ್ಲು ವಿಧಿಸುವಂತೆ ಕೋರ್ಟ್​ ತಿಳಿಸಿದೆ.

ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್​ ಮರಣದಂಡನೆಗೆ ಹೊಸ ದಿನಾಂಕ ನೀಡುವಂತೆ ಕೋರಿದ್ದರು. ಜತೆಗೆ ಈಗಾಗಲೇ ಅಪರಾಧಿಗಳು ತಮಗೆ ಲಭ್ಯವಿದ್ದ ಎಲ್ಲ ಕಾನೂನು ಮಾರ್ಗ ಬಳಕೆ ಮಾಡಿಕೊಂಡಿದ್ದಾಗಿ ಅವರು ತಿಳಿಸಿದ್ದರು. ಅಪರಾಧಿಗಳಿಗೆ ಯಾವುದೇ ಬಗೆಯ ಕಾನೂನಾತ್ಮಕ ಮಾರ್ಗಗಳು ಉಳಿದಿಲ್ಲ. ಹಾಗಾಗಿ , ದಯವಿಟ್ಟು ಇಂದು ಮರಣದಂಡನೆ ವಿಧಿಸಲು ಹೊಸ ದಿನಾಂಕವನ್ನು ನಿಗದಿಗೊಳಿಸಿ ಆದೇಶ ನೀಡಬೇಕು ಎಂದಿದ್ದರು. ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಗುಪ್ತಾ ಅವರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಕೋವಿಂದ್ ನಿನ್ನೆ ವಜಾಗೊಳಿಸಿದ್ದರು.

Last Updated : Mar 5, 2020, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.