ETV Bharat / bharat

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ: ಇಂದಿನಿಂದ ಸಾಂವಿಧಾನಿಕ ಪೀಠದಿಂದ ವಿಚಾರಣೆ ಪ್ರಾರಂಭ - ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ

ಶಬರಿಮಲೈ ದೇವಸ್ಥಾನ ಪ್ರವೇಶ ವಿಚಾರ ಸಂಬಂಧ 2018ರ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಇಂದಿನಿಂದ ಸುಪ್ರೀಂಕೋರ್ಟ್​ ನಡೆಸಲಿದೆ.

Sabrimala case latest news
ಬರಿಮಲೆ ವಿವಾದ
author img

By

Published : Feb 3, 2020, 12:18 PM IST

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕೆನ್ನುವ ಸುಪ್ರೀಂಕೋರ್ಟ್​ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಇಂದಿನಿಂದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದಲ್ಲಿ 9 ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ನಡೆಸಲಿದೆ.

ಆದರೆ, ಈ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶದ ಪರವಾಗಿದ್ದ ನ್ಯಾ. ಆರ್.ಎಫ್.ನಾರಿಮನ್ ಮತ್ತು ಡಿ.ವೈ.ಚಂದ್ರಚೂಡ್, ಹಾಗೂ ಇದನ್ನು ವಿರೋಧಿಸಿದ್ದ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಕೂಡ ಈ ಪೀಠದಲ್ಲಿ ಇಲ್ಲ.

ಶಬರಿಮಲೈ ದೇವಸ್ಥಾನ ಪ್ರವೇಶ ವಿಚಾರ ಸಂಬಂಧ 2018ರ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ 60 ಅರ್ಜಿಗಳು ಬಂದಿದ್ದವು. ಇಂದು ಸಿಜೆಐ ನೇತೃತ್ವದಲ್ಲಿ ಈ ಅರ್ಜಿಗಳನ್ನು ನ್ಯಾ. ಆರ್​ ಭಾನುಮತಿ, ಎಲ್​ ನಾಗೇಶ್ವರ ರಾವ್​​, ಅಶೋಕ್​ ಭೂಷಣ್​, ಮೋಹನ್​​ ಎಂ ಶಾಂತನಗೌಡರ್​, ಎಸ್​ ಅಬ್ದುಲ್​ ನಜೀರ್​​, ಆರ್​ ಸುಭಾಷ್​ ರೆಡ್ಡಿ, ಬಿ ಆರ್​ ಗವಾಯಿ ಹಾಗೂ ಸೂರ್ಯ ಕಾಂತ್​ ಇರುವ ಸಾಂವಿಧಾನಿಕ ಪೀಠ ನಡೆಸಲಿದೆ. ಇದರ ಜೊತೆಗೆ ಮುಸ್ಲಿಂ ಹಾಗೂ ಪಾರ್ಸಿ ಮಹಿಳೆಯರ ವಿರುದ್ಧ ತಾರತಮ್ಯ ಸೇರಿದಂತೆ ಇತರ ವಿವಾದಾತ್ಮಕ ವಿಷಯಗಳ ವಿಚಾರಣೆ ಕೂಡ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.