ETV Bharat / bharat

ಆಗಸದಲ್ಲಿ ಹಾರಾಡ್ತಾ, ತಾಜ್ ​ಮಹಲ್​ ನೋಡ್ತಾ, ಊಟ ಸವಿಯಿರಿ... ಏನುಂಟು, ಏನಿಲ್ಲಾ ಈ ರೆಸ್ಟೋರೆಂಟ್​ನಲ್ಲಿ!

ಹೊಸ ಮತ್ತು ವಿನೂತನ ಶೈಲಿಯ ರೆಸ್ಟೋರೆಂಟ್​​ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಆದ್ರೆ ಇದೀಗ ಹೆಚ್ಚು ಸೌಂಡ್​ ಮಾಡ್ತಿರೋದು ಈ ಫ್ಲೈ ಡೈನಿಂಗ್​ ರೆಸ್ಟೋರೆಂಟ್.

fly dining restaurant, fly dining restaurant in Agra, fly dining restaurant news, fly dining restaurant latest news, ಫ್ಲೈ ಡೈನಿಂಗ್​ ರೆಸ್ಟೋರೆಂಟ್, ಆಗ್ರಾದಲ್ಲಿ ಫ್ಲೈ ಡೈನಿಂಗ್​ ರೆಸ್ಟೋರೆಂಟ್, ಫ್ಲೈ ಡೈನಿಂಗ್​ ರೆಸ್ಟೋರೆಂಟ್ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Feb 1, 2020, 12:45 PM IST

ಆಗ್ರಾ(ಉತ್ತರ ಪ್ರದೇಶ): ಪ್ರೇಮಿಗಳ ಗುರುತು ಎಂದೇ ಖ್ಯಾತಿ ಪಡೆದಿರುವ ತಾಜ್​ ಮಹಲ್​ನ್ನು ನೋಡುತ್ತಾ 150 ಅಡಿಗಳ ಎತ್ತರದಲ್ಲಿ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಎರಡನೇ ಫ್ಲೈ ಡೈನಿಂಗ್ ರೆಸ್ಟೊರೆಂಟ್​ ಉತ್ತರಪ್ರದೇಶದ ಆಗ್ರಾದಲ್ಲಿ ಸ್ಥಾಪನೆಯಾಗಿದೆ.

ಈ ರೆಸ್ಟೋರೆಂಟ್​ ಇರೋದೆಲ್ಲಿ?

ಆಗ್ರಾದಲ್ಲಿ ತಾಜ್​ಮಹಲ್​ ಸಮೀಪದಲ್ಲಿರುವ ಕಲಾಕುರ್ತಿ ಮೈದಾನದಲ್ಲಿ ಈ ರೆಸ್ಟೋರೆಂಟ್​ ನಿರ್ಮಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು 150 ಅಡಿಗಳ ಎತ್ತರದಲ್ಲಿ ತಾಜ್​ ಮಹಲ್​ ನೋಡುತ್ತಲೇ ಊಟ ಸವಿಯಬಹುದಾಗಿದೆ.

ಸಮಯ, ಆಸನಗಳೆಷ್ಟು?

ಇದು ಭಾರತದಲ್ಲಿ ಎರಡನೇ ಫ್ಲೈ ಡೈನಿಂಗ್​ ರೆಸ್ಟೋರೆಂಟ್​ ಆಗಿದೆ. ದೊಡ್ಡದಾದ ಆಸನದ ಮೇಲೆ ಡೈನಿಂಗ್​ ಟೇಬಲ್​ ಸಿದ್ಧಪಡಿಸಿ ಒಂದೇ ಬಾರಿ 24 ಜನರು ಕುಳಿತುಕೊಂಡು ಊಟ ಸವಿಯಬಹುದಾಗಿದೆ. ಸುಮಾರು 45 ನಿಮಿಷಗಳ ಕಾಲ ಈ ಫ್ಲೈ ಡೈನಿಂಗ್​ನಲ್ಲಿ ಊಟ ಮಾಡಬಹುದಾಗಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತೆ...

ಈ ಡೈನಿಂಗ್​ ಮೇಲೆ ಕುಳಿತ ನಂತರ ಹೈಡ್ರಾಲಿಕ್​ ಕ್ರೇನ್​ ಮೂಲಕ 150 ಅಡಿಗಳ ಎತ್ತರದಷ್ಟು ಕೊಂಡೊಯ್ಯುತ್ತೆ. ರೋಪ್ಸ್​ ಸಹಾಯದಿಂದ ಈ ಡೈನಿಂಗ್​ ಆಕಾಶದಲ್ಲಿ ವಿಹರಿಸುತ್ತೆ. ಬಳಿಕ ಅತಿಥಿಗಳಿಗೆ ಭೋಜದ ಸೇವೆ ನೀಡುತ್ತೇವೆ. ಬೇಕಾದ ರಕ್ಷಣಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದೇವೆ ಎನ್ನುತ್ತಾರೆ ರೆಸ್ಟೋರೆಂಟ್​ನ ನಿರ್ದೇಶಕ ಮನೋಜ್​ ಅಗರ್ವಾಲ್​ ಮಾಧ್ಯಮಕ್ಕೆ ಹೇಳಿದ್ದಾರೆ.

ಒಟ್ಟಿನಲ್ಲಿ ಈ ರೆಸ್ಟೋರೆಂಟ್​ನಿಂದ ಪ್ರವಾಸಿಗರು ತಾಜ್​ಮಹಲ್​ ನೋಡುತ್ತಾ ಆಗಸದಲ್ಲಿ ಊಟ ಸವಿಯಬಹುದಾಗಿದೆ. ವಿನೂತನ ಶೈಲಿಯ ಈ ರೆಸ್ಟೋರೆಂಟ್​ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವಲ್ಲಿ ಯಾವುದೇ ಅನುಮಾನಗಳಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.