ETV Bharat / bharat

ಈಶಾನ್ಯ ದೆಹಲಿ ಕೋಮು ಹಿಂಸಾಚಾರ: ಜಾಫ್ರಾಬಾದ್‌ಗೆ ತೆರಳಲಿರುವ ಎನ್​ಸಿಡಬ್ಲ್ಯೂ ತಂಡ - ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ

ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮಹಿಳೆಯರ ಮೇಲೆ ಯಾವುದಾದರೂ ಹಲ್ಲೆ ಪ್ರಕರಣಗಳು ನಡೆದಿವೆಯೇ ಎಂದು ಪರಿಶೀಲಿಸಲು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹಾಗೂ ತಂಡ ಶುಕ್ರವಾರ ಜಾಫ್ರಾಬಾದ್‌ಗೆ ಭೇಟಿ ನೀಡಲಿದೆ.

NCW team to visit Jaffrabad
ಈಶಾನ್ಯ ದೆಹಲಿ ಕೋಮು ಹಿಂಸಾಚಾರ: ಜಾಫ್ರಾಬಾದ್‌ಗೆ ತೆರಳಲಿರುವ ಎನ್​ಸಿಡಬ್ಲ್ಯೂ ತಂಡ
author img

By

Published : Feb 28, 2020, 1:31 PM IST

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮಹಿಳೆಯರ ಮೇಲೆ ಯಾವುದಾದರೂ ಹಲ್ಲೆ ಪ್ರಕರಣಗಳು ನಡೆದಿವೆಯೇ ಎಂದು ಪರಿಶೀಲಿಸಲು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹಾಗೂ ತಂಡ ಶುಕ್ರವಾರ ಜಾಫ್ರಾಬಾದ್‌ಗೆ ಭೇಟಿ ನೀಡಲಿದೆ.

ಪೌರತ್ವ ಕಾನೂನು ಬೆಂಬಲಿಗರು ಮತ್ತು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಮಧ್ಯೆ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಸಂಘರ್ಷ ನಿಯಂತ್ರಣ ಮೀರಿದ ಹಿನ್ನಲೆ ಈವರೆಗೂ 38 ಮಂದಿ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಾಗೇ, ಜಾಫ್ರಾಬಾದ್, ಮೌಜ್‌ಪುರ, ಚಂದ್ ಬಾಗ್, ಖುರೇಜಿ ಖಾಸ್ ಮತ್ತು ಭಜನ್‌ಪುರ ಪ್ರದೇಶಗಳು ಗಲಭೆಗೀಡಾಗಿವೆ.

ಕಳೆದ ನಾಲ್ಕು ದಿನಗಳಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮಹಿಳೆಯರ ಮೇಲೆ ಯಾವುದಾದರೂ ಹಲ್ಲೆ ಪ್ರಕರಣಗಳು ನಡೆದಿವೆಯೇ ಎಂದು ಪರಿಶೀಲಿಸಲು ಶರ್ಮಾ ಮತ್ತು ಇಬ್ಬರು ಸದಸ್ಯರ ತಂಡ ಜಾಫ್ರಾಬಾದ್‌ಗೆ ಭೇಟಿ ನೀಡಲಿದ್ದಾರೆ ಎಂದು ಎನ್‌ಸಿಡಬ್ಲ್ಯೂ ಸದಸ್ಯರೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.