ನವದೆಹಲಿ: ಕೌಟುಂಬಿಕ ಹಿಂಸಾಚಾರ ಸಂಬಂಧಪಟ್ಟ ದೂರು ನೀಡಲು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ವಾಟ್ಸ್‌ಆ್ಯಪ್ ಸಹಾಯವಾಣಿ -7217735372 ಬಿಡುಗಡೆ ಮಾಡಿದೆ. ಲಾಕ್‌ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಏರಿಕೆಯಾಗತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇಂತಹ ಪ್ರಕರಣಗಳ ಕುರಿತು, ನೀಡಲಾಗಿರುವ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ, ದೂರು ನೀಡಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗವು ಟ್ವೀಟ್ ಮೂಲಕ ತಿಳಿಸಿದೆ. ಇದರಿಂದಾಗಿ ತೊಂದರೆಯಲ್ಲಿರುವ ಅಥವಾ ಕೌಟುಂಬಿಕ ಹಿಂಸಾಚಾರ ಅನುಭವಿಸುತ್ತಿರುವ ಮಹಿಳೆಯರಿಗೆ ಸಂಸ್ಥೆಯು ಬೆಂಬಲ ಹಾಗೂ ಸಹಾಯ ನೀಡುತ್ತದೆ.
-
@NCWIndia have launched a 'WHATSAPP NUMBER' for help & assistance to women experiencing #DomesticViolence at wake of #Covid19Lockdown.
— NCW (@NCWIndia) April 10, 2020 " class="align-text-top noRightClick twitterSection" data="
Send 🆘WHATSAPP ALERT🚨
📳 7⃣2⃣1⃣7⃣7⃣3⃣5⃣3⃣7⃣2⃣#HelplineSupport#IndiaFightsGenderAbuse#SayNOtoDomesticViolence pic.twitter.com/qhQmJTisZm
">@NCWIndia have launched a 'WHATSAPP NUMBER' for help & assistance to women experiencing #DomesticViolence at wake of #Covid19Lockdown.
— NCW (@NCWIndia) April 10, 2020
Send 🆘WHATSAPP ALERT🚨
📳 7⃣2⃣1⃣7⃣7⃣3⃣5⃣3⃣7⃣2⃣#HelplineSupport#IndiaFightsGenderAbuse#SayNOtoDomesticViolence pic.twitter.com/qhQmJTisZm@NCWIndia have launched a 'WHATSAPP NUMBER' for help & assistance to women experiencing #DomesticViolence at wake of #Covid19Lockdown.
— NCW (@NCWIndia) April 10, 2020
Send 🆘WHATSAPP ALERT🚨
📳 7⃣2⃣1⃣7⃣7⃣3⃣5⃣3⃣7⃣2⃣#HelplineSupport#IndiaFightsGenderAbuse#SayNOtoDomesticViolence pic.twitter.com/qhQmJTisZm
ಲಾಕ್‌ಡೌನ್ ಕಾರಣ ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕ ಮಹಿಳೆಯರು ಕಷ್ಟ ಅನುಭವಿಸುತ್ತದ್ದಾರೆ. ಲಾಕ್‌ಡೌನ್ ಘೋಷಣೆಯಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರಿಗೆ 69 ದೂರುಗಳು ಇ-ಮೇಲ್ ಮೂಲಕ ಬಂದಿವೆ.
ಮಾರ್ಚ್ 24 ರಿಂದ ಏಪ್ರಿಲ್ 1ರವರೆಗೆ ಮಹಿಳೆಯರ ಮೇಲಿನ ವಿವಿಧ ಅಪರಾಧಗಳಿಗೆ ಸಂಬಂಧಿಸಿದ 257 ದೂರುಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 69 ದೂರುಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿವೆ ಎಂದು ಮಹಿಳಾ ಆಯೋಗವು ಮಾಹಿತಿ ನೀಡಿದೆ.