ಬಿಜಾಪುರ (ಛತ್ತೀಸ್ಗಢ): ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ನನ್ನು ಹೊಡೆದುರುಳಿಸಲಾಗಿದೆ.
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಕೊರ್ಸಗುಡ ಮತ್ತು ಔಟ್‌ಪಲ್ಲಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಿಆರ್ಪಿಎಫ್ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ನನ್ನು ಹತ್ಯೆಗೈಯ್ಯಲಾಗಿದೆ.
ಮೃತ ನಕ್ಸಲ್ಗಾಗಿ ಕೆಲ ವರ್ಷಗಳಿಂದ ಪೊಲೀಸರು ಹುಡುಕುತ್ತಿದ್ದು, ಈತನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಸಹ ಘೋಷಿಸಲಾಗಿತ್ತು. ನಕ್ಸಲ್ನ ಮೃತದೇಹ ಹಾಗೂ ಈತನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಕಮಲೋಚನ್ ಕಶ್ಯಪ್ ತಿಳಿಸಿದ್ದಾರೆ.