ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದೇಶದ ಸ್ಟಾರ್ ಈಜುಗಾರ ವೀರ್ ಧವಲ್ ಖಡೆ ತಮ್ಮದೇ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
50 ಮೀಟರ್ ಫ್ರೀ ಸ್ಟೈಲ್ ರೇಸ್ನಲ್ಲಿ ವೀರ್ ಧವಲ್ ಖಡೆ 22.44 ಸಮಯದಲ್ಲಿ ಕ್ರಮಿಸುವ ಮೂಲಕ ತಮ್ಮದೇ ದಾಖಲೆ ಮುರಿದರು. ವೀರ್ ಧವಲ್ ಈ ಹಿಂದೆ 50 ಮೀಟರ್ ರೇಸ್ ಅನ್ನು 22.47 ಸಮಯದಲ್ಲಿ ಕ್ರಮಿಸುವ ಮೂಲಕ ದಾಖಲೆ ಮಾಡಿದ್ದರು. ಅದೇ ದಾಖಲೆಯನ್ನು ಅವರೀಗ ಬ್ರೇಕ್ ಮಾಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ವೀರ್, ಕಳೆದ ಬಾರಿಯ ಏಷಿಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಸ್ವಲ್ಪದರಲ್ಲೇ ಮಿಸ್ ಆಗಿತ್ತು. ಆದರೆ ಈಗ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿರುವುದರಿಂದ ಆತ್ಮವಿಶ್ವಾಸ ಹೆಚ್ಚಿದೆ. ತುಂಬಾ ಖುಷಿಯಾಗಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಏಷಿಯನ್ ಏಜ್ ಗ್ರೂಪ್ ಸ್ಪರ್ಧೆಯಲ್ಲಿ ಭಾಗವಹಿಸಲು ಆತ್ಮವಿಶ್ವಾಸ ಹೆಚ್ಚಿದೆ ಎಂದರು.