ETV Bharat / bharat

ಇಂದು ರಾಷ್ಟ್ರೀಯ ಪಿಂಚಣಿದಾರರ ದಿನ : ಭಾರತೀಯ ಪಿಂಚಣಿ ವ್ಯವಸ್ಥೆ ಹೇಗಿದೆ? - ಡಿ.ಎಸ್. ನಕರಾ ಪ್ರಕರಣ

ಕಲ್ಲಿದ್ದಲು ಮತ್ತು ಚಹಾ ತೋಟ ಕಾರ್ಮಿಕರ ಇತರ ಸಣ್ಣ ಭವಿಷ್ಯ ನಿಧಿ ಯೋಜನೆಗಳು ಇನ್ನೂ 1.25 ಮಿಲಿಯನ್ ಕಾರ್ಮಿಕರನ್ನು ಒಳಗೊಂಡಿವೆ. ಸಾರ್ವಜನಿಕ ವಲಯದಲ್ಲಿ, ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 11.14 ಮಿಲಿಯನ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ..

pension
pension
author img

By

Published : Dec 17, 2020, 6:02 AM IST

ಹೈದರಾಬಾದ್ : ಡಿಸೆಂಬರ್ 17 ಭಾರತದ ಎಲ್ಲಾ ಪಿಂಚಣಿದಾರರಿಗೆ ಸ್ಮರಣೀಯ ದಿನ. 1982ರ ಡಿಸೆಂಬರ್ 17ರಂದು ಭಾರತದ ಸುಪ್ರೀಂಕೋರ್ಟ್ ಪ್ರಸಿದ್ಧ ನಕರಾ ಪ್ರಕರಣದಲ್ಲಿ ಹೆಗ್ಗುರುತಿನ ತೀರ್ಪು ನೀಡಿತ್ತು.

ಮುಖ್ಯ ನ್ಯಾಯಮೂರ್ತಿ ವೈ ಬಿ ಚಂದ್ರಚೂಡ್‌ ಅವರಿದ್ದ ನ್ಯಾಯಪೀಠದಲ್ಲಿ ಸುಪ್ರೀಂಕೋರ್ಟ್ ಡಿ ಎಸ್ ನಕರಾ ಪ್ರಕರಣದ ಐತಿಹಾಸಿಕ ತೀರ್ಪನ್ನು ಘೋಷಿಸಿತ್ತು. ಆ ತೀರ್ಪಲ್ಲಿ ಪಿಂಚಣಿ ನೌಕರನ ಹಕ್ಕು ಮತ್ತು ಅದರಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು ಎಂದು ಪ್ರತಿಪಾದಿಸಿತು.

ನಿವೃತ್ತಿಯ ದಿನಾಂಕದ ಆಧಾರದ ಮೇಲೆ ಪಿಂಚಣಿ ಪ್ರಯೋಜನಗಳನ್ನು ವಿಸ್ತರಿಸುವಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಘೋಷಿಸಿತು. ಈ ತೀರ್ಪನ್ನು ಪಿಂಚಣಿದಾರರ "ಮ್ಯಾಗ್ನ ಕಾರ್ಟಾ" ಎಂದು ಪರಿಗಣಿಸಲಾಗುತ್ತದೆ. ಡಿಸೆಂಬರ್ 17ನ್ನು ರಾಷ್ಟ್ರೀಯ ಪಿಂಚಣಿದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಡಿ ಎಸ್ ನಕರಾ ಪ್ರಕರಣ : ಡಿ ಎಸ್ ನಕರಾ ಎಂಬುವರು ರಕ್ಷಣಾ ಸಚಿವಾಲಯದಲ್ಲಿ ಅಧಿಕಾರಿಯಾಗಿದ್ದರು. ಆದರೆ, ಅವರು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ. ಅವರು ಉದಾರೀಕರಣದ ಪಿಂಚಣಿ ಯೋಜನೆ ಪರಿಚಯಿಸುವ ಮೇ 25, 1979ರಂದು ಭಾರತ ಸರ್ಕಾರ ಹೊರಡಿಸಿದ ಆದೇಶದಿಂದ ಉಂಟಾದ ಅನ್ಯಾಯದ ವಿರುದ್ಧ ಹೋರಾಡಿದರು.

ಮಾರ್ಚ್‌ 3, 1974ರ ಮೊದಲು ನಿವೃತ್ತರಾದ ಪಿಂಚಣಿದಾರರಿಗೆ ಹೊಸ ಯೋಜನೆಯ ಪ್ರಯೋಜನ ನಿರಾಕರಿಸಲಾಯಿತು. ಅಂತೆಯೇ ದಿನಾಂಕಕ್ಕಿಂತ ಮುಂಚಿತವಾಗಿ ನಿವೃತ್ತರಾದ ನಕರಾ ಅವರಿಗೆ ಪಿಂಚಣಿ ಪ್ರಯೋಜನವನ್ನು ನಿರಾಕರಿಸಲಾಗಿತ್ತು. ಆದ್ದರಿಂದ ಪ್ರಕರಣ ದಾಖಲಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಸಿದ್ಧಪಡಿಸುವಲ್ಲಿ ಹೆಚ್‌ ಡಿ ಶೌರಿ ಎಂಬುವರು ನಕರಾ ಅವರಿಗೆ ಸಹಾಯ ಮಾಡಿದರು. ಅರ್ಜಿಯಲ್ಲಿ ಪಿಂಚಣಿಗೆ ಸಂಬಂಧಿಸಿದ ಮೂಲಭೂತ ವಿಷಯಗಳು ಎದ್ದಿದ್ದು, ತೀರ್ಪಿನಲ್ಲಿ ಪಿಂಚಣಿ ಕುರಿತು ಸುಪ್ರೀಂಕೋರ್ಟ್ ಬಹಳ ಮುಖ್ಯವಾದ ಅವಲೋಕನಗಳನ್ನು ಮಾಡಬೇಕಾಯಿತು.

ಭಾರತದಲ್ಲಿ ನ್ಯಾಯಾಂಗ ಕ್ರಿಯಾಶೀಲತೆಯ ಪ್ರತಿಮೆಗಳಾಗಿದ್ದ ಐವರು ಪ್ರಖ್ಯಾತ ನ್ಯಾಯಾಧೀಶರು ನ್ಯಾಯಮೂರ್ತಿ ವೈ ವಿ ಚಂದ್ರಚೂಡ್, ನ್ಯಾಯಮೂರ್ತಿ ಡಿ.ಎ ದೇಸಾಯಿ, ನ್ಯಾಯಮೂರ್ತಿ ಒ.ಚಿನ್ನಪ್ಪ ರೆಡ್ಡಿ, ನ್ಯಾಯಮೂರ್ತಿ ವಿ.ಡಿ ತುಳಸಪುರ್ಕರ್ ಮತ್ತು ನ್ಯಾಯಮೂರ್ತಿ ಬಹ್ರುಲ್ ಇಸ್ಲಾಂ ತೀರ್ಪು ನೀಡಿದರು.

ಭಾರತೀಯ ಪಿಂಚಣಿ ವ್ಯವಸ್ಥೆ : ನೌಕರರ ಪಿಂಚಣಿ ಯೋಜನೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತು ಇತರ ಉದ್ಯೋಗದಾತರು ನಿರ್ವಹಿಸುವ ನಿಧಿಯಿಂದ ನಿರ್ವಹಿಸಲ್ಪಡುವ ನೌಕರರ ಭವಿಷ್ಯ ನಿಧಿಯನ್ನು ಒಳಗೊಂಡಿದೆ. ಜನವರಿ 1, 2004ರ ಮೊದಲು ಅಥವಾ ನಂತರ ಸೇವೆಗಳಿಗೆ ಸೇರ್ಪಡೆಗೊಂಡ ಕೇಂದ್ರ ಸರ್ಕಾರದ ನಾಗರಿಕ ನೌಕರರು ಡಿಫೈನ್ಡ್ ಕಾಂಟ್ರಿಬ್ಯೂಷನ್ ಆಧಾರಿತ ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ವ್ಯಾಪ್ತಿಗೆ ಬರುತ್ತಾರೆ.

ಎಂಪ್ಲಾಯ್ ಪೆನ್ಶನ್​ ಸ್ಕೀಮ್​ನಿಂದ ಪಿಂಚಣಿ ಪಡೆಯಲು ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರಬೇಕು. ಪಿಂಚಣಿ ಪಡೆಯಲು ವಯಸ್ಸು 58 ವರ್ಷಗಳಾಗಿರಬೇಕು. ಇಪಿಎಫ್​ಒ ಮೂಲಕ ಪಿಂಚಣಿ ಪಡೆಯಲು 55 ವರ್ಷವಾಗಿರಬೇಕು. 2011ರ ಜನಗಣತಿಯ ಪ್ರಕಾರ ಸುಮಾರು 12%ರಷ್ಟು ಉದ್ಯೋಗಿಗಳು (ಅಥವಾ ಅಂದಾಜು 58 ಮಿಲಿಯನ್ ಜನರು) ವಿವಿಧ ಪಿಂಚಣಿ ವ್ಯವಸ್ಥೆಗಳ ವ್ಯಾಪ್ತಿಗೆ ಬರುತ್ತಾರೆ.

ಈ ಉದ್ಯೋಗಿಗಳು ಸಂಘಟಿತ ಕ್ಷೇತ್ರಗಳಿಗೆ ಸೇರಿದವರಾಗಿದ್ದಾರೆ. ಅವರನ್ನು ಸರ್ಕಾರ, ಸರ್ಕಾರಿ ಉದ್ಯಮಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ನೇಮಿಸಿಕೊಳ್ಳುತ್ತವೆ. ಇವುಗಳನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಡ್ಡಾಯವಾಗಿ ಒಳಗೊಂಡಿದೆ.

20 ಅಥವಾ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರು ಇಪಿಎಫ್‌ಒ ವ್ಯಾಪ್ತಿಗೆ ಬರುತ್ತಾರೆ. ಉಳಿದ ಶೇ.88ರಷ್ಟು ಉದ್ಯೋಗಿಗಳು ಮುಖ್ಯವಾಗಿ ಅಸಂಘಟಿತ ವಲಯದಲ್ಲಿ (ಸ್ವಯಂ ಉದ್ಯೋಗಿ, ದೈನಂದಿನ ಕೂಲಿ ಕಾರ್ಮಿಕರು, ರೈತರು ಇತ್ಯಾದಿ) ಇರುತ್ತಾರೆ. ಕೆಲವರು ಸಂಘಟಿತ ವಲಯದಲ್ಲಿದ್ದಾರೆ. ಆದರೆ, ಇಪಿಎಫ್‌ಒ ವ್ಯಾಪ್ತಿಗೆ ಬರುವುದಿಲ್ಲ.

ನೌಕರರ ಭವಿಷ್ಯ ನಿಧಿ ಯೋಜನೆಗಳು (ಇಪಿಎಫ್) : ಮೂಲ ವೇತನವನ್ನು ತಿಂಗಳಿಗೆ 15 000 ರೂಪಾಯಿಗಿಂತ ಕಡಿಮೆ ಅಥವಾ ಸಮನಾಗಿರುವ ನೌಕರರಿಗೆ, ನೌಕರ ಮಾಸಿಕ ವೇತನದ ಶೇ.12 ಮತ್ತು ಶೇ.3.67ರಷ್ಟು ಕೊಡುಗೆ ನೀಡುತ್ತಾರೆ. ಇದರಿಂದ ಒಟ್ಟು 15.67%ರಷ್ಟು ಹಣ ಸಂಗ್ರಹಗೊಳ್ಳುತ್ತದೆ.

ತಿಂಗಳಿಗೆ 15 000 ರೂಪಾಯಿಗಿಂತ ಹೆಚ್ಚಿನ ಮೂಲ ವೇತನ ಹೊಂದಿರುವ ಉದ್ಯೋಗಿಗಳಿಗೆ, ನೌಕರನು ಮಾಸಿಕ ವೇತನದ 12% ಮತ್ತು ಉದ್ಯೋಗದಾತನು 12% ಕೊಡುಗೆ ನೀಡುತ್ತಾನೆ. ಈ ಸಂಯೋಜಿತ ಶೇ.24% ಹಣ ಸಂಗ್ರಹಗೊಳ್ಳುತ್ತದೆ. ಈ ಹಣವನ್ನು, 55 ವರ್ಷ ದಾಟಿದ ಬಳಿಕ ನಿವೃತ್ತಿಯ ನಂತರ ಪಾವತಿಸಲಾಗುತ್ತದೆ.

ನೌಕರರ ಪಿಂಚಣಿ ಯೋಜನೆ (ಇಪಿಎಸ್) : ಸೆಪ್ಟೆಂಬರ್ 2014ರಿಂದ ನೂತನವಾಗಿ ಜಾರಿಗೆ ಬಂದ ಯೋಜನೆಯಲ್ಲಿ ತಿಂಗಳಿಗೆ 15,000 ರೂ.ಗಿಂತ ಹೆಚ್ಚಿನ ವೇತನ ಪಡೆಯುವ ನೌಕರರು ಇಪಿಎಸ್‌ ವ್ಯಾಪ್ತಿಗೆ ಬರುವುದಿಲ್ಲ. ಉದ್ಯೋಗದಾತರು ಇಪಿಎಸ್ ನಿಧಿಗೆ ಮೂಲ ವೇತನದ 8.33%ಗೆ ಸಮನಾದ ಮೊತ್ತ ನೀಡುತ್ತಾರೆ ಮತ್ತು ಕೇಂದ್ರ ಸರ್ಕಾರ ಇಪಿಎಸ್‌ಗೆ 1.16% ವೇತನ ನೀಡುತ್ತದೆ.

ಈ ಕ್ರೋಢೀಕರಣವನ್ನು ನಿವೃತ್ತಿ ಅಥವಾ ಆರಂಭಿಕ ಮುಕ್ತಾಯದ ಮೇಲೆ ವಿವಿಧ ಪಿಂಚಣಿ ಪ್ರಯೋಜನಗಳನ್ನು ಪಾವತಿಸಲು ಬಳಸಲಾಗುತ್ತದೆ. ಯೋಜನೆಯಡಿಯಲ್ಲಿ ಸದಸ್ಯನು ಯಾವ ರೀತಿಯ ಪಿಂಚಣಿ ಪಡೆಯುತ್ತಾನೆ ಎಂಬುವುದು ಅವರು ನಿವೃತ್ತಿಯ ವಯಸ್ಸು ಮತ್ತು ಅರ್ಹ ಸೇವೆಯ ವರ್ಷಗಳ ಮೇಲೆ ಅವಲಂಬಿತವಾಗಿರುತ್ತದೆ.

ಭಾರತೀಯ ಪಿಂಚಣಿ ವ್ಯವಸ್ಥೆಯ ತೊಂದರೆಗಳು :

ವಯಸ್ಸಾದ ಜನಸಂಖ್ಯೆ : ಜೀವಿತಾವಧಿಯಲ್ಲಿ ಸುಧಾರಣೆ ಮತ್ತು ಫರ್ಟಿಲಿಟಿ ರೇಟ್​ನ ಕುಸಿತವು ಜನಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತಿದೆ. ವೃದ್ಧಾಪ್ಯದ ಜನಸಂಖ್ಯೆ (60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) 1951ರಲ್ಲಿ ಸುಮಾರು 19.8 ದಶಲಕ್ಷದಿಂದ 1991ರಲ್ಲಿ 56.7 ದಶಲಕ್ಷಕ್ಕೆ ಏರಿದೆ. ಇದರ ಪರಿಣಾಮವಾಗಿ ಒಟ್ಟು ಜನಸಂಖ್ಯೆಯಲ್ಲಿ ವೃದ್ಧರ ಪ್ರಮಾಣವು 5.5ರಿಂದ 6.9ಕ್ಕೆ ಏರಿದೆ. ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ, 2020ರ ವೇಳೆಗೆ ವೃದ್ಧರ ಶೇಕಡಾವಾರು ಪ್ರಮಾಣವು 10.3%ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಸಂಘಟಿತ ವಲಯದತ್ತ ಗಮನ : ಭಾರತದಲ್ಲಿ ಅಸ್ತಿತ್ವದಲ್ಲಿರುವ ಪಿಂಚಣಿ ಯೋಜನೆಗಳು ಪ್ರಧಾನವಾಗಿ ಸಂಘಟಿತ ವಲಯದ ಕಾರ್ಮಿಕರನ್ನು ಒಳಗೊಂಡಿದೆ. ಇದು ಒಟ್ಟು ಉದ್ಯೋಗಿಗಳ ಶೇ. 10ರಷ್ಟಿದೆ. ಅಸಂಘಟಿತ ವಲಯದಲ್ಲಿ ತೊಡಗಿರುವ ಬಹುಪಾಲು ಕಾರ್ಮಿಕರನ್ನು ಹೊರಗಿಡುವುದು ಪ್ರಸ್ತುತ ವ್ಯವಸ್ಥೆಯ ಗಂಭೀರ ಸಮಸ್ಯೆ. ಖಾಸಗಿ ಸಂಘಟಿತ ವಲಯದಲ್ಲಿ ಅತಿದೊಡ್ಡ ನಿವೃತ್ತಿ ಬೆಂಬಲ ಯೋಜನೆಯಾದ ನೌಕರರ ಭವಿಷ್ಯ ನಿಧಿ (ಇಪಿಎಫ್) ಸುಮಾರು 23.12 ಮಿಲಿಯನ್ ಕಾರ್ಮಿಕರನ್ನು ಒಳಗೊಂಡಿದೆ.

ಕಲ್ಲಿದ್ದಲು ಮತ್ತು ಚಹಾ ತೋಟ ಕಾರ್ಮಿಕರ ಇತರ ಸಣ್ಣ ಭವಿಷ್ಯ ನಿಧಿ ಯೋಜನೆಗಳು ಇನ್ನೂ 1.25 ಮಿಲಿಯನ್ ಕಾರ್ಮಿಕರನ್ನು ಒಳಗೊಂಡಿವೆ. ಸಾರ್ವಜನಿಕ ವಲಯದಲ್ಲಿ, ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 11.14 ಮಿಲಿಯನ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಯೋಜನಗಳಲ್ಲಿ ಅಸಮಾನತೆ : ಕೆಲವು ರೀತಿಯ ಔಪಚಾರಿಕ ನಿವೃತ್ತಿ ಆದಾಯ ವ್ಯವಸ್ಥೆಗೆ ಪ್ರವೇಶ ಹೊಂದಿರುವ ಸಂಘಟಿತ ಕಾರ್ಮಿಕ ಬಲದೊಳಗೆ, ಖಾಸಗಿ ಕಾರ್ಮಿಕರಿಗೆ ಹೋಲಿಸಿದ್ರೆ ಸಾರ್ವಜನಿಕ ಕಾರ್ಮಿಕರ ಪಿಂಚಣಿ ವ್ಯವಸ್ಥೆಯು ಮತ್ತಷ್ಟು ವಿಘಟಿತಗೊಂಡಿದೆ.

ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ : ಕೊಡುಗೆ ನೀಡದ, ಹಣಪಾವತಿಸದ ಸಾರ್ವಜನಿಕ ಪಿಂಚಣಿಯು ಸರ್ಕಾರದ ಬಜೆಟ್ ಹಂಚಿಕೆಗಳ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ. ಈ ಪ್ರವೃತ್ತಿಯನ್ನು ಸರಿಗೊಳಿಸದಿದ್ದಲ್ಲಿ, ಈ ಯೋಜನೆಗಳು ಮುಂದಿನ ದಿನಗಳಲ್ಲಿ ಆರ್ಥಿಕತೆಗೆ ಹೊಡೆತ ನೀಡಲಿದೆ.

ರಾಜ್ಯದ ಹಣಕಾಸಿನ ಸಮಸ್ಯೆಗಳು : 1980ರ ದಶಕದ ಬಳಿಕ ಹಣಕಾಸಿನ ಕೊರತೆಯು ಅಧಿಕಗೊಂಡಿದ್ದು, ಕೇಂದ್ರ ಮತ್ತು ರಾಜ್ಯಗಳ ಒಟ್ಟು ಕೊರತೆಯು ಈಗ ಜಿಡಿಪಿಯ 10% ರಷ್ಟಿದೆ. ಇದು ತೀವ್ರ ನಿರ್ಬಂಧಗಳನ್ನುಂಟು ಮಾಡುತ್ತದೆ.

ಜನರಿಗೆ ನಿಯಮಿತ ಆದಾಯದ ಮೂಲವಿಲ್ಲದಿದ್ದಾಗ ಪಿಂಚಣಿ ಯೋಜನೆಗಳು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ಥಿರತೆ ಒದಗಿಸುತ್ತವೆ. ನಿವೃತ್ತಿ ಯೋಜನೆಯು ಜನರು ಹೆಮ್ಮೆಯಿಂದ ಮತ್ತು ಮುಂದುವರಿದ ವರ್ಷಗಳಲ್ಲಿ ಉತ್ತಮವಾಗಿ ಬದುಕುವುದನ್ನು ಖಾತ್ರಿಗೊಳಿಸುತ್ತದೆ.

ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗದ ಪ್ರಕಾರ, ವಿಶ್ವದ ಜೀವಿತಾವಧಿ 2050ರ ವೇಳೆಗೆ ಪ್ರಸ್ತುತ 65 ವರ್ಷದಿಂದ 75 ವರ್ಷಗಳನ್ನು ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಪರಿಸ್ಥಿತಿಗಳು ಜೀವಿತಾವಧಿಯನ್ನು ಹೆಚ್ಚಿಸಿವೆ.

ಪರಿಣಾಮವಾಗಿ ನಿವೃತ್ತಿಯ ನಂತರದ ವರ್ಷಗಳ ಸಂಖ್ಯೆ ಹೆಚ್ಚಾಗುತ್ತದೆ. ಹೆಚ್ಚಿನ ನಾಗರಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಭಾರತ ಸರ್ಕಾರವು ಎಲ್ಲಾ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆಗಳಲ್ಲಿನ ಪುನರಾವರ್ತನೆಗಳತ್ತ ಗಮನ ಹರಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.