ನಾಸಿಕ್ (ಮಹಾರಾಷ್ಟ್ರ): ಕೊರೊನಾ ಬಗ್ಗೆ ಸಾಮಾನ್ಯ ಜನ ಓದಿ, ನೋಡಿ ತಿಳಿದುಕೊಂಡ್ರೆ, ಅಂಧರಿಗೆ ಇದು ಅಸಾಧ್ಯ. ಈ ನಿಟ್ಟಿನಲ್ಲಿ ನಾಸಿಕ್ ನಗರದ ಸಂಸ್ಥೆಯೊಂದು ಅಂಧರ ಅನುಕೂಲಕ್ಕಾಗಿ ಬ್ರೈಲ್ ಕೊರೊನಾ ಕರಪತ್ರವನ್ನು ಸಿದ್ಧಪಡಿಸಿದೆ.
ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಬಗ್ಗೆ ಪತ್ರಿಕೆಗಳು, ಮಾಧ್ಯಮಗಳು, ಸುದ್ದಿ ಪೋರ್ಟಲ್‌ಗಳು ಸುದ್ದಿ ಬಿತ್ತರಿಸುತ್ತಿವೆ. ಇದರಿಂದಾಗಿ ಸಾಮಾನ್ಯ ಜನರು ಕೊರೊನಾ ಬಗ್ಗೆ ಜಾಗೃತಗೊಳ್ಳುತ್ತಾರೆ. ಆದರೆ, ದೃಷ್ಠಿಹೀನರು ಓದಲು ಸಾಧ್ಯವಾಗದ ಹಿನ್ನೆಲೆ, ನಾಸಿಕ್ನಲ್ಲಿರುವ ಬ್ಲೈಂಡ್ ವೆಲ್ಫೇರ್ ಆರ್ಗನೈಸೇಶನ್ ಇಂಡಿಯಾ, ದೃಷ್ಟಿಹೀನ ಮಕ್ಕಳಿಗಾಗಿ ಬ್ರೈಲ್ ಕೊರೊನಾ ಕರಪತ್ರವನ್ನು ಸಿದ್ಧಪಡಿಸಿ ಜಾಗೃತಿ ಮೂಡಿಸುತ್ತಿದೆ.
ಕೊರೊನಾ ಬಿಕ್ಕಟ್ಟಿನ ಭೀಕರವಾದ ವಾಸ್ತವತೆಯ ಬಗ್ಗೆ ಅಂಧರಿಗೆ ತಿಳಿಸುವ ನಿಟ್ಟಿನಲ್ಲಿ, ಈ ಸಂಸ್ಥೆ ಕಾರ್ಯನಿರತರಾಗಿ ಪುಸ್ತಕವನ್ನು ಬಿಡುಗಡೆ ಮಾಡಿದೆ. 1,500ಕ್ಕೂ ಹೆಚ್ಚು ಪ್ರತಿಗಳನ್ನು ಈಗಾಗಲೇ ಅಂಧ ಮಕ್ಕಳಿಗೆ ವಿತರಿಸಲಾಗಿದೆ. ದಿವ್ಯಾಂಗ ವ್ಯಕ್ತಿಗಳಿಗೆ ಬ್ರೈಲ್ ಸ್ಪರ್ಶದಿಂದಾಗಿ ಓದುವ ಮತ್ತು ಬರೆಯಲು ಸಹಕಾರಿಯಾಗಿದೆ. ಅಂಧರಿಗೆ ಇದು ತೀವ್ರ ಸಹಕಾರಿಯಾಗಿದೆ ಎಂದು ಹೇಳಲಾಗಿದೆ.
ಈ ಕರಪತ್ರವು ದೃಷ್ಠಿಹೀನರಿಗೆ ಪ್ರಯೋಜನಕಾರಿಯಾಗಿದೆ. ಕೊರೊನಾ ಬಿಕ್ಕಟ್ಟಿನ ನಡುವೆ ಎಚ್ಚರದಿಂದಿರಲು ಸಹಾಯ ಮಾಡುತ್ತದೆ ಎಂದು ಭಾರತದ ಕುರುಡು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಅರುಣ್ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.