ನಂದಗಾಂವ್(ಮಹಾರಾಷ್ಟ್ರ): ಇಲ್ಲಿನ ನಂದಗಾಂವ್ ತಾಲೂಕಿನ ವಖರಿಯಲ್ಲಿ ಒಂದೇ ಕುಟುಂಬದ 4 ಸದಸ್ಯರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಕೊಲೆಯಾಗಿದ್ದಾರೆ.
ಕೊಲೆಯಾದವರನ್ನು 37 ವರ್ಷದ ಸಮಾಧನ್, ಭರ್ತಬಾಯಿ ಚವ್ಹಾಣ್ (32), ಗಣೇಶ್ ಚವ್ಹಾಣ್ (6), ಅರಿಹಿ ಚವ್ಹಾಣ್ (4) ಎಂದು ಗುರುತಿಸಲಾಗಿದೆ. ಭಯಾನಕವಾಗಿ ನಡೆದ ಕೊಲೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಾಮೂಹಿಕ ಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ಬಳಿಕ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ.