ETV Bharat / bharat

ವಿಕ್ರಮ್​ ಲ್ಯಾಂಡರ್ ಚಿತ್ರ ತೆಗೆದ ನಾಸಾ ಆರ್ಬಿಟರ್..!  ಫೋಟೋದಲ್ಲೇನಿದೆ..?

ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕುತ್ತಿರುವ ನಾಸಾದ ಲುನಾರ್ ರಿಕನಾಯ್​ಸನ್ಸ್(ಎಲ್​ಆರ್​ಒ) ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇರುವ ಜಾಗದ ಸಮೀಪದಲ್ಲಿ ಸೆಪ್ಟೆಂಬರ್ 17ರಂದು ಹಾದು ಹೋಗಿದೆ.

ವಿಕ್ರಮ್​ ಲ್ಯಾಂಡರ್
author img

By

Published : Sep 20, 2019, 5:03 AM IST

ಹ್ಯೂಸ್ಟನ್/ನವೆಹಲಿ: ಚಂದ್ರಯಾನ 2ರ ನಿರ್ಣಾಯಕ ಭಾಗವಾಗಿದ್ದ ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಹದಿಮೂರು ದಿನಗಳೇ ಕಳೆದಿವೆ. ಇಸ್ರೋ ವಿಜ್ಞಾನಿಗಳ ಪ್ರಯತ್ನ ಮುಂದುವರೆದಿದ್ದು, ಸಾಧ್ಯತೆ ತೀರಾ ಕ್ಷೀಣವಾಗಿದೆ.

ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿಲ್ಲ ಎನ್ನುವ ವಿಚಾರ ಇಸ್ರೋ ಆರ್ಬಿಟರ್ ಕಳುಹಿಸಿದ ಫೋಟೋದಿಂದ ಖಚಿತವಾಗಿದ್ದರೂ ಇನ್ನಷ್ಟು ಸ್ಪಷ್ಟವಾದ ಚಿತ್ರಕ್ಕಾಗಿ ಇಸ್ರೋ ಅಮೆರಿಕದ ನಾಸಾ ಮೊರೆ ಹೋಗಿತ್ತು.

'ಸೌರವ್ಯೂಹ'ವನ್ನು ಒಗ್ಗೂಡಿ ಭೇದಿಸೋಣ: ಇಸ್ರೋಗೆ ನಾಸಾ ಬಲ

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲುನಾರ್ ರಿಕನಾಯ್​ಸನ್ಸ್(ಎಲ್​ಆರ್​ಒ) ಆರ್ಬಿಟರ್, ವಿಕ್ರಮ್ ಲ್ಯಾಂಡರ್ ಇರುವ ಜಾಗದ ಸಮೀಪದಲ್ಲಿ ಸೆಪ್ಟೆಂಬರ್ 17ರಂದು ಹಾದು ಹೋಗಿದೆ.

ನಾಸಾ ಆರ್ಬಿಟರ್​ಗೆ ಕಂಡಿದ್ದೇನು..?

ನಾಸಾದ ಆರ್ಬಿಟರ್​ ಇಸ್ರೋ ಆರ್ಬಿಟರ್​ಗಿಂತ ವಿಕ್ರಮ್​ ಲ್ಯಾಂಡರ್​​ಗೆ ಹೆಚ್ಚು ಸಮೀಪವಿರುವುದರಿಂದ ಇಸ್ರೋ ತಂಡ ಸೆಪ್ಟೆಂಬರ್​ 17ರಂದು ಹೆಚ್ಚಿನ ನಿರೀಕ್ಷೆ ಇರಿಸಿದ್ದರು.

ನಾಸಾದ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇದೆ ಎನ್ನಲಾದ ಪ್ರದೇಶವನ್ನು ಹಾದು ಹೋಗುವ ವೇಳೆಗೆ ಸಂಜೆಯಾಗಿತ್ತು. ಹೀಗಾಗಿ ಆರ್ಬಿಟರ್ ಕ್ಲಿಕ್ಕಿಸಿದ ಫೋಟೋ ಅಷ್ಟೊಂದು ಸ್ಪಷ್ಟವಾಗಿಲ್ಲ ಮತ್ತು ಇಸ್ರೋ ತಂಡಕ್ಕೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

'ಭಾರತ ನಿಮ್ಮೊಂದಿಗಿದೆ, ಎದೆಗುಂದಬೇಡಿ...' ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಮೋದಿ

ಹಲವು ಫೋಟೋ ಕ್ಲಿಕ್ಕಿಸಿದ ನಾಸಾ ಆರ್ಬಿಟರ್:

ನಾಸಾ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇರುವ ಸ್ಥಳದ ಹಲವು ಫೋಟೋಗಳನ್ನು ತೆಗೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಎಲ್​ಆರ್​ಒ ಯೋಜನೆಯ ಮುಖ್ಯ ಇಂಜಿನಿಯರ್ ಜಾನ್ ಕೆಲ್ಲರ್​, ನಮ್ಮ ಆರ್ಬಿಟರ್ ತೆಗೆದಿರುವ ಫೋಟೋಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಲಿದ್ದೇವೆ. ಅದೇ ಸ್ಥಳದ ಹಳೆಯ ಚಿತ್ರಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಹೊಸ ಚಿತ್ರದಲ್ಲಿ ಲ್ಯಾಂಡರ್ ಇದೆಯೋ, ಇಲ್ಲವೋ ಎನ್ನುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.​​

ನಾಳೆಯೇ ಡೆಡ್​ಲೈನ್​​...!

ಇಸ್ರೋ ಚಂದ್ರಯಾನದ ಲ್ಯಾಂಡರ್ ಸೆಪ್ಟೆಂಬರ್ 7ರ ನಸುಕಿನಲ್ಲಿ ಚಂದ್ರನ ಮೇಲ್ಮೈ ಸ್ಪರ್ಶಿಸಿ ಕೆಲ ಗಂಟೆಗಳಲ್ಲಿ ರೋವರ್ ಹೊರಬಂದು ಕಾರ್ಯ ಆರಂಭಿಸಬೇಕಿತ್ತು. ಆದರೆ ಕೊನೇ ಹಂತದಲ್ಲಿ ಯೋಜನೆ ಉಲ್ಟಾ ಹೊಡೆದಿತ್ತು.

NASA Reviews Images Of Chandrayaan-2 Landing Site
ಚಂದ್ರಯಾನ 2 ರಾಕೆಟ್

ಇಸ್ರೋ ವಿಜ್ಞಾನಿಗಳು ಹೇಳಿಕೊಂಡಂತೆ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಂದು ಚಂದ್ರನ ದಿನ ಅರ್ಥಾತ್ ಭೂಮಿಯ ಹದಿನಾಲ್ಕು ದಿನ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಶನಿವಾರದ ಬಳಿಕ ಚಂದ್ರನಲ್ಲಿ ಸಂಪೂರ್ಣ ಕತ್ತಲು ಕವಿಯಲಿದೆ. ಹೀಗಾಗಿ ಚಂದ್ರಯಾನ 2 ಯೋಜನೆ ಪರಿಪೂರ್ಣ ಯಶಸ್ಸು ಸಾಧಿಸುವಲ್ಲಿ ವಿಜ್ಞಾನಿಗಳು ಕೊಂಚ ಹಿನ್ನಡೆ ಅನುಭವಿಸಿದ್ದಾರೆ.

ಭಾರತೀಯರ ಕನಸು, ಭರವಸೆಯನ್ನು ಹೊತ್ತೊಯ್ಯುವ ಕಾರ್ಯ ಮುಂದುವರೆಯಲಿದೆ: ಇಸ್ರೋ

ಚಂದ್ರನಲ್ಲಿ ರಾತ್ರಿ ಉಷ್ಣಾಂಶ -200 ಡಿಗ್ರಿ..!

ಸೆಪ್ಟೆಂಬರ್ 21ರಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸಲಿದ್ದು, ಅತಿಯಾದ ಚಳಿಗೆ ಲ್ಯಾಂಡರ್ ಹಾಗೂ ರೋವರ್ ಕಾರ್ಯ ಶಾಶ್ವತವಾಗಿ ಕೊನೆಗೊಳ್ಳಲಿದೆ. ಆದರೆ ಲ್ಯಾಂಡಿಂಗ್ ಕೊನೆ ಹಂತದಲ್ಲಿ ಕೈಕೊಟ್ಟದ್ದರಿಂದ ಅಂತಿಮ ಹಂತದ ಯೋಜನೆ ಕಾರ್ಯಗತವಾಗಲಿಲ್ಲ.

ಇನ್ನೊಂದು ಪ್ರಮುಖ ಅಂಶವೆಂದರೆ ಚಂದ್ರನಲ್ಲಿ ರಾತ್ರಿಗಳು ಅತಿಯಾದ ಚಳಿಯಿಂದ ಕೂಡಿರುತ್ತವೆ. ಉಷ್ಣಾಂಶ -200 ಡಿಗ್ರಿಗೆ ಕುಸಿತವಾಗಲಿದೆ. ಹೀಗಾಗಿ ಈ ರಾತ್ರಿಗೂ ಮುನ್ನವೇ ಲ್ಯಾಂಡರ್ ಸಂಪರ್ಕ ಸಾಧ್ಯವಾಗಬೇಕಿತ್ತು.

Intro:Body:

ಹ್ಯೂಸ್ಟನ್(ಅಮೆರಿಕ): ಚಂದ್ರಯಾನ 2ರ ನಿರ್ಣಾಯಕ ಭಾಗವಾಗಿದ್ದ ಸಾಫ್ಟ್ ಲ್ಯಾಂಡಿಂಗ್ ವೇಳೆ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಹದಿಮೂರು ದಿನಗಳೇ ಕಳೆದಿವೆ. ಇಸ್ರೋ ವಿಜ್ಞಾನಿಗಳ ಪ್ರಯತ್ನ ಮುಂದುವರೆದಿದ್ದು, ಸಾಧ್ಯತೆ ತೀರಾ ಕ್ಷೀಣವಾಗಿದೆ.

ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿಲ್ಲ ಎನ್ನುವ ವಿಚಾರ ಆರ್ಬಿಟರ್ ಕಳುಹಿಸಿದ ಫೋಟೋದಿಂದ ಖಚಿತವಾಗಿದ್ದರೂ ಇನ್ನಷ್ಟು ಸ್ಪಷ್ಟವಾದ ಚಿತ್ರಕ್ಕಾಗಿ ಇಸ್ರೋ ಅಮೆರಿಕದ ನಾಸಾ ಮೊರೆ ಹೋಗಿತ್ತು.

ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕುತ್ತಿರುವ ನಾಸಾದ ಲುನಾರ್ ರಿಕನಾಯ್​ಸನ್ಸ್(ಎಲ್​ಆರ್​ಒ) ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇರುವ ಜಾಗದ ಸಮೀಪದಲ್ಲಿ ಸೆಪ್ಟೆಂಬರ್ 17ರಂದು ಹಾದು ಹೋಗಿದೆ.

ನಾಸಾ ಆರ್ಬಿಟರ್​ಗೆ ಕಂಡಿದ್ದೇನು..?

ನಾಸಾದ ಆರ್ಬಿಟರ್​ ಇಸ್ರೋ ಆರ್ಬಿಟರ್​ಗಿಂತ ವಿಕ್ರಮ್​ ಲ್ಯಾಂಡರ್​​ಗೆ ಹೆಚ್ಚು ಸಮೀಪವಿರುವುದರಿಂದ ಇಸ್ರೋ ತಂಡ ಸೆಪ್ಟೆಂಬರ್​ 17ರಂದು ಹೆಚ್ಚಿನ ನಿರೀಕ್ಷೆ ಇರಿಸಿದ್ದರು. 

ನಾಸಾದ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇದೆ ಎನ್ನಲಾದ ಪ್ರದೇಶವನ್ನು ಹಾದು ಹೋಗುವ ವೇಳೆಗೆ ಸಂಜೆಯಾಗಿತ್ತು. ಹೀಗಾಗಿ ಆರ್ಬಿಟರ್ ಕ್ಲಿಕ್ಕಿಸಿದ ಫೋಟೋ ಅಷ್ಟೊಂದು ಸ್ಪಷ್ಟವಾಗಿಲ್ಲ ಮತ್ತು ಇಸ್ರೋ ತಂಡಕ್ಕೆ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಹಲವು ಫೋಟೋ ಕ್ಲಿಕ್ಕಿಸಿದ ನಾಸಾ ಆರ್ಬಿಟರ್:

ನಾಸಾ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇರುವ ಸ್ಥಳದ ಹಲವು ಫೋಟೋಗಳನ್ನು ತೆಗೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಎಲ್​ಆರ್​ಒ ಯೋಜನೆಯ ಮುಖ್ಯ ಇಂಜಿನಿಯರ್ ಜಾನ್ ಕೆಲ್ಲರ್​, ನಮ್ಮ ಆರ್ಬಿಟರ್ ತೆಗೆದಿರುವ ಫೋಟೋಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಲಿದ್ದೇವೆ. ಅದೇ ಸ್ಥಳದ ಹಳೆಯ ಚಿತ್ರಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಚಿತ್ರದಲ್ಲಿ ಲ್ಯಾಂಡರ್ ಇದೆಯೋ, ಇಲ್ಲವೋ ಬಗ್ಗೆ ಕೂಲಂಕಷವಾಗಿ ನೋಡಲಾಗುವುದು ಎಂದು ಹೇಳಿದ್ದಾರೆ.​​

ನಾಳೆಯೇ ಡೆಡ್​ಲೈನ್​​...!

ಇಸ್ರೋ ಚಂದ್ರಯಾನದ ಲ್ಯಾಂಡರ್ ಸೆಪ್ಟೆಂಬರ್ 7ರ ನಸುಕಿನಲ್ಲಿ ಚಂದ್ರನ ಮೇಲ್ಮೈ ಸ್ಪರ್ಶಿಸಿ ಕೆಲ ಗಂಟೆಗಳಲ್ಲಿ ರೋವರ್ ಹೊರಬಂದು ಕಾರ್ಯ ಆರಂಭಿಸಬೇಕಿತ್ತು. ಆದರೆ ಕೊನೇ ಹಂತದಲ್ಲಿ ಯೋಜನೆ ಉಲ್ಟಾ ಹೊಡೆದಿದೆ.

ಇಸ್ರೋ ವಿಜ್ಞಾನಿಗಳು ಹೇಳಿಕೊಂಡಂತೆ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಂದು ಚಂದ್ರನ ದಿನ ಅರ್ಥಾತ್ ಭೂಮಿಯ ಹದಿನಾಲ್ಕು ದಿನ ಕಾರ್ಯ ನಿರ್ವಹಿಸಲಿದೆ. 

ಸದ್ಯ ಹದಿಮೂರು ದಿನಗಳು ಮುಕ್ತಾಯವಾಗಿದ್ದು, ಇಂದು ಯೋಜನೆಯ ಅಂತಿಮ ದಿನವಾಗಿದೆ. ಲ್ಯಾಂಡರ್ ಜೊತೆಗಿನ ಸಂಪರ್ಕ ಸಾಧಿಸಿದರೂ ನಾಳೆಯಿಂದ ಚಂದ್ರನಲ್ಲಿ ಕತ್ತಲು ಆವರಿಸುತ್ತದೆ. 

ಚಂದ್ರನಲ್ಲಿ ರಾತ್ರಿ ಉಷ್ಣಾಂಶ -200 ಡಿಗ್ರೀ..!

ಸೆಪ್ಟೆಂಬರ್ 21ರಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಕತ್ತಲು ಆವರಿಸಲಿದ್ದು, ಅತಿಯಾದ ಚಳಿಗೆ ಲ್ಯಾಂಡರ್ ಹಾಗೂ ರೋವರ್ ಕಾರ್ಯ ಶಾಶ್ವತವಾಗಿ ಕೊನೆಗೊಳ್ಳಲಿದೆ. ಆದರೆ ಲ್ಯಾಂಡಿಂಗ್ ಕೊನೆ ಹಂತದಲ್ಲಿ ಕೈಕೊಟ್ಟದ್ದರಿಂದ ಅಂತಿಮ ಹಂತದ ಯೋಜನೆ ಕಾರ್ಯಗತವಾಗಲಿಲ್ಲ.

ಇನ್ನೊಂದು ಪ್ರಮುಖ ಅಂಶವೆಂದರೆ ಚಂದ್ರನಲ್ಲಿ ರಾತ್ರಿಗಳು ಅತಿಯಾದ ಚಳಿಯಿಂದ ಕೂಡಿರುತ್ತವೆ. ಉಷ್ಣಾಂಶ -200 ಡಿಗ್ರೀಗೆ ಕುಸಿತವಾಗಲಿದೆ. ಹೀಗಾಗಿ ಈ ರಾತ್ರಿಗೂ ಮುನ್ನವೇ ಲ್ಯಾಂಡರ್ ಸಂಪರ್ಕ ಸಾಧ್ಯವಾಗಬೇಕಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.