ETV Bharat / bharat

ವಿಶೇಷ ಅಂಕಣ: ಮೋದಿ ವಿದೇಶಿ ನೀತಿ ಎಂಬ ಶಸ್ತ್ರಾಗಾರದಲ್ಲಿ ಪಾಮ್ ಆಯಿಲ್‌ ಎಂಬ ಹೊಸ ಅಸ್ತ್ರ?

ಜಮ್ಮು ಮತ್ತು ಕಾಶ್ಮೀರ ಕುರಿತಂತೆ ಭಾರತದ ವಿರುದ್ಧ ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮದ್‌ ನೀಡಿದ ಹೇಳಿಕೆಗಳಿಗೆ ಮೋದಿ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಇದಕ್ಕೆ ಮಲೇಷ್ಯಾ ಪ್ರಧಾನಿ ಭಾರಿ ಬೆಲೆಯನ್ನೂ ಈಗ ತೆರುತ್ತಿದ್ದಾರೆ. ಪಾಮ್ ಆಯಿಲ್‌ ಉತ್ಪಾದನೆ ಮತ್ತು ರಫ್ತಿನಲ್ಲಿ ಮಲೇಷ್ಯಾ ಇಡಿ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ. ಆದರೆ ಈಗ ಮಲೇಷ್ಯಾ ಕೋಟ್ಯಂತರ ರೂಪಾಯಿ ವಹಿವಾಟನ್ನು ಕಳೆದುಕೊಳ್ಳುವಂತಾಗಿದೆ.

author img

By

Published : Jan 9, 2020, 9:31 PM IST

Ban on Malaysian refined palm oil imports, ಮಲೇಷಿಯಾ ಪಾಮ್ ಆಯಿಲ್‌ ಆಮದು ನಿಷೇಧ
ಮಲೇಷಿಯಾ ಪಾಮ್ ಆಯಿಲ್‌ ಆಮದು ನಿಷೇಧ

ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ನೀತಿಯಲ್ಲಿ ಆಮದು ಮಾಡಿದ ಸಂಸ್ಕರಿತ ಪಾಮ್ ಆಯಿಲ್‌ ಮತ್ತು ಪಾಮೋಲಿನ್‌ ಮೇಲೆ ಹೇರಿರುವ ನಿರ್ಬಂಧ ಈಗ ಹೊಸ ಅಸ್ತ್ರದ ರೂಪ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ದೇಶಿ ನೀತಿಯಲ್ಲಿ ವ್ಯಾಪಾರವನ್ನು ಅಸ್ತ್ರವನ್ನಾಗಿ ಭಾರತ ಬಳಸಿಕೊಳ್ಳುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಕುರಿತಂತೆ ಭಾರತದ ವಿರುದ್ಧ ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮದ್‌ ನೀಡಿದ ಹೇಳಿಕೆಗಳಿಗೆ ಮೋದಿ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಇದಕ್ಕೆ ಮಲೇಷ್ಯಾ ಪ್ರಧಾನಿ ಭಾರಿ ಬೆಲೆಯನ್ನೂ ಈಗ ತೆರುತ್ತಿದ್ದಾರೆ. ಪಾಮ್ ಆಯಿಲ್‌ ಉತ್ಪಾದನೆ ಮತ್ತು ರಫ್ತಿನಲ್ಲಿ ಮಲೇಷ್ಯಾ ಇಡಿ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ. ಆದರೆ ಈಗ ಮಲೇಷ್ಯಾ ಕೋಟ್ಯಂತರ ರೂಪಾಯಿ ವಹಿವಾಟನ್ನು ಕಳೆದುಕೊಳ್ಳುವಂತಾಗಿದೆ. ಮಲೇಷ್ಯಾದಿಂದ ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಪಾಮ್ ಆಯಿಲ್ ಮತ್ತು ಪಾಮೋಲಿನ್‌ ಆಮದು ಆಗುತ್ತಿತ್ತು.

ಇದೇ ವೇಳೆ ಭಾರತದ ರಿಫೈನರಿಗಳಿಗೆ ಇಂಡೋನೇಷ್ಯಾ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ಪಾಮ್‌ ಎಣ್ಣೆಯನ್ನು ರಫ್ತು ಮಾಡುವ ಅವಕಾಶವನ್ನು ಪಡೆದಿದೆ. ಕೆಲವು ವರ್ಷಗಳ ಹಿಂದಿನವರೆಗೂ ಭಾರತದ ಪಾಮ್ ಆಯಿಲ್ ಆಮದಿನಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತ್ತು. ಭಾರತದ ಒಟ್ಟು ಮೂರನೇ ಎರಡರಷ್ಟು ಪಾಮ್ ಆಯಿಲ್ ಅನ್ನು ಇಂಡೋನೇಷ್ಯಾದಿಂದ ಭಾರತ ಪಡೆಯುತ್ತಿತ್ತು. ಆದರೆ ಸಂಸ್ಕರಿಸಿದ ಪಾಮ್ ಎಣ್ಣೆಯ ಮೇಲೆ ಆಮದು ಸುಂಕ ಇಳಿಕೆ ಮಾಡಿದ್ದರಿಂದಾಗಿ ಮಲೇಷ್ಯಾ ಭಾರಿ ಪ್ರಮಾಣದಲ್ಲಿ ಅನುಕೂಲ ಪಡೆಯಿತು.

ಆದರೆ ಭಾರತದ ಆಂತರಿಕ ನೀತಿಗಳ ಬಗ್ಗೆ ಇಂಡೋನೇಷ್ಯಾ ಯಾವುದೇ ವ್ಯತಿರಿಕ್ತ ನಿಲುವನ್ನು ವ್ಯಕ್ತಪಡಿಸುವುದಿಲ್ಲ. ಇಂಡೋನೇಷ್ಯಾ ವಿಶ್ವದ ಅತಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ದೇಶವಾದರೂ ಭಾರತದ ನಿಲುವಿಗೆ ಅದು ವಿಭಿನ್ನ ನಿಲುವನ್ನು ಪ್ರಕಟಿಸಿಲ್ಲ. ಆಸಕ್ತಿಕರ ಸಂಗತಿಯೆಂದರೆ ಭಾರತ ಸರ್ಕಾರ ವಾಣಿಜ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಮಲೇಷ್ಯಾ ದೇಶದ ಹೆಸರನ್ನು ನಮೂದಿಸಿಲ್ಲ. ಆದರೆ ಅಧಿಸೂಚನೆಯ ಉದ್ದೇಶ ಸ್ಪಷ್ಟವಾಗಿಯೇ ಕಾಣಿಸುವಂತಿದೆ. ಸಂಸ್ಕರಿಸಿದ ಪಾಮ್ ಆಯಿಲ್‌ ಆಮದು ಅನ್ನು ನಿರ್ಬಂಧಿತ ವಿಭಾಗದಿಂದ ಉಚಿತ ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ.

ಈವರೆಗೆ, ಭಾರತವು ಸಂಸ್ಕರಿಸಿದ ಬ್ಲೀಚ್‌ ಮಾಡಿದ ಡಿಯೋಡರೈಸ್ ಮಾಡಿದ ಪಾಮ್ ಎಣ್ಣೆ ಮತ್ತು ಪಾಮೋಲಿನ್ ಅನ್ನು ಮಲೇಷ್ಯಾದಿಂದ ಆಮದು ಮಾಡಲು ಅವಕಾಶ ನೀಡುತ್ತಿತ್ತು. ಮಲೇಷ್ಯಾದಿಂದ ಆಮದು ಮಾಡಲು ಯಾವುದೇ ನಿರ್ದಿಷ್ಟ ಲೈಸೆನ್ಸ್‌ ಕೂಡ ಅಗತ್ಯವಿರಲಿಲ್ಲ.

ಯಾಕೆ ಮಹತಿರ್‌ ಬಗ್ಗೆ ಮೋದಿಗೆ ಬೇಸರವಾಗಿದೆ?

94 ವರ್ಷ ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್‌ ಅಧಿಕಾರಕ್ಕೆ ಏರಿದಾಗಿನಿಂದಲೂ ಇಡೀ ವಿಶ್ವದ ಎಲ್ಲ ಮುಸ್ಲಿಮರ ಧ್ವನಿಯಾಗಿ ಹೊರಹೊಮ್ಮಬೇಕು ಎಂದು ಬಯಸುತ್ತಿದ್ದರು. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಕುರಿತ ಮೋದಿ ಸರ್ಕಾರ ನೀತಿಗಳನ್ನು ಟೀಕಿಸಿದ್ದರು. ಅಲ್ಲದೆ ಕಾಶ್ಮೀರವನ್ನು ಭಾರತ ದಾಳಿ ನಡೆಸಿ ಆಕ್ರಮಿಸಿಕೊಂಡಿದೆ ಎಂದು ಟೀಕಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 370ನೇ ವಿಧಿ ಹಿಂಪಡೆದ ನಂತರದಲ್ಲಿ ಈ ಬೆಳವಣಿಗೆಗಳು ನಡೆದಿದ್ದವು. ಅಷ್ಟೇ ಅಲ್ಲ, ನಂತರದಲ್ಲಿ ಮಹತಿರ್‌, ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ ಟೀಕಿಸಿದ್ದರು.

ಮಹತಿರ್ ನೀಡಿದ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಈ ಬಗ್ಗೆ ಮೋದಿ ಅಸಮಾಧಾನ ವ್ಯಕ್ತಪಡಿಸಿದ ನಂತರ ಮಹತಿರ್ ಹೇಳಿಕೆಯನ್ನು ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿತ್ತು. ಅಂದಿನಿಂದಲೂ ಮಹತಿರ್ ಬಗ್ಗೆ ಮೋದಿ ತೀವ್ರ ಅಸಮಾಧಾನ ಹೊಂದಿದ್ದಾರೆ. ಇನ್ನೊಂದೆಡೆ ಭಾರತದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿ ಮುಸ್ಲಿಂ ಧರ್ಮಗುರು ಝಾಕಿರ್ ನಾಯ್ಕ್‌ಗೆ ಮಲೇಷ್ಯಾ ವಾಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ನಿಟ್ಟಿನಲ್ಲಿ ಮಲೇಷ್ಯಾ ಸಹಕಾರ ನೀಡುತ್ತಿಲ್ಲ.

ಮಹತಿರ್‌ಗೂ ಮೊದಲು ಮಲೇಷ್ಯಾದಲ್ಲಿ ಪ್ರಧಾನಿಯಾಗಿದ್ದ ನಜೀಬ್ ರಝಾಕ್‌ ಅವಧಿಯಲ್ಲಿ ಭಾರತದಿಂದ ಉತ್ತಮ ಬೆಂಬಲವನ್ನು ಮಲೇಷ್ಯಾ ಪಡೆದಿತ್ತು. ಮೋದಿ ರೂಪಿಸಿದ ಲುಕ್ ಈಸ್ಟ್‌ ನೀತಿಯಲ್ಲಿ ಮಲೇಷ್ಯಾ ಹೆಚ್ಚಿನ ಗಮನ ಸೆಳೆದಿತ್ತು. ಆದರೆ ಪಕಟನ್ ಹರಪನ್ ಸರ್ಕಾರವು 2018 ಮೇಯಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪರಿಸ್ಥಿತಿ ಸಂಪೂರ್ಣ ಬದಲಾವಣೆ ಕಂಡಿತು.

ಸುಮಾರು 15ಕ್ಕೂ ಹೆಚ್ಚು ವರ್ಷಗಳ ನಂತರ ಮಲೇಷ್ಯಾದ ಪ್ರಧಾನಿಯಾಗಿ ಮಹತಿರ್ ಅಧಿಕಾರಕ್ಕೆ ಏರಿದ್ದರು. ಅವರು ಮಲೇಷ್ಯಾದ ವಿದೇಶಿ ನೀತಿಯನ್ನು ಬದಲಾವಣೆ ಮಾಡುವುದಾಗಿ ನಿರ್ಧರಿಸಿದ್ದರು. ತಾನು ಮುಸ್ಲಿಮ್‌ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆಯಬೇಕು ಎಂದು ಬಯಸಿದ್ದರು. ಇದೇ ಕಾರಣಕ್ಕೆ ಅವರು ಪಾಕಿಸ್ತಾನದ ಜೊತೆಗೆ ಹೆಚ್ಚು ಒಡನಾಟ ಮುಂದುವರಿಸಿದರು. ಆದರೆ ಇದು ಭಾರತದ ಕಣ್ಣನ್ನು ಕೆಂಪಗಾಗಿಸಿತು.

ಸದ್ಯ ಮಲೇಷ್ಯಾದ ಆರ್ಥಿಕತೆಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೋದಿ ಒತ್ತಡಕ್ಕೆ ಮಹತಿರ್ ಮಣಿಯುತ್ತಾರೆಯೇ ಎಂಬುದು ಅತ್ಯಂತ ಪ್ರಮುಖ ಪ್ರಶ್ನೆಯಾಗಿದೆ. ಆದರೆ ಮುಸ್ಲಿಂ ರಾಷ್ಟ್ರಗಳು ಮಲೇಷ್ಯಾಗೆ ಬೆಂಬಲ ನೀಡುತ್ತಿರುವುದರಿಂದ ಬಾರತದ ಒತ್ತಡಕ್ಕೆ ಮಣಿಯುವ ಸಾಧ್ಯತೆ ಕಾಣುತ್ತಿಲ್ಲ. ಆದರೆ ಇಂಡೋನೇಷ್ಯಾಗೆ ಎಲ್ಲ ನೆರವೂ ಸಿಗುತ್ತಿದ್ದು, ತನ್ನ ವ್ಯಾಪಾರವನ್ನೆಲ್ಲ ಇಂಡೋನೇಷ್ಯಾ ಕಸಿದುಕೊಳ್ಳುತ್ತಿರುವಾಗ ನಿಸ್ಸಹಾಯಕವಾಗಿ ಮಲೇಷ್ಯಾ ನೋಡುತ್ತ ಕೂರುತ್ತದೆಯೇ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ.

ಮಹತಿರ್‌ಗೆ ಈಗಾಗಲೇ ಪಾಶ್ಚಾತ್ಯ ದೇಶಗಳಿಂದ ಭಾರಿ ಪ್ರಮಾಣದಲ್ಲಿ ಒತ್ತಡ ಬರುತ್ತಿದೆ. ಪಾಮ್ ಆಯಿಲ್‌ ಭಾರಿ ಪ್ರಮಾಣದಲ್ಲಿ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ಇದರ ಜೊತೆಗೆ ಈ ಉದ್ಯಮದಲ್ಲಿ ಕಾರ್ಮಿಕ ವಲಯವನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಮತ್ತು ಮಾನವ ಹಕ್ಕುಗಳ ಸಮಸ್ಯೆ ಇದೆ ಎಂಬ ಕಾರಣಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಪಾಮ್ ಆಯಿಲ್‌ ವ್ಯಾಪಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಇನ್ನೊಂದೆಡೆ ಮಲೇಷ್ಯಾದಿಂದ ಸಂಸ್ಕರಿಸಿದ ಪಾಮ್ ಎಣ್ಣೆ ಆಮದು ನಿಷೇಧ ಮಾಡಿದ್ದರಿಂದ, ಭಾರತದಲ್ಲಿ ಖಾದ್ಯ ತೈಲದ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಭಾರತೀಯ ತೈಲ ಸಂಸ್ಕರಣೆ ಉದ್ಯಮವಂತೂ ಈಗ ಉತ್ತಮ ಸ್ಥಿತಿಯಲ್ಲಿರುವುದರಿಂದ ಖುಷಿಯಾಗಿದೆ. ಮಲೇಷ್ಯಾದಿಂದ ಸಂಸ್ಕರಿಸಿದ ಪಾಮ್ ಆಯಿಲ್‌ ಕಡಿಮೆ ದರದಲ್ಲಿ ಆಮದಾಗುತ್ತಿದ್ದ ಕಾರಣ, ಹಲವು ವರ್ಷಗಳಿಂದ ಈ ಉದ್ಯಮದ ಭಾರತದಲ್ಲಿ ಸಂಕಷ್ಟದ ಸ್ಥಿತಿಯಲ್ಲಿತ್ತು. ಈಗ ಸಂಸ್ಕರಣೆಗೆ ಅವಕಾಶ ಭಾರತದಲ್ಲೇ ಸಿಗುತ್ತಿರುವುದರಿಂದ ಈ ಉದ್ಯಮ ಉತ್ತಮ ಸ್ಥಿತಿಯಲ್ಲಿದೆ.

Please Publish this copy ASAP. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.